ಬೈಂದೂರಿನಲ್ಲಿ ಹೆಜ್ಜೆ ಹೆಜ್ಜೆಗೂ ತೊರೆಗಳು: ಕಾಲು ಸಂಕಗಳ ಮೇಲೆ ಜನರ ಸಂಕಟದ ನಡಿಗೆ

ಉಡುಪಿ, ಜುಲೈ 15: ಉಡುಪಿ ಜಿಲ್ಲೆಯ ಬೈಂದೂರು ಮತ್ತು ಕುಂದಾಪುರ ಭಾಗದ ಕೆಲವು ಭಾಗಗಳು ಮಳೆಗಾಲದಲ್ಲಿ ಬದುಕಲು ಅಸಾಧ್ಯ ಎನಿಸುವ ರೀತಿಯಲ್ಲಿ ಜಲಪ್ರಳಯ ಸೃಷ್ಟಿಯಾಗುತ್ತದೆ. ಅದರಲ್ಲೂ ಬೈಂದೂರು ಕ್ಷೇತ್ರ ವ್ಯಾಪ್ತಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವಂತಹ ನಿವಾಸಿಗಳಿಗೆ ಮಳೆಗಾಲ ಯಾಕೆ ಬರುತ್ತದೆ ಅನ್ನಿಸುತ್ತದೆ ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಇಲ್ಲಿ ಪ್ರತಿ ಗ್ರಾಮದಲ್ಲೂ ಹರಿಯುವ ಸಣ್ಣ ಪುಟ್ಟ ತೊರೆಗಳು.

ಬೇಸಿಗೆಯಲ್ಲಿ ಕೃಷಿ ಇನ್ನಿತರ ಚಟುವಟಿಕೆಗಳಿಗೆ ಸಹಕಾರಿಯಾಗುವ ಈ ತೊರೆಗಳು ಮಳೆಗಾಲದಲ್ಲಿ ಮಾತ್ರ ಅಬ್ಬರಿಸಿ ಒಬ್ಬರಿಯ ಮೂಲಕ ಸ್ಥಳೀಯರಿಗೆ ಪ್ರಾಣ ಭಯ ಹುಟ್ಟಿಸುತ್ತದೆ. ಅದರಲ್ಲೂ ದೈನ ನಿನ್ನ ಕೆಲಸ ಕಾರ್ಯಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳಬೇಕಾದವರು ಈ ತೊರೆಯನ್ನು ದಾಟಿಯೇ ಸಾಗಬೇಕಾದ ಪರಿಸ್ಥಿತಿ ಇಲ್ಲಿ ಇದೆ. ಇಂತಹ ಸಮಸ್ಯೆ ಗೊತ್ತಿದ್ದರೂ ಕೂಡ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ರೆಡ್ ಅಲರ್ಟ್ ಇದ್ದರೂ ಕೂಡ ರಜೆ ಘೋಷಣೆ ಮಾಡದೇ ಇದ್ದಾಗ, ವಿದ್ಯಾರ್ಥಿಗಳ ಜೊತೆ ಪೋಷಕರು ಹಿಡಿ ಶಾಪ ಹಾಕುವುದು ಇಲ್ಲಿ ಮಾಮೂಲಿ.

Kundapura Get Flooded In Such A Way That It Becomes Impossible To Survive During The Rainy Season

ಈ ಚಿತ್ರಣ ಬೈಂದೂರು ಕ್ಷೇತ್ರ ವ್ಯಾಪ್ತಿಯ ಯಡಮೊಗೆ ಗ್ರಾಮದ್ದು. ಈ ಗ್ರಾಮದಲ್ಲಿ ಹರಿಯುವ ತೊರೆ ಬೇಸಿಗೆಯಲ್ಲಿ ಕೃಷಿಕ ಕಾರ್ಯಗಳಿಗೆ ಅನುಕೂಲವನ್ನು ಉಂಟುಮಾಡುವ ಜೀವ ಜಲವನ್ನು ಒದಗಿಸುತ್ತದೆ. ಆದರೆ ಅದೇ ತೊರೆ ಪಶ್ಚಿಮ ಘಟ್ಟದಲ್ಲಿ ಮಳೆಯಾದಾಗ ತುಂಬಿ ಹರಿಯುವ ಮೂಲಕ ಪ್ರಾಣ ಭಯವನ್ನು ಹುಟ್ಟಿಸುತ್ತದೆ.

ಇಲ್ಲಿನ ಸ್ಥಳೀಯರು ಪ್ರತಿ ವರ್ಷವೂ ಕೂಡ ಮಳೆಗಾಲದ ಆರಂಭದಲ್ಲಿ, ಈ ತೊರೆಗೆ ಅಡಿಕೆ ಮತ್ತು ಲಭ್ಯವಿರುವ ಇನ್ನಿತರ ಮರ ಮುಟ್ಟುಗಳನ್ನು ಬಳಸಿ ಕಿರು ಸೇತುವೆಯನ್ನು ನಿರ್ಮಿಸುತ್ತಾರೆ. ಈ ಸೇತುವೆಗಳೇ ಮಳೆಗಾಲದ ಮೂರು ತಿಂಗಳುಗಳ ಕಾಲ ಇಲ್ಲಿನ ಗ್ರಾಮಸ್ಥರ ಮುಖ್ಯ ಸಂಪರ್ಕ ಸಾಧನೆ ಎಂದರೆ ತಪ್ಪಾಗಲಾರದು. ಜಿಲ್ಲೆಯಲ್ಲಿ ಜೋರಾಗಿ ಮಳೆಯಾದಾಗ ಇಂತಹ ಕಿರುಪ್ಯತ್ವಗಳನ್ನು ವಿದ್ಯಾರ್ಥಿಗಳು ದಾಟಿಕೊಂಡು ಶಾಲಾ-ಕಾಲೇಜುಗಳಿಗೆ ತೆರಳುವುದು ಅತ್ಯಂತ ಅಪಾಯಕಾರಿ.

Kundapura Get Flooded In Such A Way That It Becomes Impossible To Survive During The Rainy Season

ಮನೆಯಲ್ಲಿ ತೇಲಿ ಬರುವ ದೊಡ್ಡ ದೊಡ್ಡ ಮರಗಳು ಈ ಕಿರು ಸೇತುವೆಗಳನ್ನು ಕೂಡ ಒಂದೇ ಏಟಿಗೆ ಉರುಳಿಸಿಬಿಡುತ್ತದೆ. ಆ ಸಂದರ್ಭದಲ್ಲಿ ಇಲ್ಲಿನ ಜನರ ಸಂಪರ್ಕ ಸಾಧನವೇ ಇಲ್ಲವಾಗುವಂತ ಸ್ಥಿತಿ ಇಲ್ಲಿ ನಿರ್ಮಾಣವಾಗುತ್ತದೆ. ಈ ಸಮಸ್ಯೆಗಳ ಅರಿವಿದ್ದರೂ ಕೂಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂದರ್ಭದಲ್ಲಿ ಯಾಕೆ ಅಸಡ್ಡೆ ವಹಿಸುತ್ತಾರೆ ಎನ್ನುವುದು ಇಲ್ಲಿನ ಸ್ಥಳೀಯರ ಪ್ರಶ್ನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+