ಅಪ್ರಾಪ್ತೆಯನ್ನು ರೇಪ್ ಮಾಡಿದ್ದ ಕೆಎಸ್ಸಾರ್ಟಿಸಿ 3 ಸಿಬ್ಬಂದಿ ಬಂಧನ

Posted By:
Subscribe to Oneindia Kannada

ಮಣಿಪಾಲ, ಜುಲೈ 12: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮೂವರು ಸಿಬ್ಬಂದಿಯನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತು ಮಾಡಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.

ರಾಣೆಬೆನ್ನೂರು ಡಿಪೋದ ಕಂಡಕ್ಟರ್ ಕಂ ಡ್ರೈವರ್ ರಘು ಬಡಿಗೇರ(35), ಹಿರೇಕೆರೂರು ಡಿಪೋದ ಕಂಡಕ್ಟರ್‌ ವೈ.ಸಿ. ಕಟ್ಟೇಕಾರ(45) ಮತ್ತು ಡ್ರೈವರ್ ವಿ.ಆರ್.ಹಿರೇಮಠ(40) ಅಮಾನತ್ತಾದ ಸಿಬ್ಬಂದಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

Haveri : Minor girl gang-raped in KSRTC bus, three employees Suspended and arrested

ಹಾವೇರಿ ಜಿಲ್ಲೆಯಲ್ಲಿ ಜುಲೈ 5 ರಂದು ಉಡುಪಿಗೆ ಹೋಗಲು ನಿಂತಿದ್ದ ಅಪ್ರಾಪ್ತೆ ಮೇಲೆ ಬಸ್‌ನಲ್ಲಿ ಮೂವರು ಸಿಬ್ಬಂದಿ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ನಂತರ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿ ಹೇಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಹಾಗೂ ರಾಣೆಬೆನ್ನೂರು ಡಿಪೋ ಬಸ್ ಈಗ ಉಡುಪಿ ಪೊಲೀಸರ ವಶದಲ್ಲಿದೆ.

15ವರ್ಷ ವಯಸ್ಸಿನ ಹುಡುಗಿ ರಾಣೆಬೆನ್ನೂರಿಗೆ ಒಬ್ಬಳೆ ಹೋಗಿ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಮೂಲತಃ ಬೆಳಗಾವಿಯವರಾದರೂ ಸದ್ಯ ಮಣಿಪಾಲದಲ್ಲಿ ಕುಟುಂಬದ ಜತೆ ಈಕೆ ನೆಲೆಸಿದ್ದಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Haveri : Minor girl gang-raped in KSRTC bus, three employees Suspended and arrested by Udupi police.
Please Wait while comments are loading...