ಘಟ ಬಂಧನ್ ದೇಶದ ಭವಿಷ್ಯಕ್ಕೆ ಮಾರಕ: ಬಿಜೆ ಪುಟ್ಟಸ್ವಾಮಿ

ಉಡುಪಿ, ಜನವರಿ 28: ದೇಶದಲ್ಲಿ ಎಲ್ಲಾ ಪಕ್ಷಗಳು ಘಟ ಬಂಧನ್ ಮಾಡಿಕೊಂಡಿವೆ. ಆದರೆ ಇದು ನೀತಿ ನಿಯಮ ಇಲ್ಲದ ಅನೈತಿಕ ಬಂಧನ್. ದೇಶದ ಭವಿಷ್ಯಕ್ಕೆ ಇದು ಮಾರಕವಾಗಲಿದ್ದು, ಆರ್ಥಿಕ ಭದ್ರತೆ, ರಕ್ಷಣೆಗೆ ಹೊಡೆತ ಬೀಳಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ರಾಜ್ಯಾಧ್ಯಕ್ಷ ಬಿಜೆ ಪುಟ್ಟಸ್ವಾಮಿ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ರಾಜ್ಯದ ಸಾಂದರ್ಭಿಕ ಸಿಎಂ ಆಗಿದ್ದಾರೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ದೇವೇಗೌಡರಿಗೆ ಶರಣಾಗಿದೆ. 2 ರಿಂದ 10 ಸೀಟು ವಿಸ್ತರಣೆ ಮಾಡೋದ್ರಲ್ಲಿ ದೇವೇಗೌಡ ಯಶಸ್ವಿಯಾಗಿದ್ದು, ಸಿಎಂ ರೈತರ ತುಟಿಗೆ ತುಪ್ಪಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮೈತ್ರಿಯಿಂದ ದೇಶ ಕಾಪಾಡಲು ಸಾಧ್ಯವಿಲ್ಲ ಎಂದರು.

ಸಿಎಂ ರಾಜೀನಾಮೆಗೆ ಸದಾ ಸಿದ್ದರಾಗಿರ್ತಾರೆ. ಅಷ್ಟೇ ಅಲ್ಲ, ಎಲ್ಲಾ ಆಶ್ವಾಸನೆಗಳಿಂದ ನುಣಿಚಿಕೊಳ್ಳಲು ರಾಜೀನಾಮೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

Gathbandhan will be fatal to the countrys future:BJ Puttaswamy

ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪ್ರಿಯಾಂಕಾ ಪ್ರವೇಶ ಬಿಜೆಪಿಗೆ ಎಫೆಕ್ಟಾಗಲ್ಲ. ಪ್ರಿಯಾಂಕಾ ಪತಿ ವಾದ್ರಾನ ಮೇಲೆಯೇ ಸಾಕಷ್ಟು ಕೇಸುಗಳಿವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+