ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಲ್ಲೂರು ಮೂಕಾಂಬಿಕೆಯ ದೇವಳದ ಬಾಣಸಿಗರಿಗೆ ಸಿಕ್ಕಿದೆ ಯೂನಿಫಾರ್ಮ್ ಭಾಗ್ಯ!

|
Google Oneindia Kannada News

ಉಡುಪಿ, ಫೆಬ್ರವರಿ 05:ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಾನದಲ್ಲಿ ಶಿಸ್ತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದೇವಿಯ ದರ್ಶನ ಪಡೆದು ಬರುವ ಭಕ್ತರಿಗೆ ಇನ್ನು ಯೂನಿಫಾರ್ಮ್ ಧರಿಸಿದ ದೇವಾಲಯದ ಸಿಬ್ಬಂದಿಗಳು ಅನ್ನಪ್ರಸಾದ ಬಡಿಸಲಿದ್ದಾರೆ. ಭೋಜನ ಶಾಲೆಯ ಸಿಬ್ಬಂದಿಗಳಿಗೆ ಮಾತ್ರ ಯೂನಿಫಾರ್ಮ್ ನೀಡಲಾಗಿದೆ.

ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ರಾಜ್ಯದಲ್ಲಿಯೇ ವರಮಾನ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕೊಲ್ಲೂರು ದೇವಾಲಯದಲ್ಲಿ ಇದೀಗ ಅಡುಗೆ ಸಿಬ್ಬಂದಿಗೆ ಸಮವಸ್ತ್ರವನ್ನೂ ವಿತರಣೆ ಮಾಡಲಾಗಿದೆ.

ಮೂಕಾಂಬಿಕೆಯ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯೇಸುದಾಸ್ಮೂಕಾಂಬಿಕೆಯ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯೇಸುದಾಸ್

ಶುಚಿತ್ವ ಕಾಪಾಡುವ ಉದ್ದೇಶದಿಂದ ಈ ಸಮವಸ್ತ್ರ ಜಾರಿಗೊಳಿಸಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಸಿದ್ಧ ದೇವಸ್ಥಾನದಲ್ಲಿ ಸಮವಸ್ತ್ರ ಜಾರಿಯಾಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರವನ್ನು ದೇವಸ್ಥಾನ ಜಾರಿ ಮಾಡಿದೆ.

Kolluru Mookambika Bhojana shala staff got uniform

 ಕೊಲ್ಲೂರು ದೇಗುಲದ ಲಕ್ಷ್ಮೀ ಮಂಟಪ ಪ್ರವೇಶಿಸಿದ ಮಹಿಳೆ ಮೇಲೆ ಕಿಡಿಕಾರಿದ ಭಕ್ತರು ಕೊಲ್ಲೂರು ದೇಗುಲದ ಲಕ್ಷ್ಮೀ ಮಂಟಪ ಪ್ರವೇಶಿಸಿದ ಮಹಿಳೆ ಮೇಲೆ ಕಿಡಿಕಾರಿದ ಭಕ್ತರು

ದೇವಸ್ಥಾನದ ಭೋಜನ ಶಾಲೆಯಲ್ಲಿ ಅನ್ನ ಪ್ರಸಾದ ವಿತರಣೆ ವೇಳೆ ಸಿಬ್ಬಂದಿ ಸಮವಸ್ತ್ರ ತೊಟ್ಟು ಭಕ್ತರಿಗೆ ಊಟ ಬಡಿಸಲಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಕೊಲ್ಲೂರು ದೇವಸ್ಥಾನಕ್ಕೆ ಬರುವ ಸಂದರ್ಭದಲ್ಲಿ ಶಿಸ್ತು ಇರಲಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಈ ನಿರ್ಧರಿಸಿದೆ.

English summary
Very famous Kolluru Mookambika Bhojana shala staff got uniform.This uniform is implemented in order to maintain cleanliness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X