ವೀರಪ್ಪ ಮೊಯಿಲಿ ಓರ್ವ ತಲೆತಿರುಕ: ಯಡಿಯೂರಪ್ಪ
ಉಡುಪಿ, ಮೇ 05 : ಉಡುಪಿಯ ಬೈಂದೂರು ವಿಧಾನಸಭೆ ವ್ಯಾಪ್ತಿಯಲ್ಲಿ ಇಂದು ಶನಿವಾರ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಪರ ಮತ ಯಾಚನೆ ಮಾಡಿದರು.
ಸಿದ್ಧಾಪುರದಲ್ಲಿ ಪ್ರಚಾರಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಪ್ರಣಾಳಿಕೆ ಕಾಂಗ್ರೆಸ್ ನ ಕಾಪಿ ಎಂಬ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿಯವರ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದರು. ಯಡಿಯೂರಪ್ಪ ವೀರಪ್ಪ ಮೊಯಿಲಿ ಓರ್ವ ತಲೆತಿರುಕ. ನಾವು ಕಾಂಗ್ರೆಸ್ ನ ಪ್ರಣಾಳಿಕೆ ನಕಲು ಮಾಡಿಲ್ಲ ಅಂದರು.
ಲೋಕಾಯುಕ್ತ ಬಲಪಡಿಸ್ತೇವೆ ಅಂತ ಈಗ ಕಾಂಗ್ರೆಸ್ ನವರು ಹೇಳ್ತಿದ್ದಾರೆ. ಇಷ್ಟು ದಿನ ಏನು ಇವರು ಕತ್ತೆ ಕಾಯ್ತಾ ಇದ್ರಾ ಅಂತ ಎಂದು ಖಾರವಾಗಿ ಪ್ರಶ್ನಿಸಿದರು.

ಉತ್ತರ ಪ್ರದೇಶದಲ್ಲಿ ಹೇಗೆ ಅಧಿಕಾರಕ್ಕೆ ಬಂತೋ, ಹಾಗೆಯೇ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರದಲ್ಲಿ ಬರಲಿದೆ. 22 ನೇ ರಾಜ್ಯವಾಗಿ ಕರ್ನಾಟಕದಲ್ಲಿ ಬಿಜೆಪಿ ನೂರಕ್ಕೆ ನೂರು ಸ್ಥಾನ ಗೆಲ್ಲಲಿದೆ. ಮತ್ತೆ ನಾನು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು. ಕಾಂಗ್ರೆಸ್ ನ ಸ್ಥಿತಿ ಒಂದೇ ಮನೆ ಮೂರು ಬಾಗಿಲುಗಳು ಎಂಬಂತಾಗಿದೆ.
ಖರ್ಗೆ, ಸಿದ್ಧರಾಮಯ್ಯ ಮತ್ತು ಪರಮೇಶ್ವರ್ ನಾನೇ ಸಿಎಂ ಎನ್ನುತ್ತಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾದಾಮಿಯಲ್ಲಿ ಸೋಲುವುದು ನಿಶ್ಚಿತ ಎಂದ ಯಡಿಯೂರಪ್ಪ, ನಾವು ಅಧಿಕಾರಕ್ಕೆ ಬಂದ್ರೆ ಒಂದು ಲಕ್ಷದವರೆಗೆ ರೈತರ ಸಾಲಮನ್ನಾ ಮಾಡುತ್ತೇವೆ.
ನಾನು ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆ ಒಳಗೆ ಈ ಕೆಲಸ ಮಾಡುತ್ತೇನೆ ಅಂತ ಭರವಸೆ ನೀಡಿದರು.
ನಾವು ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಿದ್ದೇವೆ. ಕಾಂಗ್ರೆಸ್ ನವರು ಏನು ಮಾಡಿದ್ದಾರೆ? ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬದಾಮಿ ಎರಡೂ ಕಡೆ ಸೋಲುವುದು ಖಚಿತ ಅಂತ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.












Click it and Unblock the Notifications