ದೇವೇಗೌಡರೇ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲಿದ್ದಾರೆ: ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ, ಅಕ್ಟೋಬರ್. 23: ಕಾಂಗ್ರೆಸ್ ಗೆ ಈಗ ಧೃತರಾಷ್ಟ್ರನ ಆಲಿಂಗನವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಮುಕ್ತ ಮಾಡುವ ಅವಕಾಶ ಕೈ ತಪ್ಪಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ನಡೆದ ದೇವೇಗೌಡ- ಸಿದ್ದರಾಮಯ್ಯ ಅವರ ಜಂಟಿ ಪತ್ರಿಕಾಗೋಷ್ಠಿ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಶತಮಾನದ ಇತಿಹಾಸವನ್ನು ಹೊಂದಿದ್ದು, ಈಗ ಕಾಂಗ್ರೆಸ್ ಗೆ ಜೆಡಿಎಸ್ ಜೊತೆ ಅಂದರೆ ದೇವೇಗೌಡ ಎಂಬ ಧೃತರಾಷ್ಟ್ರನ ಆಲಿಂಗನವಾಗಿದೆ.

ಇದರಿಂದ ಕಾಂಗ್ರೆಸ್ ಸಂಪೂರ್ಣ ಸರ್ವನಾಶ ಆಗಲಿದೆ. ಈ ಮೂಲಕ ಕಾಂಗ್ರೆಸ್ ಮುಕ್ತ ಮಾಡುವ ಅವಕಾಶ ಬಿಜೆಪಿಗೆ ಕೈ ತಪ್ಪಿದಂತಾಗಿದೆ. ದೇವೇಗೌಡರೇ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲಿದ್ದಾರೆ.

ಉಪಚುನಾವಣೆ ಘೋಷಣೆಯಾದ ಬಳಿಕ ಸರ್ಕಾರದಲ್ಲಿ ಮಂತ್ರಿಗಳಿಲ್ಲದೇ ವಿಧಾನಸೌಧ ಖಾಲಿಯಾಗಿದೆ. ಯಾವ ಜಿಲ್ಲೆಗೂ ಉಸ್ತುವಾರಿ ಮಂತ್ರಿಗಳು ಭೇಟಿ ಕೊಡುತ್ತಿಲ್ಲ. ಮಂತ್ರಿಮಂಡಲದ ಅಧಿಕಾರವನ್ನು ಚುನಾವಣಾ ಪ್ರಕ್ರಿಯೆಗಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿ...

 ಬಿಜೆಪಿ ಗೆಲುವು

ಬಿಜೆಪಿ ಗೆಲುವು

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ . ಆದರೆ ರಾಜ್ಯದಲ್ಲಿ 5 ಕಡೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ, ಶಿವಮೊಗ್ಗ , ಬಳ್ಳಾರಿ ಜಮಖಂಡಿಯಲ್ಲಿ ಗೆಲುವು ಸಾಧಿಸಲಿದೆ. ಮಂಡ್ಯ ರಾಮನಗರದಲ್ಲಿ ಬಿಜೆಪಿಗೆ ಶಕ್ತಿ ಹೆಚ್ಚಾಗಿದ್ದು, ಈ ಎರಡು ಕ್ಷೇತ್ರಗಳಲ್ಲಿ ಮೈತ್ರಿ ರಾಜಕೀಯ ಫಲ ನೀಡುವುದಿಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದರು.

 ಮರಳಿನ ಸಮಸ್ಯೆ ವಿಪರೀತ

ಮರಳಿನ ಸಮಸ್ಯೆ ವಿಪರೀತ

ರಾಜ್ಯಾದ್ಯಂತ ಮರಳಿನ ಸಮಸ್ಯೆ ವಿಪರೀತವಾಗಿದೆ. ಲಾರಿ, ಟಿಪ್ಪರ್ ಚಾಲಕರು ಹಾಗೂ ಮಾಲೀಕರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಬೇಕಾದ ರಾಜ್ಯ ಸರ್ಕಾರ ಸತ್ತು ಹೋಗಿದೆಯೇ? ಎಂದು ಕೋಟಾ ಪ್ರಶ್ನಿಸಿದರು.

 ಅನಿರ್ದಿಷ್ಟಾವಧಿ ಪ್ರತಿಭಟನೆ

ಅನಿರ್ದಿಷ್ಟಾವಧಿ ಪ್ರತಿಭಟನೆ

ಅಕ್ಟೋಬರ್ 25 ರೊಳಗೆ ಮರಳಿನ ಸಮಸ್ಯೆ ಬಗೆಹರಿಯಬೇಕು ಎಂದು ಗಡುವು ನೀಡಿದ ಅವರು ಸಮಸ್ಯೆ ಬಗೆಹರಿಯದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸುವುದಾಗಿ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.

 ಮರಳು ಕೊಡುವ ತನಕ ಪ್ರತಿಭಟನೆ

ಮರಳು ಕೊಡುವ ತನಕ ಪ್ರತಿಭಟನೆ

ಸಾರ್ವಜನಿಕರು, ದೋಣಿ ನಡೆಸುವವರು, ವಾಹನ ಚಾಲಕರ ಜೊತೆ ಬಿಜೆಪಿ ಪ್ರತಿಭಟನೆಗೆ ಇಳಿಯಲಿದೆ . ಉಡುಪಿ ಜಿಲ್ಲೆಯ 5 ಶಾಸಕರು, ಸಂಸದರು ಪ್ರತಿಭಟನೆಗೆ ಕೂರುತ್ತಾರೆ ಎಂದು ಹೇಳಿದ ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರ ಮರಳು ಕೊಡುವ ತನಕ ಪ್ರತಿಭಟನೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+