ಶಿರೂರು ಮಠದಲ್ಲಿ ಪಟ್ಟಾಭಿಷೇಕ; ಧಾರ್ಮಿಕ ಕಾರ್ಯಕ್ರಮ ಆರಂಭ
ಉಡುಪಿ, ಮೇ 12; ಉಡುಪಿ ಶಿರೂರು ಮಠದ ಯತಿ ಲಕ್ಷ್ಮೀವರ ತೀರ್ಥ ಶ್ರೀಗಳ ನಿಧನದಿಂದ ಸರಿಸುಮಾರು ಎರಡು ವರ್ಷಗಳಿಂದ ತೆರವಾಗಿರುವ ಶಿರೂರು ಮಠದ ಉತ್ತರಾಧಿಕಾರಿಯ ನೇಮಕ ಈಗಾಗಲೇ ನಡೆದಿದೆ. ಮೇ 14ರಂದು ನೂತನ ಶ್ರೀಗಳ ಪಟ್ಟಾಭಿಷೇಕ ನಡೆಯಲಿದೆ.
ನೂತನ ಉತ್ತರಾಧಿಕಾರಿಯಾಗಿ ಚಿ.ಅನಿರುದ್ಧ ಸರಳತ್ತಾಯ ನಿಯೋಜನೆಗೊಂಡಿದ್ದಾರೆ. ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿ ಕಾರ್ಯಕ್ರಮಗಳು ಉಡುಪಿಯ ಶಿರೂರು ಮೂಲ ಮಠದಲ್ಲಿ ನಡೆಯುತ್ತಿವೆ.
ದೇವತಾ ಪ್ರಾರ್ಥನೆ, ವಟುವಿಗೆ ಫಲ ಪ್ರಧಾನ ಹಾಗೂ ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ, ಪವಮಾನ ಪೂಯಮಾನ ಮಂಡಲ ಹೋಮ, ಧನ್ವಂತರಿ ಹೋಮ, ನವಗ್ರಹ ಹೋಮ, ತಿಲಹೋಮ, ಪ್ರಾಯಶ್ಚಿತ್ತ ಯಾಗಾದಿ ಕರ್ಮಾಂಗಗಳು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯುತ್ತಿವೆ.

ಅವಧಾನಿ ಸುಬ್ರಹ್ಮಣ್ಯ ಭಟ್ಟ ಹಾಗೂ ವಿದ್ವಾನ್ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಮೇ 14ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೂಲಮಠದಲ್ಲಿ ಜರುಗಲಿವೆ.
ಸನ್ಯಾಸ ದೀಕ್ಷೆ, ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕಕ್ಕೆ ಸಂಬಂಧಿಸಿದ ವಿವಿಧ ಧಾರ್ಮಿಕ ವಿಧಿವಿಧಾನಗಳು ಮುಗಿದ ಬಳಿಕ ಮೇ14 ರಂದು ದೀಕ್ಷೆ, ಪಟ್ಟಾಭಿಷೇಕ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.












Click it and Unblock the Notifications