ದಂಡ ಕಟ್ಟಿ ಮಾದರಿಯಾದ ಪ್ರಮೋದ್ ಮಧ್ವರಾಜ್

Posted By:
Subscribe to Oneindia Kannada

ನವೆಂಬರ್ 11, ಉಡುಪಿ : ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಸ್ವ ಇಚ್ಛೆಯಿಂದ ದಂಡ ಕಟ್ಟಿ ಮಾದರಿಯಾಗಿದ್ದಾರೆ.

ಇತ್ತೀಚೆಗೆ ಬ್ರಹ್ಮವಾರದ ಕರ್ಜೆಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ಕಾರ್ಯಕರ್ತನೊಬ್ಬನ ಬೈಕ್ ಚಲಾಯಿಸಿದ್ದರು. ಆದರೆ ಆಗ ಹೆಲ್ಮೆಟ್ ಧರಿಸಿರಲಿಲ್ಲ.

Pramod madwaraj

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಪ್ರಮೋದ್ ಮಧ್ವರಾಜ್ ಅವರ ಫೋಟೊ ಸಾಂಆಜಿಕ ಜಾಲತಾಣಗಳಲ್ಲಿ ಹರಿದಾಡಿ ಸುದ್ದಿಯಾಗಿತ್ತು. ಸಚಿವರೆ ಹೀಗೆ ಕಾನುನು ಉಲ್ಲಂಘಿಸಿದರೆ ಹೇಗೆ ಎಂಬ ಚರ್ಚೆ ಪ್ರಾರಂಭವಾಗಿತ್ತು.

ಸಾಮಾಜಿಕ ಜಾಲತಾಣದ ಚರ್ಚೆ ಪ್ರಮೋದ್ ಅವರ ಗಮನಕ್ಕೆ ಬಂದ ಕೂಡಲೇ ತಾವೇ ಠಾಣೆಗೆ ತೆರಳಿ 100 ರೂಪಾಯಿ ದಂಡ ಕಟ್ಟಿದ್ದಾರೆ. ಈ ವಿಷಯವನ್ನು ಎಸ್ಪಿ ಡಾ. ಸಂಜೀವ್ ಪಾಟೀಲ್ ಅವರು ಖಚಿತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
sports minister Pramod Madvaraj paid fine for not wearing Helmet. he paid fine by self willingly.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ