ಮಣಿಪಾಲ್ ಬಾಯ್ಸ್ ಹಾಸ್ಟೆಲ್ ನಲ್ಲಿ ಹಸ್ತಮೈಥುನ, ನೋಟಿಸ್

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಡಿಸೆಂಬರ್ 23: ಇದೊಂದು ವಿಚಿತ್ರ ಪ್ರಕರಣ. ರಾಜ್ಯದ ವಿದ್ಯಾ ಸಂಸ್ಥೆಗಳಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು. ಹೌದು. ಅಚ್ಚರಿ, ವಿಚಿತ್ರ ಆದರೂ ಇದು ಸತ್ಯ. ವಸತಿ ನಿಲಯದ ಸ್ನಾನಗೃಹಗಳಲ್ಲಿ ವಿದ್ಯಾರ್ಥಿಗಳು ಹಸ್ತ ಮೈಥುನ ಮಾಡಿಕೊಳ್ಳುತ್ತಿರುವುದರಿಂದ ಡ್ರೈನೇಜ್ ವ್ಯವಸ್ಥೆ ಕೈಕೊಟ್ಟಿದೆಯಂತೆ.

ಹೀಗಂತ ಮಣಿಪಾಲ್ ವಿಶ್ವವಿದ್ಯಾನಿಲಯದ ವಾರ್ಡನ್ ಕಲಕೋಟಿ ಎಂಬುವವರು ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸ್ನಾನಗೃಹದ ಕೊಠಡಿ ಹಾಗೂ ಅದರ ವಿನ್ಯಾಸ ಪುರುಷರ ಅಂಡಾಶಯಗಳನ್ನು ಹೊರಹಾಕಲು ವಿನ್ಯಾಸಗೊಂಡಿಲ್ಲ. ಬಾತ್ ರೂಂ ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ವೀರ್ಯಾಣುಗಳು ಕಾಣಿಸಿಕೊಂಡಿದ್ದು, ಅದನ್ನು ನಿರ್ವಹಣೆ ಮಾಡಲು ಸಾವಿರಾರು ರೂಪಾಯಿ ಖರ್ಚಾಗುತ್ತಿದೆ.[ಮಂಗಳೂರು ವಿವಿ ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ವಿದ್ಯಾರ್ಥಿ ಬಂಧನ]

Notice

ಆದ್ದರಿಂದ ಮುಂದಿನ ವರ್ಷದಿಂದ ವಸತಿ ನಿಲಯ ಶುಲ್ಕ ನಿಗದಿ ಮಾಡುವಾಗ ಬಾತ್ ರೂಂ ನಿರ್ವಹಣೆಯ ವೆಚ್ಚವೂ ಕಾಣಿಸಿಕೊಳ್ಳಲಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ. ಈ ಬಗ್ಗೆ ಅಭಿಪ್ರಾಯ ಕೇಳಲು ಒನ್ಇಂಡಿಯಾ ಕನ್ನಡ ಮಣಿಪಾಲ ಹಾಸ್ಟೆಲ್ ವಾರ್ಡನ್ ಕಲಕೋಟಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರು ಪ್ರತಿಕ್ರಿಯೆ ನೀಡಲು ಸಿಗಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Manipal university warden Kalakoti has issued a notice stating, the drainage has been blocked due to heavy masturbation in boys hostel. The notice says please Masturbate in your own room.
Please Wait while comments are loading...