ಆ.20ರಿಂದ ಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆ

ಮಣಿಪಾಲ್, ಆಗಸ್ಟ್ 17 : ಕೆಎಸ್ಆರ್‌ಟಿಸಿ ಮಣಿಪಾಲ್ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಫ್ಲೈ ಬಸ್ ಸೇವೆಯನ್ನು ಆರಂಭಿಸಲಿದೆ. ಈಗಾಗಲೇ ಮೈಸೂರು ಮತ್ತು ಬೆಂಗಳೂರಿನ ನಡುವೆ ಫ್ಲೈ ಬಸ್ ಸಂಚಾರ ನಡೆಸುತ್ತಿದೆ.

ಆ.20ರಿಂದ ಕೆಎಸ್ಆರ್‌ಟಿಸಿಯ ಮಣಿಪಾಲ್ ಮತ್ತು ಬೆಂಗಳೂರಿನ ನಡುವೆ ಫ್ಲೈ ಬಸ್ ಸೇವೆ ಆರಂಭಿಸಲಿದೆ. ಬೆಂಗಳೂರಿನಿಂದ ಉಡುಪಿ ಮತ್ತು ಮಣಿಪಾಲ್‌ಗೆ 1,100 ರೂ. ಮತ್ತು ಮಂಗಳೂರಿಗೆ 1000 ರೂ. ಪ್ರಯಾಣದರ ನಿಗದಿಗೊಳಿಸುವ ಸಾಧ್ಯತೆ ಇದೆ.

40 ಪ್ರಯಾಣಿಕರು ಪ್ರಯಾಣಿಸಬಹುದಾದ ಈ ಬಸ್ ವೊಲ್ವೋ ಕಂಪನಿಗೆ ಸೇರಿದ್ದಾಗಿದೆ. ರಾಸಾಯನಿಕ ಶೌಚಾಲಯ, ಅಡುಗೆ ಕೋಣೆ, ಟಿವಿ, ವೈಫೈ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ವಿಮಾನದ ವೇಳಾಪಟ್ಟಿಯೂ ಬಸ್‌ನಲ್ಲಿ ಲಭ್ಯವಿರುತ್ತದೆ.

ಈಗಾಗಲೇ ಕೆಎಸ್ಆರ್‌ಟಿಸಿ ಮೈಸೂರು ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಫ್ಲೈ ಬಸ್ ಸೇವೆ ಆರಂಭಿಸಿದೆ. 790 ರೂ. ದರದಲ್ಲಿ ಈ ಸೇವೆ ಒದಗಿಸಲಾಗುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದ ಸೇವೆಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ. ಚಿತ್ರಗಳಲ್ಲಿ ನೋಡಿ ಫ್ಲೈ ಬಸ್ ವಿವರಗಳು..

ಆ.20ರಿಂದ ಫ್ಲೈ ಬಸ್ ಸಂಚಾರ ಆರಂಭ

ಆ.20ರಿಂದ ಫ್ಲೈ ಬಸ್ ಸಂಚಾರ ಆರಂಭ

ಕೆಎಸ್ಆರ್‌ಟಿಸಿ ಮಣಿಪಾಲ್ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಫ್ಲೈ ಬಸ್ ಸೇವೆಯನ್ನು ಆರಂಭಿಸಲಿದೆ. ಆ.20ರಂದು ಈ ಸೇವೆ ಆರಂಭವಾಗಲಿದೆ.

ಪ್ರಯಾಣದರವೆಷ್ಟು?

ಪ್ರಯಾಣದರವೆಷ್ಟು?

ಪ್ರತಿದಿನ ರಾತ್ರಿ 10 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಬಸ್ ಮರುದಿನ ಬೆಳಗ್ಗೆ 7 ಗಂಟೆಗೆ ಮಣಿಪಾಲ್ ತಲುಪಲಿದೆ. ಬೆಂಗಳೂರಿನಿಂದ ಉಡುಪಿ ಮತ್ತು ಮಣಿಪಾಲ್‌ಗೆ 1,100 ರೂ. ಮತ್ತು ಮಂಗಳೂರಿಗೆ 1000 ರೂ. ಪ್ರಯಾಣದರ ನಿಗದಿಗೊಳಿಸುವ ಸಾಧ್ಯತೆ ಇದೆ.

ವೊಲ್ವೋ ಮಲ್ಟಿ ಆಕ್ಸೆಲ್ ಬಸ್

ವೊಲ್ವೋ ಮಲ್ಟಿ ಆಕ್ಸೆಲ್ ಬಸ್

ಮಣಿಪಾಲ್ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ವೊಲ್ವೋ ಮಲ್ಪಿ ಆಕ್ಸೆಲ್ ಬಸ್ ಸಂಚಾರ ನಡೆಸಲಿದೆ. 40 ಪ್ರಯಾಣಿಕರು ಇದರಲ್ಲಿ ಸಂಚರಿಸಬಹುದಾಗಿದೆ.

ಅತ್ಯಾಧುನಿಕ ಸೌಲಭ್ಯಗಳು

ಅತ್ಯಾಧುನಿಕ ಸೌಲಭ್ಯಗಳು

ಈ ಬಸ್‌ನಲ್ಲಿ ರಾಸಾಯನಿಕ ಶೌಚಾಲಯ, ಅಡುಗೆ ಕೋಣೆ, ಟಿವಿ, ವೈಫೈ ಮುಂತಾದ ಅತ್ಯಾಧುನಿಕ ಸೌಲಭ್ಯಗಳಿವೆ. ವಿಮಾನದ ವೇಳಾಪಟ್ಟಿಯೂ ಬಸ್‌ನಲ್ಲಿ ಲಭ್ಯವಿರುತ್ತದೆ.

ಮೈಸೂರಿನ ಸೇವೆ ಯಶಸ್ವಿ

ಮೈಸೂರಿನ ಸೇವೆ ಯಶಸ್ವಿ

ಕೆಎಸ್ಆರ್‌ಟಿಸಿ ಮೈಸೂರು ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಫ್ಲೈ ಬಸ್ ಸೇವೆ ಆರಂಭಿಸಿದೆ. 790 ರೂ. ದರದಲ್ಲಿ ಈ ಸೇವೆ ಒದಗಿಸಲಾಗುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+