ಬೈಂದೂರು ತಾಲೂಕಿಗೆ ಗಂಗೊಳ್ಳಿ ಸೇರ್ಪಡೆಗೆ ವಿರೋಧ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಎಪ್ರಿಲ್ 14: ಇತ್ತೀಚೆಗೆ ಮಂಡನೆಗೊಂಡ ಬಜೆಟ್ ನಲ್ಲಿ ಉಡುಪಿ ಜಿಲ್ಲೆಯ ಬೈಂದೂರನ್ನ ಪ್ರತ್ಯೇಕ ತಾಲೂಕು ಎಂದು ಘೋಷಿಸಲಾಗಿತ್ತು. ಇದೀಗ ಈ ನೂತನ ತಾಲೂಕಿಗೆ ಗಂಗೊಳ್ಳಿ ಗ್ರಾಮವನ್ನ ಸೇರಿಸಲಾಗಿದೆ. ಇದಕ್ಕೆ ಇಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಗಂಗೊಳ್ಳಿ ಗ್ರಾಮ ಕುಂದಾಪುರದಲ್ಲೇ ಇರಲಿ. ಬೈಂದೂರಿಗೆ ಸೇರಿಸುವುದು ಬೇಡ ಎಂದು ಗ್ರಾಮಸ್ಥರು ಶುಕ್ರವಾರ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಗಂಗೊಳ್ಳಿ ಗಾ.ಪಂ. ಎದುರು ಪ್ರತಿಭಟನೆ ಸಹ ನಡೆಸಿದರು.[ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ರಾಜೇಶ್ವರಿ ಜಾಮೀನು ಅರ್ಜಿ ತಿರಸ್ಕೃತ]

 Gongolli villagers not interested to join newborn talluk Baindur

ಇನ್ನು ಈ ಕುರಿತ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಈ ಕುರಿತು ಚರ್ಚಿಸುತ್ತೇನೆ ಎಂದು ಉಡುಪಿ ಡಿಸಿ ಭರವಸೆ ನೀಡಿದ್ದಾರೆ.

ವಿರೋಧ ಏಕೆ..?

ಗಂಗೊಳ್ಳಿಯ ಜನರಿಗೆ ಕುಂದಾಪುರದೊಂದಿಗೆ ಅನೇಕ ದಶಕಗಳ ಅವಿನಾಭಾವ ಸಂಬಂಧವಿದೆ. ಗಂಗೊಳ್ಳಿಯ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಹಾಗೂ ವ್ಯವಹಾರಗಳಿಗೆ ಕುಂದಾಪುರ ನಗರವನ್ನೇ ಅವಲಂಬಿಸಿದ್ದಾರೆ. ಇದು ಹತ್ತಿರ ಕೂಡ ಇದೆ.

 Gongolli villagers not interested to join newborn talluk Baindur

ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆ ನಿರ್ಮಾಣಗೊಂಡಲ್ಲಿ ಗಂಗೊಳ್ಳಿ ಜನರು ಕೇವಲ ಒಂದೂವರೆ ಕಿ.ಮೀ. ದೂರ ಕ್ರಮಿಸಿದರೆ ಕುಂದಾಪುರ ತಲುಪಬಹುದು. ಹೀಗಾಗಿ ಕುಂದಾಪುರ ಜತೆಗೇ ಇರಲಿ. ಇಲ್ಲದಿದ್ದಲ್ಲಿ ತಾಲೂಕು ಕೇಂದ್ರಕ್ಕೆ ಓಡಾಟ ಕಷ್ಟವಾಗುತ್ತದೆ ಎನ್ನುವುದು ಇಲ್ಲಿನ ಜನರ ದೂರು.
ಒಂದೊಮ್ಮೆ ಗಂಗೊಳ್ಳಿ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆ ಗೊಳಿಸುವ ನಿರ್ಧಾರವನ್ನ ಹಿಂಪಡೆಯದಿದ್ದಲ್ಲಿಸಂಘಟಿತ ಹೋರಾಟ ಮಾಡಲಾಗುವುದೆಂದು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ['ಸೈಬರ್ ಕ್ರೈಂ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲು' ]

 Gongolli villagers not interested to join newborn talluk Baindur

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People of Gangolli Village protested against the decision to join the village into newborn talluk Baindur. People say that they will stay back with their old talluk Kundapur in Udupi.
Please Wait while comments are loading...