ಕಸಾಯಿಖಾನೆಗೆ 15 ಕೋಟಿ ರೂ.ನೀಡಿದ ಖಾದರ್: ಸ್ಪಷ್ಟನೆ ಕೇಳಿದ ಕಾರ್ಕಳ ಶಾಸಕ ಸುನಿಲ್ ಕುಮಾರ್
ಉಡುಪಿ, ಅಕ್ಟೋಬರ್. 08: ಮಂಗಳೂರಿನ ಸ್ಮಾರ್ಟ್ ಸಿಟಿಯ ಅನುದಾನ ಅಭಿವೃದ್ಧಿಗೆ ಬಳಸಬೇಕಾಗಿತ್ತು. ಆದರೆ ಕಸಾಯಿಖಾನೆ ನಿರ್ಮಾಣಕ್ಕೆ ಹಣ ಬಳಸಿರುವ ಹಿಂದೆ ದೊಡ್ಡ ಹುನ್ನಾರ ಇದೆ. ಈ ಬಗ್ಗೆ ಸಚಿವ ಯು.ಟಿ ಖಾದರ್ ಸ್ಪಷ್ಟನೆ ಕೊಡಬೇಕು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕಾರ್ಕಳದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುನೀಲ್ ಕುಮಾರ್, 15 ಕೋಟಿ ರೂಪಾಯಿ ಹಣವನ್ನು ಕಸಾಯಿಖಾನೆಗೆ ಬಳಕೆ ಮಾಡಲು ಬಿಡುವುದಿಲ್ಲ. ಇದು ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ವಿಷಯವಲ್ಲ. ಇದರ ವಿರುದ್ಧ ಮೂರು ಜಿಲ್ಲೆಗಳಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ.
ಖಾದರ್ ತಮ್ಮ ನಿಲುವನ್ನು ಸ್ಪಷ್ಟ ಮಾಡಬೇಕು. ಹಿಂದೂ ವಿರೋಧಿ ನೀತಿಯನ್ನು ತಕ್ಷಣ ಕೈಬಿಡಬೇಕು. ಖಾದರ್ ಮತ್ತು ಅವರ ಬೆಂಬಲಿಗರು ಅಪರಾಧಿ ಚಟುವಟಿಕೆಗೆ ಬೆಂಬಲಿಸುತ್ತಿದ್ದಾರೆ. ಸರ್ಕಾರಿ ಹಣ ಅಭಿವೃದ್ಧಿಗೆ ಉಪಯೋಗವಾಗಲಿ. ಆದರೆ ಖಾದರ್ ಕಸಾಯಿಖಾನೆ ಬಗ್ಗೆ ಜಾಸ್ತಿ ಆಸಕ್ತಿ ಹೊಂದಿದ್ದಾರೆ ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಖಾದರ್ ಗೆ ಆಸಕ್ತಿಯಿಲ್ಲ. ರಾಜ್ಯದ ಜನ ಸುಂದರ ನಗರವನ್ನು ಬಯಸುತ್ತಾರೆ. ಅಕ್ರಮ ಕಸಾಯಿಖಾನೆ ಮುಚ್ಚಲು ಸರ್ಕಾರಕ್ಕೆ ತಾಕತ್ತಿಲ್ಲ. ಅಕ್ರಮ ಗೋವು ಸಾಗಾಟ ತಡೆಯುವ ತಾಕತ್ತು ರಾಜ್ಯ ಸರ್ಕಾರಕ್ಕಿಲ್ಲ ಎಂದು ಶಾಸಕರು ಕಿಡಿಕಾರಿದರು.












Click it and Unblock the Notifications