'ಸೈಬರ್ ಕ್ರೈಂ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲು'
ಉಡುಪಿ, ಏಪ್ರಿಲ್ 13 : ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿರುವ ಸೈಬರ್ ಅಪರಾಧಗಳ ನಿಯಂತ್ರಣವೇ ಇಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ ಎಂದು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಹೇಳಿದ್ದಾರೆ.
ಅವರು ಮಣಿಪಾಲ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧ ಕುರಿತ ಉಪನ್ಯಾಸ ನೀಡಿದ ಅಣ್ಣಾಮಲೈ, ಮೊಬೈಲ್ ಬಳಕೆದಾರರು ಮಾರುಕಟ್ಟೆಗಳಲ್ಲಿ ದೊರೆಯುವ ಎಲ್ಲಾ ಆಪ್ ಗಳಲ್ಲಿ ನಂಬಿಕೆ ಇಡಬಾರದು. ಮೊಬೈಲ್ ಫೋನುಗಳು ಅತ್ಯಂತ ಅಪಾಯಕಾರಿ ಸೈಬರ್ ಅಪರಾಧಗಳ ತಾಣ ಎಂದರು.

ಉಚಿತ ವೈ-ಫೈ ಬಳಕೆ ಅತ್ಯಂತ ಅಪಾಯಕಾರಿ ಇದರಿಂದ ಜನಸಾಮಾನ್ಯರ ರಹಸ್ಯ ಮಾಹಿತಿಗಳನ್ನು ಸುಲಭವಾಗಿ ದೋಚಿಕೊಳ್ಳಬಹುದು.
ಇದು ಕರೆನ್ಸಿ ವಂಚನೆಗಳಿಗೆ ಸುಲಭ ದಾರಿಯಾಗಬಹುದು ಹಾಗಾಗಿ ಜನರು ಉಚಿತ ವೈ-ಫೈ ಬಳಕೆಯನ್ನು ನಿರ್ಲಕ್ಷಿಸುವುದೇ ಉತ್ತಮ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.












Click it and Unblock the Notifications