ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರ್ಮಾಳು ಕಡಲತೀರದಲ್ಲಿ ರಾಶಿ ರಾಶಿ ಮೀನು:ಕರಾವಳಿಗರಿಗೆ ಹಬ್ಬವೋ ಹಬ್ಬ

|
Google Oneindia Kannada News

Recommended Video

ಉಡುಪಿಯಲ್ಲಿ ಮತ್ತೆ ಆರಂಭವಾಯ್ತು ಮೀನು ವ್ಯಾಪಾರ | Oneindia Kannada

ಉಡುಪಿ, ಸೆಪ್ಟೆಂಬರ್. 28 : ಉಡುಪಿ ಕಡಲತಡಿಯಲ್ಲಿ ಮತ್ತೊಮ್ಮೆ ಮೀನಿನ ಸುಗ್ಗಿ . ಎರ್ಮಾಳ ಕಡಲ ತೀರದಲ್ಲಿ ಗುರುವಾರ (ಸೆ.27)ಮೀನು ಪ್ರಿಯರಿಗೆ ಅಕ್ಷರಶಃ ಮೀನು ಸುಗ್ಗಿಯ ವಾತಾವರಣ ನಿರ್ಮಾಣವಾಗಿತ್ತು. ಕಾಪು ತಾಲೂಕಿನ ಎರ್ಮಾಳು ಕಡಲ ತೀರದಲ್ಲಿ ಮೀನುಗಾರರು ಬೀಸಿದ ಏಂಡಿ ಬಲೆಗೆ ಭಾರೀ ಪ್ರಮಾಣದಲ್ಲಿ ಮೀನುಗಳು ಬಿದ್ದವು.

ಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್: ಏನುಂಟು, ಏನಿಲ್ಲ ಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್: ಏನುಂಟು, ಏನಿಲ್ಲ

ಮೀನು ಬೇಟೆಗೆ ಕಡಲಿಗಿಳಿದ ಸ್ಥಳೀಯ ಮೀನುಗಾರರಿಗೆ ಸಮುದ್ರ ತೀರದ ಅತ್ಯಂತ ಸಮೀಪದಲ್ಲೇ ಭಾರೀ ಪ್ರಮಾಣದಲ್ಲಿ ಮೀನು ಬಲೆಗೆ ಬಿದ್ದಿದೆ. ಬೀಸಿದ ಬಲೆಗೆ ಸಾವಿರಾರು ಮೀನುಗಳು ಸಿಕ್ಕಿವೆ. ಅದು ವಿವಿಧ ಜಾತಿಯ ಸಾವಿರಾರು ಮೀನುಗಳು ಏಕಕಾಲಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಮೀನುಗಾರರು ಸ್ಥಳದಲ್ಲೇ ಕಡಿಮೆ‌ ದರದಲ್ಲಿ ಮೀನು ಮಾರಾಟ ಮಾಡಿದ್ದಾರೆ.

ಕಾಪು ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೊಲೆಂಜಿರ್ ಮೀನುಗಳು! ಕಾಪು ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೊಲೆಂಜಿರ್ ಮೀನುಗಳು!

ಮಧ್ಯಾಹ್ನ ಭಾರೀ ಪ್ರಮಾಣದಲ್ಲಿ ಮೀನು ಬಲೆಗೆ ಬಿದ್ದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಜನ ಕಡಲ ತಡಿಗೆ ಧಾವಿಸಿ ಬಂದರು. ಮಧ್ಯಾಹ್ನ ಆರಂಭವಾದ ಮೀನಿನ ವ್ಯಾಪಾರ ಕತ್ತಲಾಗುವವರೆಗೂ ನಡೆದಿದೆ.

Fish harvesting again at Udupi beach

ಕಳೆದ ತಿಂಗಳು ಪಡುಬಿದ್ರಿಯ ಕೋಡಿಯಲ್ಲಿ ಕಿಲೋಮೀಟರ್ ಗಟ್ಟಲೆ ಸಿಲ್ವರ್ ಅಥವಾ ಬೊಳಿಂಜೀರ್ ಜಾತಿಯ ಮೀನು ದಡಕ್ಕೆ ಬಂದು ಬಿದ್ದಿದ್ದು, ಈ ವಿದ್ಯಮಾನ ರಾಜ್ಯದಾದ್ಯಂತ ಎಲ್ಲರ ಗಮನ ಸೆಳೆದಿತ್ತು.

ವೈರಲ್ ವಿಡೀಯೋ: ವಿಮಾನದಿಂದ ಉದುರುವ ಮೀನುಗಳು, ಇದು ಪವಾಡವಲ್ಲ! ವೈರಲ್ ವಿಡೀಯೋ: ವಿಮಾನದಿಂದ ಉದುರುವ ಮೀನುಗಳು, ಇದು ಪವಾಡವಲ್ಲ!

ಕಿಲೋಮೀಟರ್ ಗಟ್ಟಲೇ ಕಡಲ ತಡಿಯಲ್ಲಿ ಬೊಳೆಂಜೀರ್ ದೊರೆತಿದ್ದ ಹಿನ್ನೆಲೆಯಲ್ಲಿ ಅಂದು ಕೂಡ ಮತ್ಸ್ಯಪ್ರಿಯರಿಗೆ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.

Fish harvesting again at Udupi beach

ಈಗ ಪಡುಬಿದ್ರಿಯಿಂದ ಕೆಲವೇ ದೂರವಿರುವ ಎರ್ಮಾಳು ಕಡಲ ತೀರದಲ್ಲಿ ಸಾವಿರಾರು ಮೀನುಗಳು ಸಿಕ್ಕಿರುವುದು ಎಲ್ಲರ ಗಮನ ಸೆಳೆದಿದೆ.

English summary
Fish harvesting again at Udupi beach. Local fishermen have the largest number of fish Yesterday. Here's a short article on this topic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X