ಈವರೆಗೆ ಪತ್ತೆಯಾಗದ ಮಲ್ಪೆ ಮೀನುಗಾರರು : ಆತಂಕ ವ್ಯಕ್ತಪಡಿಸಿದ ಪೇಜಾವರ ಶ್ರೀ

ಉಡುಪಿ, ಜನವರಿ 03: ಆಳ ಸಮುದ್ರದಿಂದ ಕಣ್ಮರೆಯಾಗಿರುವ ಮಲ್ಪೆಯ ಏಳು ಮಂದಿ ಮೀನುಗಾರರ ಶೋಧ ಕಾರ್ಯ ಮುಂದುವರೆದಿದೆ. ಆದರೆ ನಾಪತ್ತೆಯಾಗಿರುವ ಮೀನುಗಾರರರು ಹಾಗೂ ಅವರಿದ್ದ ಸುವರ್ಣ ತ್ರಿಭುಜ ಬೋಡ್ ನ ಸುಳಿವು ಈವರೆಗೆ ಪತ್ತೆಯಾಗಿಲ್ಲ.

ಮೀನುಗಾರರು ನಾಪತ್ತೆಯಾಗಿ 17 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ 7 ಮೀನುಗಾರರ ಕುಟುಂಬ ಆತಂಕದಲ್ಲಿ ದಿನ ದೂಡುತ್ತಿವೆ. ಈ ನಡುವೆ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಉಡುಪಿ ಪೇಜಾವರ ಶ್ರೀ ಕಳವಳ ವ್ಯಕ್ತಪಡಿಸಿದ್ದಾರೆ.

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೇಜಾವರ ಶ್ರೀ, ಮಲ್ಪೆ ಮೀನುಗಾರ ನಾಪತ್ತೆ ಪ್ರಕರಣ ನನ್ನ ಗಮನಕ್ಕೆ ಬಂದಿರಲಿಲ್ಲ. ಇವತ್ತು ನನಗೆ ವಿಷಯ ಗೊತ್ತಾಗಿದೆ. ಈ ವಿಚಾರ ತಿಳಿದು ನನ್ನ ಮನಸ್ಸಿಗೆ ಆತಂಕವಾಗಿದೆ ಎಂದರು.

I am with missing fishermens families: Pejawara Shree

ಮೀನುಗಾರರ ಪತ್ತೆ ಮಾಡುವ ಸಲುವಾಗಿ ಇಂದಿನಿಂದ ನಾನೂ ಶ್ರಮಿಸುತ್ತೇನೆ. ಸರಕಾರದ ಮೇಲೆ ಒತ್ತಡ ತರುವ ಕೆಲಸಕ್ಕೆ ಮುಂದಾಗುತ್ತೇನೆ. ಮೀನುಗಾರರ ಜೊತೆ ನಾನಿದ್ದೇನೆ. ನಾಪತ್ತೆಯಾಗಿರುವ ಮಲ್ಪೆ ಮೀನುಗಾರ ಕುಟುಂಬದ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ.

ಉಡುಪಿಗೆ ಬಂದ ತಕ್ಷಣ ಮೀನುಗಾರ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ. ಮುಂದಿನ ಕ್ರಮದ ಬಗ್ಗೆ ಚರ್ಚಿಸುತ್ತೇನೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+