ಉಡುಪಿಯಲ್ಲಿ ಪೇದೆ ಅಮಾನತು ಆದೇಶ ಹಿಂತೆಗೆತ
ವಿವಾದ ಸೃಷ್ಟಿಸಿದ್ದ ಮಲ್ಪೆಯ ಪೇದೆ ಅಮಾನತು ಆದೇಶವನ್ನು ಇಲಾಖೆ ಹಿಂಪಡೆದು, ಪೇದೆ ಪ್ರಕಾಶ್ ರನ್ನು ಕಾರ್ಕಳ ಠಾಣೆಗೆ ವರ್ಗಾವಣೆ ಮಾಡಿದೆ.
ಉಡುಪಿ, ಎಪ್ರಿಲ್ 15 : ಭಾರೀ ವಿವಾದ ಸೃಷ್ಟಿಸಿದ್ದ ಮಲ್ಪೆ ಠಾಣಾ ಕಾನ್ ಸ್ಟೇಬಲ್ ಅಮಾನತು ಆದೇಶವನ್ನು ಇಲಾಖೆ ಹಿಂಪಡೆದು, ಪೇದೆ ಪ್ರಕಾಶ್ ರನ್ನು ಕಾರ್ಕಳ ನಗರ ಠಾಣೆಗೆ ವರ್ಗಾವಣೆ ಮಾಡಿದೆ.
ತಮ್ಮ ಪತ್ನಿಯನ್ನ ಚುಡಾಯಿಸಿದ್ದಕ್ಕಾಗಿ ಕುಮಾರ್ ಎಂಬಾತನ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದ ಮಲ್ಪೆ ಪೊಲೀಸ್ ಠಾಣೆಯ ಪೇದೆ ಪ್ರಕಾಶ್ ರನ್ನು ಏಪ್ರಿಲ್ 8 ರಂದು ಅಮಾನತು ಮಾಡಲಾಗಿತ್ತು.[ಕಾನ್ ಸ್ಟೇಬಲ್ ಅಮಾನತು ಪ್ರಕರಣ: ಮುಗಿಯದ ಜಂಗೀಕುಸ್ತಿ..!]

ಹಲ್ಲೆಗೊಳಗಾದ ಕುಮಾರ್, ಸಚಿವ ಪ್ರಮೋದ್ ಮದ್ವರಾಜ್ ಕಾರ್ಖಾನೆ ಚಾಲಕ. ಹೀಗಾಗಿ ಪ್ರಭಾವ ಬಳಸಿಕೊಂಡು ಪೇದೆಯನ್ನ ಸಸ್ಪೆಂಡ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೇ ಬಿಜೆಪಿ ಮುಖಂಡರು ಸಹ ಸಚಿವರ ವಿರುದ್ಧ ತಿರುಗಿಬಿದ್ದಿದ್ದರು. ಈ ಬಗ್ಗೆ ಸಾಕಷ್ಟು ಹೋರಾಟಗಳು ನಡೆದಿತ್ತು.[ಉಡುಪಿ: ತನ್ನ ಪತ್ನಿಗೆ ನ್ಯಾಯ ದೊರಕಿಸಿ ಎಂದಿದ್ದ ಪೇದೆ ಸಸ್ಪೆಂಡ್!]











Click it and Unblock the Notifications