ಪ್ರಜ್ವಲ್‌ ರೇವಣ್ಣ ಕೇಸ್: ದುಶ್ಯಾಸನ ಹಾಗೆ ಮಾಡಿದ್ರೆ ಮಾತೆಯರ ಮಾನ ಹರಾಜಾಗುತ್ತಾ ಎಂದ ಈಶ್ವರಪ್ಪ

ಉಡುಪಿ, ಮೇ 01: ರಾಜ್ಯಾದಂತ್ಯ ಸಂಚಲನ ಮೂಡಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣ ವಿರುದ್ಧ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಪ್ರಕರಣದ ಬಗ್ಗೆ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಮಾತನಾಡಿದ್ದು, ಪ್ರಜ್ವಲ್ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದೊಂದು ದರಿದ್ರ ವಿಷಯ. ಇದರ ಬಗ್ಗೆ ನಾವ್ಯಾಕೆ ಮಾತನಾಡೋಣ. ಆ ಬಗ್ಗೆ ಮಾತನಾಡಿದರೆ ಬಾಯಲ್ಲಿ ಹುಳ ಬೀಳುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

K S Eshwarappa Reaction About Hassan Obscene Viral Video Case

ದುಶ್ಯಾಸನ ಹಾಗೆ ಮಾಡಿದ ಎಂದು ಮಾತೆಯರ ಮಾನ ಹರಾಜು ಆಗುತ್ತಾ. ಆ ಪ್ರಕರಣದಲ್ಲಿ ದುಶ್ಯಾಶನನೇ ಹಾಳಾದ ಮಹಿಳೆಯರೆಂದರೆ ಸೀತೆ, ಸಾವಿತ್ರಿ ದ್ರೌಪತಿ ಎಂದು ಪೂಜೆ ಮಾಡುತ್ತೇವೆ. ಯಾರು ಮಾನ ಹರಾಜು ಹಾಕಲು ಯತ್ನಿಸಿದರೋ ಅಂತವರ ಮಾನ ಹರಾಜಾಗಿದೆ. ಅಂತವರ ವಿರುದ್ಧ ರಾಜ್ಯ ,ದೇಶಾದ್ಯಂತ ಛೀ..ಥೂ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.

ಮಾತೆಯರ ಮಾನ ಹರಾಜಾಗಿಲ್ಲ. ಈ ದೇಶ ಸ್ತ್ರೀಯರಿಗೆ ಗೌರವ ಕೊಡುವ ದೇಶ, ಪೂಜೆ ಮಾಡುವ ದೇಶ ದುರುಪಯೋಗ ಮಾಡಿಕೊಂಡವರು ಏನು ಅನುಭವಿಸಬೇಕೋ ಅದನ್ನು ಅನುಭವಿಸುತ್ತಾರೆ ಎಂದು ಹೇಳಿದರು.

ತಮ್ಮ ಪುತ್ರ ಕಾಂತೇಶ್ ತಡೆಯಾಜ್ಞೆ ತಂದ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಹೇಗಾದರೂ ಮಾಡಿ ನಮ್ಮನ್ನು ಹಿಂದೆ ಸರಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ನಮಗೆ ಅಪಮಾನ ಮಾಡಬೇಕು ಎಂಬ ಕುತಂತ್ರ ನಡೆಯುತ್ತಿದೆ. ಇದು ಕುತಂತ್ರ ರಾಜಕಾರಣ. ಇದಕ್ಕೆ ಹೇಗೆ ಉತ್ತರ ಕೊಡಬೇಕು ಅದಕ್ಕೆ ನಾವು ಸಿದ್ಧರಾಗಿದ್ದೇವೆ. ಇದೇ ಕಾರಣಕ್ಕೆ ತಡೆಯಾಜ್ಞೆ ತಂದಿದ್ದೇವೆ. ಅದು ಬಿಟ್ಟು ಬೇರೆ ಏನೂ ಇಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+