ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವದ ಸಡಗರ, ಮಠಾಧೀಶರಿಂದ ವಿಶೇಷ ಪೂಜೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 27: ಶ್ರೀಕೃಷ್ಣಮಠದಲ್ಲಿ ಉತ್ಥಾನ ದ್ವಾದಶಿಯ ದಿನವಾದ ಶುಕ್ರವಾರ ಆಕರ್ಷಕ ಲಕ್ಷದೀಪೋತ್ಸವ, ರಥೋತ್ಸವ ಮತ್ತು ತೆಪ್ಪೋತ್ಸವವನ್ನು ನೆರವೇರಿಸಲಾಯಿತು.

ಕೃಷ್ಣನ ಉತ್ಸವದಲ್ಲಿ ಪಾಲ್ಗೊಂಡ ಮಠಾಧೀಶರು ವಿಶೇಷ ಪೂಜೆ ನಡೆಸಿ ಕ್ಷೀರಾಬ್ದಿ ಅರ್ಘ್ಯ ಅರ್ಪಿಸಿದರು. ಉತ್ಸವದಲ್ಲಿ ಪರ್ಯಾಯ ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ವಿದ್ಯಾರಾಜೇಶ್ವರ ತೀರ್ಥರು ಪಾಲ್ಗೊಂಡಿದ್ದರು.

 Udupi: Lakshadeepotsava And Teppotsava Celebration At Krishna Math

 ಧರ್ಮಸ್ಥಳ : ಲಕ್ಷ ದೀಪೋತ್ಸವ ನೋಡಲು ಬೇಕು ಸಾವಿರ ಕಣ್ಣು ಧರ್ಮಸ್ಥಳ : ಲಕ್ಷ ದೀಪೋತ್ಸವ ನೋಡಲು ಬೇಕು ಸಾವಿರ ಕಣ್ಣು

ಪ್ರತಿ ವರ್ಷವೂ ಉಡುಪಿಯ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದಾಗಿ ಸೀಮಿತ ಸಂಖ್ಯೆಯ ಭಕ್ತರಷ್ಟೇ ಉತ್ಸವಕ್ಕೆ ಸಾಕ್ಷಿಯಾದರು.

 Udupi: Lakshadeepotsava And Teppotsava Celebration At Krishna Math

Recommended Video

ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ | UP | Oneindia Kannada

ಉಡುಪಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು: ಉಡುಪಿ ಜಿಲ್ಲೆಯಲ್ಲಿ ಒಟ್ಟು 22608 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 22217 ಮಂದಿ ಗುಣಮುಖರಾಗಿದ್ದಾರೆ. 204 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 187 ಮಂದಿ ಸಾವನ್ನಪ್ಪಿದ್ದಾರೆ.

English summary
Lakshadeepotsava, rathotsava and teppotsava celebrated on friday at krishna math in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X