ಹಿಂದೂಗಳು ಬಂದೂಕು, ಲಾಠಿ ಇಟ್ಟುಕೊಳ್ಳಿ: ಸ್ವಾಮೀಜಿ ಹೇಳಿಕೆ ವಿವಾದ

ಉಡುಪಿ, ನವೆಂಬರ್ 26 : ಹಿಂದೂಗಳಿಗೆ ಒಂದು ಮದುವೆ, ಎರಡು ಮಕ್ಕಳ ನಿಯಮವಿದ್ದಂತೆ ಮುಸಲ್ಮಾನರಿಗೂ ಇದೇ ನಿಯಮ ಅನ್ವಯವಾಗಲಿ ಎಂದು ವಾರಣಾಸಿಯ ಕಾಶೀಮಠದ ನರೇಂದ್ರನಂದ್ ಸರಸ್ವತಿ ಮಹಾರಾಜ್ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಧರ್ಮ ಸಂಸದ್ ನಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೂ ಸಮಾನ ಕಾನೂನು ಸಂಹಿತೆ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.

Hindus should keep gun and lathi as mobile phone: Seer

ಜನಸಂಖ್ಯೆ ನಿಯಂತ್ರಣಕ್ಕೆ ಚೀನಾದಲ್ಲಿರುವಂತೆಯೇ ಇಲ್ಲಿಯೂ ಕಠಿಣ ಕಾನೂನು ಜಾರಿಯಾಗಬೇಕು ಎಂದು ಹೇಳಿದ ಅವರು, ಹಿಂದೂಗಳು ಧರ್ಮ ಹಾಗೂ ಸ್ವಯಂ ರಕ್ಷಣೆಗೆ ಪ್ರತಿಯೊಬ್ಬರೂ ಲೈಸೆನ್ಸ್ ಹೊಂದಿದ ಬಂದೂಕು ಹೊಂದಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಒಂದು ಲಕ್ಷದ ಮೊಬೈಲ್ ಹೊಂದುವ ಬದಲು ಬಂದೂಕು, ಲಾಠಿಯನ್ನು ಹೊಂದಬೇಕಾಗಿರುವ ಅಗತ್ಯ ಇದೆ ಎಂದು ಹೇಳಿದರು. ಸಮಾಜಘಾತುಕರು, ಆತಂಕವಾದಿಗಳು, ದೇಶವಿರೋಧಿಗಳೆಂಬ ನಾಯಿ- ಬೆಕ್ಕುಗಳನ್ನು ಕೊನೆಗಾಣಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಚೀನಾ ಸಹಾಯದಿಂದ ಪಾಕಿಸ್ತಾನ ಗಡಿಭಾಗದಲ್ಲಿ ಬಂಕರ್ ನಿರ್ಮಾಣ ಮಾಡಿದೆ. ಭಾರತವೂ ಗಡಿಭಾಗದಲ್ಲಿ ಹೆಲಿಪ್ಯಾಡ್, ಬಂಕರ್ ಗಳನ್ನು ನಿರ್ಮಿಸಿ ತಕ್ಕ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+