ಫೆ.5 ರಂದು ಮಣಿಪಾಲದಲ್ಲಿ ಹಾಫ್ ಮ್ಯಾರಾಥಾನ್

Posted By:
Subscribe to Oneindia Kannada

ಉಡುಪಿ, ಜನವರಿ 31 : ಫೆಬ್ರವರಿ 5 ರಂದು ಮಣಿಪಾಲದಲ್ಲಿ 'ಹಾಫ್ ಮ್ಯಾರಾಥಾನ್' ನಡೆಯಲಿದೆ. ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಉಡುಪಿ ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ ಸಂಸ್ಥೆಯ ಸಹಯೋಗದೊಂದಿಗೆ ಈ ಮ್ಯಾರಥಾನ್ ಜರುಗಲಿದೆ.

'ಸ್ಟ್ರೋಕ್ ಜಾಗೃತಿಗಾಗಿ ಓಟ ' ಎಂಬ ಧ್ಯೇಯವಾಕ್ಯದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದ್ದು, ಮಣಿಪಾಲದ ಗ್ರೀನ್ ನಿಂದ ಮ್ಯಾರಥಾನ್ ಓಟ ಆರಂಭಗೊಂಡು ಅಲ್ಲೇ ಸಮಾಪನಗೊಳ್ಳಲಿದೆ. ಈ ವರ್ಷದ ಮತ್ತೊಂದು ವಿಶೇಷವೆಂದರೆ ಮಣಿಪಾಲ ಮ್ಯಾರಥಾನ್ ಗೆ ಈ ಸಲ ಒಂದು ದಶಕ (10 ವರ್ಷ) ತುಂಬಿದೆ ಹೀಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.[ಮೈಸೂರಲ್ಲಿ ಹಾಫ್ ಮ್ಯಾರಥಾನ್, ಬನ್ನಿ ಭಾಗವಹಿಸಿ]

Manipal University in Manipal: Half Marathon will be held on February 5.

ಹಾಫ್ ಮ್ಯಾರಥಾನ್ ನಲ್ಲಿ ವಿಜೇತರಾದವರಿಗೆ 70 ಸಾವಿರ ಬಹುಮಾನ, ರನ್ನರ್ ಅಪ್ ಗೆ 35 ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ 20 ಸಾವಿರ ಬಹುಮಾನ ನಿಗದಿಪಡಿಸಲಾಗಿದೆ.

ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಮ್ಯಾರಾಥಾನ್ ಸ್ಪರ್ಧೆ ನಡೆಯಲಿದೆ. ಇದರ ಜೊತೆಗೆ ಹತ್ತು ಕಿಲೋ ಮೀಟರ್ ಓಟ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ 5 ಕಿಲೋ ಮೀಟರ್ ಓಟ, ಹಿರಿಯ ನಾಗರೀಕರ ಓಟ ಆಯೋಜಿಸಲಾಗಿದ್ದು ಗೆದ್ದವರಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Manipal University in Manipal, Manipal and Udupi Half Marathon is organized in collaboration with the Amateur Athletic Association. Half Marathon will be held on February 5.
Please Wait while comments are loading...