ಡಿ.31ರಂದು ಉಡುಪಿ ಜಿಲ್ಲೆಯಲ್ಲಿ ಆಂಜನೇಯ ಗ್ರಾಮ ವಾಸ್ತವ್ಯ
ಉಡುಪಿ, ಡಿಸೆಂಬರ್. 27: ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಡಿಸೆಂಬರ್ 31 ರಂದು ಉಡುಪಿ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ಅಲ್ಲದೇ ಕುಂದಾಪುರ ತಾಲೂಕಿನ ವಿವಿಧ ಗಿರಿಜನ ಹಳ್ಳಿಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಸೂಚಿಸಿ ವಿವಿಧ ಇಲಾಖೆ ಹಾಗೂ ನಿಗಮಗಳಿಂದ ಸವಲತ್ತು ವಿತರಣೆ ಮಾಡಿ, ಅವತ್ತು ರಾತ್ರಿ ಮೂರೂರು ಕೊರಗರ ಕಾಲೋನಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಇದೇ ವೇಳೆ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರೂರು ಕೊರಗರ ಕಾಲೋನಿಯ ಆದಿವಾಸಿ ಬುಡಕಟ್ಟು(ಕೊರಗ) ಸಮುದಾಯದವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.












Click it and Unblock the Notifications