ಆಗಸದಿಂದ ಉಡುಪಿಯ ಕಣ್ತುಂಬಿಕೊಳ್ಳಲು ಆರಂಭವಾಗಿದೆ ಹೆಲಿಟೂರಿಸಂ

ಉಡುಪಿ ಜನವರಿ 05: ಹಸಿರ ಹೊದಿಕೆ ಹೊತ್ತ ಪಶ್ಚಿಮ ಘಟ್ಟ. ಸುಂದರ ಕಡಲ ಕಿನಾರೆ, ಶ್ರೀ ಕೃಷ್ಣ ಮಠ, ಸೇಂಟ್ ಮೇರಿಸ್‌ ಐಲ್ಯಾಂಡ್‌ ಸೇರಿದಂತೆ ಉಡುಪಿ ಜಿಲ್ಲೆಯ ಇನ್ನಿತರ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಬಾನೆತ್ತರದಿಂದ ಕಣ್ತುಂಬಿ ಕೊಳ್ಳುವ ಅವಕಾಶ ಪ್ರವಾಸಿಗರಿಗೆ ದೊರೆಯಲಿದೆ.

ಹೌದು , ಉಡುಪಿಯ ಪ್ರಸಿದ್ಧ ಮಲ್ಪೆ ಬೀಚ್‌,ಗಂಗೊಳ್ಳಿ ಕಡಲ ತಡಿ , ಸೇಂಟ್ ಮೇರಿಸ್‌ ಐಲ್ಯಾಂಡ್‌, ಶ್ರೀಕೃಷ್ಣ ಮಠ ಸೇರಿದಂತೆ ಪಶ್ಚಿಮ ಘಟ್ಟಗಳ ಸೌಂದರ್ಯ ವನ್ನು ಬಾನೆತ್ತರದಿಂದ ಸವಿಯಲು ಹೆಲಿಟೂರಿಸಂ ಆರಂಭಿಸಲಾಗಿದೆ. ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ಹಾಗೂ ಜಿಲ್ಲಾಡಳಿತ ಈ ಹೆಲಿಟೂರಿಸಂ ಆರಂಭಿಸಿದ್ದು, ಪ್ರವಾಸಿಗರು ಹೆಲಿಕಾಪ್ಟರ್ ಮೂಲಕ ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಾ ಪ್ರವಾಸಿತಾಣಗಳ ಸೌಂದರ್ಯ ಸವಿಯಬಹುದಾಗಿದೆ.

ನಿನ್ನೆ ಜನವರಿ 4 ರಿಂದ ಈ ಹೆಲಿಟೂರಿಸಂ ಆರಂಭವಾಗಿದ್ದು ಇಂದು ಮತ್ತೆ ನಾಳೆ ಜನವರಿ 6ರಂದು ಕೂಡ ಹೆಲಿಕಾಪ್ಟರ್ ಮೂಲಕ ಉಡುಪಿ ಹಾಗೂ ಕುಂದಾಪುರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಆಗಸದಿಂದ ನೋಡಲು ಅವಕಾಶ ದೊರೆಯಲಿದೆ. ಕೋಟೇಶ್ವರದ ಯುವ ಮೆರಿಡಿಯನ್‌ ಬೇ ರೆಸಾರ್ಟ್‌ನಿಂದ ಪ್ರವಾಸಿಗರು ಹೆಲಿಕಾಪ್ಟರ್ ರೈಡ್ ಮಾಡಬಹದು.ಅದೇ ರೀತಿ ಜನವರಿ.11, 12 ಹಾಗೂ 13ರಂದು ಆದಿ ಉಡುಪಿಯ ಎನ್‌ಸಿಸಿ ಗ್ರೌಂಡ್‌ನಿಂದ ಆಕಾಶಕ್ಕೆ ಹಾರಬಹುದಾಗಿದೆ.

Heli tourism starts in Udupi, 2500 price per each

ಈ ಹೆಲಿಟೂರಿಸಂ ಯೋಜನೆಯಲ್ಲಿ ಜಾಯ್ ರೈಡ್ ಹಾಗೂ ಅಡ್ವೆಂಚರ್ ರೈಡ್‌ ಎಂಬ 2 ಪ್ಯಾಕೇಜ್‌ಗಳಿದ್ದು, ಜಾಯ್‌ ರೈಡ್‌ 8 ನಿಮಿಷದ ಪ್ರಯಾಣವಾಗಿದ್ದರೆ , ಅಡ್ವೆಂಚರ್ ರೈಡ್‌ 10 ನಿಮಿಷದ ಪ್ರಯಾಣವಾಗಿದೆ. ಜಾಯ್ ರೈಡ್ ಗೆ ತಲಾ 2,500 ರೂಪಾಯಿ ನಿಗದಿಪಡಿಸಲಾಗಿದ್ದು ಅಡ್ವೆಂಚರ್ ರೈಡ್ ಗೆ ತಲಾ 3000 ಸಾವಿರ ರೂಪಾಯಿ ಪಾವತಿಸಬೇಕು.

ಪ್ರತಿ ರೈಡ್‌ನಲ್ಲಿ 6 ಮಂದಿ ಕುಳಿತುಕೊಳ್ಳಬಹುದು. ಮೂರು ವರ್ಷಗಳಿಂದ ಯಶಸ್ವಿಯಾಗಿ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ. ಪ್ರತಿಭಾರಿಯೂ ಈ ಹೆಲೆಟೂರಿಸಂ ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನ ದೊರೆಯುತ್ತಿದೆ. ಚಿಪ್ಸನ್‌ ಏವಿಯೇಷನ್‌ ಹೆಲಿಕಾಪ್ಟರ್‌ ಪ್ರವಾಸಿಗರಿಗೆ ಥ್ರಿಲ್ ನೀಡಲಿದ್ದು, ಅನುಭವಿ ಪೈಲಟ್‌ ರಮೇಶ್‌ ಗೋಪಿನಾಥ್‌ ಸಾರಥಿಯಾಗಿರಲಿದ್ದಾರೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+