ಅಜ್ಜಿ ಆಸ್ತಿಯನ್ನೇ ಲಪಟಾಯಿಸಿದ ಮೊಮ್ಮಗಳು: ಉಡುಪಿಯಲ್ಲೊಂದು ಮನ ಕಲಕುವ ಘಟನೆ
ಉಡುಪಿ, ಅಕ್ಟೋಬರ್ 7: ಮೋಸ, ವಂಚನೆ ಎಂಬುದು ಮನೆಯವರಿಂದಲೇ ನಡೆದರೆ ಏನಾಗುತ್ತದೆ ಎಂಬುದಕ್ಕೆ ಈ ವೃದ್ಧೆಯ ಇಂದಿನ ಸ್ಥಿತಿಯೇ ಸಾಕ್ಷಿ. ತನ್ನ ಮೊಮ್ಮಗಳಿಂದಲೇ ವಂಚನೆಗೊಳಗಾಗಿ ಆಘಾತಗೊಂಡಿರುವ ಉಡುಪಿ ಜಿಲ್ಲೆಯ ಸಾಂತೂರು ಗ್ರಾಮದ 84 ವರ್ಷದ ಸೆಲೆಸ್ಟಿನ್ ಅಂದ್ರಾದೆ, ಇದೀಗ ನ್ಯಾಯ ಯಾಚಿಸಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.
ತಾನು ದುಡಿದು ಗಳಿಸಿದ ಜಮೀನು ಹಾಗೂ ಮನೆಯನ್ನು ಲಪಟಾಯಿಸಿದ್ದು ತಾನೇ ಎತ್ತಿ ಮುದ್ದಾಡಿದ ಮೊಮ್ಮಗಳು ಎಂದು ತಿಳಿಯುತ್ತಲೇ ಪಾರ್ಶ್ವವಾಯು ಪೀಡಿತಳಾಗಿರುವ ಈ ಹಿರಿಯ ಜೀವಕ್ಕೆ ಪೂರ್ಣ ಪ್ರಮಾಣದ ಕಾನೂನು ನೆರವು ನೀಡಲು ಪ್ರತಿಷ್ಠಾನ ಮುಂದಾಗಿದೆ.

ಮಕ್ಕಳಿಗೆ ಆಸ್ತಿ ಬರೆದಿದ್ದ ವೃದ್ಧೆ
1967ರಲ್ಲಿ ಸೆಲೆಸ್ಟಿನ್ ಎರಡು ಎಕರೆ ಜಮೀನನ್ನು ಖರೀದಿಸಿದ್ದರು. ಕ್ರಮೇಣ ಗಂಡ ಗ್ರೆಗರಿ ಡಿಸೋಜರೊಂದಿಗೆ ಸೇರಿ ಮನೆಯನ್ನೂ ಕಟ್ಟಿದರು. ಬಾವಿಯನ್ನು ತೋಡಿದರು. ಕೃಷಿ ಆದಾಯದಿಂದಲೇ ನಾಲ್ಕೂ ಮಂದಿ ಮಕ್ಕಳನ್ನು ಸಾಕಿ ಬೆಳೆಸಿದರು. ಎಲ್ಲರಿಗೂ ಮದುವೆ ಮಾಡಿ ಸಂಸಾರ ಕಟ್ಟಿ ಕೊಟ್ಟದ್ದೂ ಆಯಿತು. ಕೆಲ ವರ್ಷದ ಹಿಂದೆ ಗಂಡ ಗ್ರೆಗರಿ ಸತ್ತಾಗ ಮುಂಬೈಯಲ್ಲಿ ದುಡಿಯುತ್ತಿದ್ದ ಹಿರಿಯ ಮಗ ರೋನಾಲ್ಡ್ ರ ಸಂಸಾರವನ್ನು ಮನೆಗೆ ಕರೆಸಿಕೊಂಡರು. ವೀಲುನಾಮೆ ಬರೆಸಿದರು. ತನ್ನ ಜೀವಿತಾವಧಿ ಅನಂತರ ಮಕ್ಕಳ ನಡುವೆ ಗೊಂದಲ ಉಂಟಾಗದಿರಲೆಂದು ತನ್ನ ಆಸ್ತಿಯಲ್ಲಿ ನಾಲ್ಕು ಮಕ್ಕಳಿಗೂ ಸಮಪಾಲು ನೀಡಿ ವೀಲುನಾಮೆ ಬರೆಸಿದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿದ್ದೂ ಆಯಿತು. ತಾಯಿ ಮಾಡಿದ ವ್ಯವಸ್ಥೆ ನಾಲ್ಕೂ ಮಕ್ಕಳಿಗೆ ತೃಪ್ತಿಯನ್ನು ತಂದಿತ್ತು.

ಕೃಷಿ ಸಮೀಕ್ಷೆಯಿಂದ ಬಯಲಾಯ್ತು ಮೊಮ್ಮಗಳ ಮೋಸ
ಇದೀಗ ಇಪ್ಪತ್ತು ದಿನಗಳ ಹಿಂದೆ ಪಂಚಾಯತ್ ಅಧಿಕಾರಿಗಳು ಸರಕಾರಿ ಯೋಜನೆಯೊಂದಕ್ಕಾಗಿ ಕೃಷಿ ಸಮೀಕ್ಷೆಗೆ ಬಂದಾಗ ಮನೆ ಮಂದಿಗೆಲ್ಲ ಆಶ್ಚರ್ಯವೊಂದು ಕಾದಿತ್ತು. ಮನೆ ಹಾಗೂ ಜಮೀನು ಹಿರಿಯ ಮಗ ರೋನಾಲ್ಡರ ಮಗಳು ರೋಶನಿಯ ಹೆಸರಿನಲ್ಲಿದೆ ಎಂದು ತಿಳಿದೊಡನೆಯೇ ಪಾರ್ಶ್ವವಾಯು ಪೀಡಿತರಾದ ಸೆಲೆಸ್ಟಿನ್ ಇನ್ನೂ ಚೇತರಿಸಿಕೊಂಡಿಲ್ಲ.
ಹತ್ತು ವರ್ಷದ ಹಿಂದೆಯೇ ಮೊಮ್ಮಗಳು ರೋಶನಿ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಳು. ಗಂಡ ದುಬಾಯಿಯಲ್ಲಿ ಉದ್ಯೋಗದಲ್ಲಿದ್ದರೂ ಅವಳು ಮಾತ್ರ ಊರಿನಲ್ಲಿದ್ದ ಅತ್ತೆಯ ಮನೆಯಲ್ಲಿಯೇ ಇದ್ದಳು. ಆಗಾಗ ಅಜ್ಜಿಯ ಮನೆಗೆ ಬಂದು ಹೋಗುತ್ತಿದ್ದಳು. ಚಿಕ್ಕಂದಿನಿಂದಲೇ ಅಜ್ಜಿಗೆ ರೋಶನಿ ಪ್ರೀತಿಯ ಮೊಮ್ಮಗಳು. ಕೆಲ ಸಮಯದಿಂದ ಇದ್ದಕ್ಕಿಂತೆಯೇ ರೋಶನಿ ಕಣ್ಮರೆಯಾಗಿದ್ದಳು. ಮೊದಮೊದಲು ಸಂಪರ್ಕಕ್ಕೆ ಸಿಗುತ್ತಿದ್ದ ರೋಶನಿಯ ಮೊಬೈಲ್ ಕೂಡ ಸ್ತಬ್ದವಾಗಿತ್ತು.

ಗೊತ್ತಿಲ್ಲದೇ ಸಹಿ ಪಡೆದಿದ್ದ ಮೊಮ್ಮಗಳು
ಸಮೀಕ್ಷಾ ಆಧಿಕಾರಿಗಳ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಆಸ್ತಿಗೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳ ಪ್ರತಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳಿಂದ ಪಡೆದುಕೊಂಡು ನೋಡಿದರೆ ಎಲ್ಲದರಲ್ಲೂ ರೋಶನಿಯದ್ದೇ ಹೆಸರು!
2019ರ ಜನವರಿ ತಿಂಗಳಲ್ಲಿ ಸಾಂತೂರಿನ ಮನೆಗೆ ಬಂದ ರೋಶನಿ ತಂದೆ ರೋನಾಲ್ಡರನ್ನೂ ಅಜ್ಜಿಯನ್ನೂ ಮೂಲ್ಕಿಯ ಯಾವುದೋ ಕಚೇರಿಗೆ ಕರೆದೊಯ್ದು ಕೆಲವು ಕಾಗದ ಪತ್ರಗಳಿಗೆ ಇಬ್ಬರ ಹೆಬ್ಬೆಟ್ಟು ಗುರುತು ಹಾಗೂ ಸಹಿ ಪಡೆದಿದ್ದಳು. ಇಬ್ಬರೂ ಅವಿದ್ಯಾವಂತರಾದ್ದರಿಂದ ಅವೆಲ್ಲ ಏನೆಂದು ತಿಳಿಯಲಿಲ್ಲ. ಪುನಃ ವಿಚಾರಿಸಲಾಗಿ "ರೈತರಿಗೆ ಸಾಲ ನೀಡುವ ಯೋಜನೆಯೊಂದು ಬಂದಿದೆ. ಅದಕ್ಕಾಗಿ ನೋಂದಣಿ ಮಾಡಲು ಬಂದಿದ್ದೇವೆ" ಎಂದಿದ್ದಳು ರೋಶನಿ.
Recommended Video

ಬೀದಿ ಪಾಲಾಗಿರುವ ಅಜ್ಜಿ
ಅದಾಗಿ ಮೂರನೇ ತಿಂಗಳಲ್ಲಿ ತಂದೆ ರೋನಾಲ್ಡ್ ಅವರನ್ನು ಪುನಃ ಅದೇ ಕಚೇರಿಗೆ ಕರೆದೊಯ್ದು ಅದೇ ತರಹದ ಸಹಿಗಳನ್ನು ಪಡೆದಿದ್ದಳು. ಅರ್ಥಾತ್, ರೋಶನಿಯು ಕೇವಲ ಮೂರೇ ತಿಂಗಳಲ್ಲಿ ಮೋಸದಿಂದ ಅಜ್ಜಿಯಿಂದ ಆಸ್ತಿಯನ್ನು ತಂದೆ ಹೆಸರಿಗೂ ಅಲ್ಲಿಂದ ಪುನಃ ಯಾರಿಗೂ ತಿಳಿಯದಂತೇ ತನ್ನ ಹೆಸರಿಗೂ ಮಾಡಿಕೊಂಡಿದ್ದಳು.
ಇದೀಗ ಮೊಮ್ಮಗಳ ಮೋಸದಿಂದ ವೃದ್ಧೆ ಬೀದಿಪಾಲಾಗಿದ್ದಾರೆ. ಸೆಲೆಸ್ಟಿನ್ ಅಂದ್ರಾದೆ, ನ್ಯಾಯಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications