ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿ ನೋಡೋಣ: ಟಿಜೆ ಅಬ್ರಹಾಂ ಸವಾಲ್

|
Google Oneindia Kannada News

ಉಡುಪಿ, ಮಾರ್ಚ್ 24: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ನನಗೆ ಕಳುಹಿಸಿರುವ ಲೀಗಲ್ ನೋಟಿಸನ್ನು ನಾನು ಸ್ವಾಗತಿಸುತ್ತೇನೆ ಹೀಗಂದವರು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ. ಈ ಮೂಲಕ ಅವರು 10 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಸ್ವಾಗತಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಉಡುಪಿಯಲ್ಲಿ ಮಾತನಾಡಿದ ಅವರು, "ನೋಟಿಸ್ ನೋಡಿ ನನಗೆ ಬಹಳ ಸಂತೋಷವಾಗಿದೆ. ನಾನು 30 ದಿನದ ಗಡುವು ಕೊಡುತ್ತೇನೆ. ನನ್ನ ವಿರುದ್ದ ಮಧ್ವರಾಜ್ ಕೋರ್ಟಿನಲ್ಲಿ ಕೇಸು ದಾಖಲು ಮಾಡಲಿ," ಎಂದು ಸವಾಲು ಹಾಕಿದರು.

ಅಬ್ರಹಾಂ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಮಧ್ವರಾಜ್ಅಬ್ರಹಾಂ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಮಧ್ವರಾಜ್

ಮಧ್ವರಾಜ್ ಬ್ಯಾಂಕಿಗೆ ಮಾಡಿರುವ ವಂಚನೆಯ ಎಲ್ಲಾ ದಾಖಲೆ ಕೋರ್ಟಿಗೆ ಸಲ್ಲಿಸಿ ಕೋರ್ಟಿಗೆ ಎಳೆಯುತ್ತೇನೆ ಎಂದು ಹೇಳಿದ ಅವರು, "ಆಗ ಪ್ರತಿಯೊಂದು ದಾಖಲೆಯೂ ಹೊರಗೆ ಬರುತ್ತದೆ," ಎಂದು ಅವರು ಕಿಡಿಕಾರಿದರು.

I am happy to accept defamation challenge by Madwaraj - TJ Abraham

30 ದಿನದಲ್ಲಿ ಮಧ್ವರಾಜ್ ನಾನು ಹೇಳಿರುವುದೆಲ್ಲ ಸುಳ್ಳು ಎಂದು ಸಾಬೀತುಪಡಿಸದಿದ್ದರೆ ನಾನೇ ಮಧ್ವರಾಜ್ ವಿರುದ್ದ ಕೇಸು ದಾಖಲು ಮಾಡುತ್ತೇನೆ ಎಂದು ಅವರು ತಿಳಿಸಿದರು.

ಆದಷ್ಟು ಬೇಗ ಮಾನನಷ್ಟ ಮೊಕದ್ದಮೆ ದಾಖಲು ಮಾಡಿ ಎಂದು ಮಧ್ವರಾಜ್ ಗೆ ಮನವಿ ಮಾಡಿದ ಅವರು ಪ್ರಮೋದ್ ಮಧ್ವರಾಜ್ ಲೋಕಾಯುಕ್ತರಿಗೆ ಸಲ್ಲಿಸಿದ ದಾಖಲೆಯಲ್ಲಿ 40 ಕೋಟಿ ರೂಪಾಯಿಯ ದಾಖಲೆ ಮಾತ್ರ ತೋರಿಸಿದ್ದಾರೆ ಎಂದು ಅರೋಪಿಸಿದರು.

ಸಚಿವ ಮಧ್ವರಾಜ್ ನನಗೆ 3ದಿನ ಗಡುವು ಕೊಟ್ಟಿದ್ದರು. ನಾನು ಎರಡನೇ ದಿನಕ್ಕೆ ಉಡುಪಿಗೆ ಬಂದಿದ್ದೇನೆ. ನನ್ನ ವಿರುದ್ದ 10 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ. ನಾನು ನನ್ನ ಹೇಳಿಕೆ ಹಿಂಪಡೆಯುವ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಚಿವ ಮದ್ವರಾಜ್ 1.10 ಕೋಟಿ ಆಸ್ತಿ ಅಡವಿಟ್ಟು 193 ಕೋಟಿ ಸಾಲ ಪಡೆದಿದ್ದಾರೆ ಎಂದು ಹೇಳಿದ ಅವರು, ಸಚಿವ ಮಧ್ವರಾಜ್ ಮಾಡಿರೋದು ದೊಡ್ಡ ವಂಚನೆ ಎಂದು ಆಕ್ರೋಶ ವ್ಯಕ್ತಪಡಿಸಿದರು

English summary
RTI activist TJ Abraham address media persons in Udupi on march 24, he said, I am happy to accept defamation case by Udupi incharge minister Pramod Madwaraj. Abraham requested Madwaraj to file the defamation case as soon as possible .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X