• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಜೂನಿಯರ್, ಸಚಿವ ಸ್ಥಾನ ಅಪೇಕ್ಷಿಸಲಿಲ್ಲ- ಶೋಭಾ ಕರಂದ್ಲಾಜೆ

|

ಉಡುಪಿ, ಜೂನ್ 03: ಕೇಂದ್ರದಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯೇ ಅಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದರ ಪೈಕಿ ನಾನು ತುಂಬಾ ಜೂನಿಯರ್. ರಾಜ್ಯದ ಸಂಸದರ ಪೈಕಿಯೂ ನಾನು ಜೂನಿಯರ್ ಇದ್ದೇನೆ. ದೇಶದಲ್ಲಿ, ರಾಜ್ಯದಲ್ಲಿ ಹಲವಾರು ಹಿರಿಯ ಸಂಸದರು ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಸಚಿವ ಸ್ಥಾನವನ್ನು ಅಪೇಕ್ಷೆ ಪಡಲೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಹಿಂದಿ ಹೇರಿಕೆ ಮಾತಿಗೆ ಶೋಭಾ ತಿರುಗೇಟು

ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ಎಂದಿದ್ದ ರೇವಣ್ಣ ಅವರು ಸನ್ಯಾಸ ಸ್ವೀಕಾರಕ್ಕೆ ಗುರುಗಳನ್ನು ಹುಡುಕುತ್ತಿರಬಹುದು. ಅವರ ಕುಟುಂಬದವರು ಹೆಚ್ಚು ಜನ ರಾಜಕೀಯ ಸನ್ಯಾಸ ಪಡೆದರೆ ರಾಜ್ಯಕ್ಕೆ ಒಳ್ಳೇದು ಎಂದು ಅವರು ವ್ಯಂಗ್ಯವಾಡಿದರು.

ಶೋಭಾಗೆ ಸಂಪುಟದಲ್ಲಿ ಸ್ಥಾನವಿಲ್ಲ, ಯಡಿಯೂರಪ್ಪ ಶಿಫಾರಸಿಗೆ ಮನ್ನಣೆಯಿಲ್ಲ

ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಗೆ ಅವರಪ್ಪನನ್ನೇ ಗೆಲ್ಲಿಸಲು ಆಗಿಲ್ಲ. ಮಗನಿಂದಲೇ ಅಪ್ಪ ಮಲ್ಲಿಕಾರ್ಜುನ ಖರ್ಗೆ ಸೋತರು. ಪ್ರಿಯಾಂಕ್ ಖರ್ಗೆಯಿಂದ ಅಮಿತ್ ಶಾ ಪಾಠ ಕಲಿಯೋ ಅಗತ್ಯ ಇಲ್ಲ. ದೇಶ ದ್ರೋಹಿಗಳಿಗೆ ಅಮಿತ್ ಶಾ ಸಿಂಹ ಸ್ವಪ್ನವಾಗಿದ್ದಾರೆ. ಅವ್ಯವಹಾರ ಮಾಡುವವರಿಗೆ ಶಾ ತಕ್ಕ ಪಾಠ ಕಲಿಸ್ತಾರೆ ಎಂದು ಹೇಳಿದರು.

English summary
Speaking to media persons in Udupi, Shobha karandlaje has said that, she is not an aspirant of any post in central cabinet of Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X