ವೈದ್ಯರ ಕೈ ಸೇರಿದ ಎಫ್ಎಸ್ಎಲ್ ವರದಿ: ಶೀರೂರು ಶ್ರೀಗಳದ್ದು ಸಹಜ ಸಾವು
Recommended Video

Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಎಫ್ ಎಸ್ ಎಲ್ ವರದಿ ಬಹಿರಂಗಪಡಿಸಿದ ಅಂಶ | Oneindia Kannada
ಉಡುಪಿ, ಆಗಸ್ಟ್.22: ಶೀರೂರು ಶ್ರೀ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಎಸ್.ಎಲ್ ವರದಿ ವೈದ್ಯರ ಕೈ ಸೇರಿದೆ. ಆದರೆ ಎಫ್.ಎಸ್.ಎಲ್ ವರದಿಯಲ್ಲೂ ಶೀರೂರು ಶ್ರೀ ಸಹಜ ಸಾವು ಎಂದು ಉಲ್ಲೇಖವಾಗಿದೆ ಎಂಬ ಅಂಶ ತಿಳಿದು ಬಂದಿದೆ.
ಶ್ರೀಗಳ ದೇಹದಲ್ಲಿ ವಿಷದ ಅಂಶವಿಲ್ಲ ಎಂಬ ವರದಿ ನೀಡಲಾಗಿದ್ದು, ಎರಡು ದಿನದಲ್ಲಿ ಮರಣೋತ್ತರ ಮತ್ತು ಎಫ್.ಎಸ್.ಎಲ್ ವರದಿ ಆಧರಿಸಿ ಮಣಿಪಾಲ ವೈದ್ಯರು ಅಂತಿಮ ವರದಿ ನೀಡಲಿದ್ದಾರೆ.
ಜುಲೈ.19ರಂದು ಶೀರೂರು ಶ್ರೀಗಳು ಸಾವನ್ನಪ್ಪಿದ್ದು, ವಿಷಪ್ರಾಶನದಿಂದ ಸಾವನ್ನಪ್ಪಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಬಹುಅಂಗಾಗ ವೈಫಲ್ಯದಿಂದ ಶ್ರೀಗಳ ಸಾವು ಸಂಭವಿಸಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖವಾಗಿದೆ.

ಎಫ್.ಎಸ್.ಎಲ್ ವರದಿ ಬಂದ ಹಿನ್ನಲೆಯಲ್ಲಿ ಆಗಸ್ಟ್ 24, 25 ರಂದು ಶ್ರೀಗಳ ಆರಾಧನೆ ಕ್ರಿಯೆ ನಡೆಯಲಿದೆ. ಆರಾಧನೆ ಶೀರೂರು ಮೂಲಮಠದಲ್ಲಿ ಸೋದೆ ಮಠದ ನೇತೃತ್ವದಲ್ಲಿ ನಡೆಯಲಿದೆ.












Click it and Unblock the Notifications