ಉಡುಪಿ: ಈ ಬಾರಿಯೂ ಕಂಬಳ ನಡೆಯುವುದು ಡೌಟ್

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಅಕ್ಟೋಬರ್, 27: ಕರಾವಳಿ ರೈತರ ಜನಪ್ರಿಯ ಕ್ರೀಡೆ ಎಂದೇ ಹೆಗ್ಗಳಿಕೆ ಪಡೆದ ಕಂಬಳ ಈ ಬಾರಿ ನಡೆಯುವುದೇ ಸಂಶಯವಾಗಿದೆ ಎಂಬ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಬಾರಿ ಕಂಬಳ ಮಹೋತ್ಸವದ ಮೇಲೆ ಸುಪ್ರೀಂಕೋರ್ಟ್ ಆದೇಶ ತೂಗುಕತ್ತಿಯಂತೆ ಮುಂದುವರೆದಿದೆ. ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ಹಲವಾರು ವರ್ಷಗಳಿಂದ ಮುಂದುವರೆಸಿಕೊಂಡು ಬರಲಾಗುತ್ತಿದೆ.

Kambala the annual buffalo race doubtful stater in Udupi

ಕೋಣಕ್ಕೆ ಬೆತ್ತದಿಂದ ಹೊಡೆಯ ಬಾರದೆಂದು ಸುಪ್ರೀಂಕೋರ್ಟ್ ನೀಡಿರುವ ಆದೇಶದ ಮೇರೆಗೆ ಕಂಬಳ ಪ್ರಿಯರು ಆತಂಕಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ ಮೀರದಂತೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದಾರೆ.

Kambala the annual buffalo race doubtful stater in Udupi

ಕಂಬಳ ನಡೆಸುವವರು ಈಗಾಗಲೇ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಸುಪ್ರೀಂ ಕೋರ್ಟ್ ಆದೇಶ ಮೀರಿ ಅನುಮತಿ ನೀಡಲು ಕಷ್ಟ ಎಂಬ ಅಭಿಪ್ರಾಯ ಅವರು ನೀಡಿರುವುದರಿಂದ ಕಂಬಳ ಭಾಗಶಃ ನಡೆಯುವುದು ಸಂಶಯಕರ ಎಂದೇ ಹೇಳಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In obedience with Supreme Court order, Kambala the annual Buffalo Race, The king of sports in Udupi is doubtful stater. The Deputy Commissioner clarified this to a delegation which met him in Udupi on 26th Oct 2016.
Please Wait while comments are loading...