ಮುಸ್ಲಿಂ ಯುವತಿಯೊಂದಿಗೆ ಮಾತಾಡುತ್ತಿದ್ದ ಯುವಕನ ಮೇಲೆ ಹಲ್ಲೆ

Posted By:
Subscribe to Oneindia Kannada

ಉಡುಪಿ, ಫೆಬ್ರವರಿ 02 : ತಮ್ಮ ಧರ್ಮದ ಯುವತಿಯ ಜೊತೆ ಮಾತನಾಡುತ್ತಿದ್ದಾನೆಂಬ ಕಾರಣಕ್ಕೆ ಕೋಪೋದ್ರಿಕ್ತರಾದ ಮುಸ್ಲಿಂ ಮತಾಂಧ ಯುವಕರು ಹಿಂದೂ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಉಡುಪಿ ಬಳಿಯ ಶಿರ್ವದಲ್ಲಿ ಗುರುವಾರ ನಡೆದಿದೆ.

ಶಿರ್ವದ ಸೈಂಟ್ ಮೇರಿ ಇಗರ್ಜಿಯ ವಾರ್ಷಿಕ ಉತ್ಸವದ ವೇಳೆ ಈ ಘಟನೆ ಸಂಭವಿಸಿದೆ. ಕಟಪಾಡಿಯ ಚೇತನ್ ಎಂಬಾತ ಅದೇ ಊರಿನ ಮುಸ್ಲಿಂ ಯುವತಿಯೋರ್ವಳ ಜೊತೆ ಸ್ನೇಹ ಹೊಂದಿದ್ದ. ಗುರುವಾರ ನಡೆಯುತ್ತಿದ್ದ ಚರ್ಚ್ ಉತ್ಸವದ ವೇಳೆ ಇಬ್ಬರೂ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು.[ಉಡುಪಿ: ವೃದ್ದೆ ಉದರದಿಂದ 16 ಕೆಜಿ ಗಡ್ದೆ ಹೊರ ತೆಗೆದ ಕೆಎಂಸಿ ವೈದ್ಯರು]

Gang beats up youth talking to girl from another religion in udupi

ಅಲ್ಲಿಗೆ ಆಗಮಿಸಿದ ಇಬ್ಬರು ಮುಸ್ಲಿಂ ಯುವಕರು ನಮ್ಮ ಧರ್ಮದ ಹುಡುಗಿಯ ಜೊತೆ ಮಾತನಾಡುತ್ತಿದ್ದೀಯಾ ಎಂದು ಚೇತನ್‌ನನ್ನು ತಳ್ಳಾಡಿ ಹಲ್ಲೆ ನಡೆಸಿದ್ದಾರೆ. ಆಗ ಚೇತನ್ ಅವರಿಬ್ಬರನ್ನು ಎದುರಿಸಿದ್ದಾರೆ. ಆದರೆ ಬಳಿಕ ಸುಮಾರು 15ಕ್ಕೂ ಹೆಚ್ಚು ಮಂದಿ ಇದ್ದ ಮುಸ್ಲಿಂ ಯುವಕರ ಗುಂಪು ಏಕಾಏಕಿಯಾಗಿ ಚೇತನ್ ಮೇಲೆ ಕಬ್ಬಿಣದ ಸಲಾಕೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ.[ಕಾರ್ಕಳ ನಕ್ಸಲ್ ಮುಖಂಡ ನೀಲಗುಳಿ ಸಿಐಡಿ ಕಸ್ಟಡಿಗೆ]

ಗಂಭೀರವಾಗಿ ಗಾಯಗೊಂಡ ಚೇತನ್‌ರನ್ನು ಮತ್ತೆ ಎಳೆದಾಡಿಕೊಂಡು ಹೋದ ಗುಂಪು ಹತ್ತಿರವೆ ಇದ್ದ ಜಯಂಟ್ ವೀಲ್ ಬಳಿ ಎಸೆದು ಹೋಗಿದೆ. ಈ ವೇಳೆ ಚೇತನ್ ಜೊತೆ ಇದ್ದ ಸ್ನೇಹಿತರು ಘಟನೆಗೆ ಮೂಕ ಪ್ರೇಕ್ಷಕರಾಗಿದ್ದು ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚೇತನ್ ಉಡುಪಿಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಶಿರ್ವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
: A youth belonging to Hindu religion has been beaten up by muslim youth for speaking to a girl belonging to their community. The incident happened on Thursday at St Mary Church in Shirva in Udupi district. He is badly injured and admitted to hospital.
Please Wait while comments are loading...