ಉಡುಪಿ - ಕೋಟೇಶ್ವರ ಮೂಲದ ಮೂಳೆ ಡಾಕ್ಟರಿಗೆ ಲಂಡನ್ ಪ್ರಶಸ್ತಿ

By: ಉಡುಪಿ, ಪ್ರತಿನಿಧಿ
Subscribe to Oneindia Kannada

ಉಡುಪಿ, ಏಪ್ರಿಲ್ 12: ಉಡುಪಿ ಜಿಲ್ಲೆಯ ಕೋಟೇಶ್ವರ ಮೂಲದ ವೈದ್ಯ ಡಾ. ಎ. ಎ. ಶೆಟ್ಟಿಗೆ ಲಂಡನಿನಲ್ಲಿ 'ಹೌಸ್ ಆಫ್ ಲಾರ್ಡ್' ನ 'ಔಟ್ ಸ್ಟ್ಯಾಂಡಿಂಗ್ ಕ್ಲಿನಿಕಲ್ ಎಕ್ಸಲೆನ್ಸ್' ಪದವಿ ಪ್ರದಾನ ಮಾಡಲಾಯಿತು.

ಡಾ. ಎ. ಎ. ಶೆಟ್ಟಿ ಮೂಲತಃ ಉಡುಪಿಯವರು. ಎಲುಬು ಮತ್ತು ಮೂಳೆ ತಜ್ಞರಾದ ಶೆಟ್ಟಿ ರಾಯಲ್ ಕಾಲೇಜಿನ ಪ್ರೊಫೆಸರ್ ಆಗಿದ್ದಾರೆ. ಜತೆಗೆ ಯೂನಿವರ್ಸಿಟಿ ಆಫ್ ಕೆಂಟ್ ನ ನಿರ್ದೇಶಕರಾಗಿದ್ದಾರೆ. ಭಾರತದ ಮಣಿಪಾಲದ ಕೆ. ಎಂ. ಸಿ , ಧಾರವಾಡದ ಎಸ್. ಡಿ. ಎಂ, ತಮಿಳು ನಾಡಿನ ಎಂ. ಜಿ. ಆರ್ ವೈದ್ಯಕೀಯ ಸಂಸ್ಥೆಗಲ್ಲಿ ಕೆಲಸ ನಿರ್ವಹಿಸಿದ್ದಾರೆ.[800 ಕಾರ್ಮಿಕರ ಪ್ರತಿಭಟನೆಗೆ ಮಣಿದ ಸುಜ್ಲಾನ್, ನಿರ್ಧಾರ ವಾಪಸ್]

Dr A A Shetty from Koteshwara, honored by House of Lords in London

ಸ್ಟೆಮ್ ಸೆಲ್ ರಿಸರ್ಚ್, ಕಾಟ್ರಿಜ್ ಟ್ರಾನ್ಸ್ ಪ್ಲಾಂಟ್, ರೊಬೋಟಿಕ್ ಸರ್ಜರಿ ಮುಂತಾದ ವಿಷಯಗಳಲ್ಲಿ ಪರಿಣಿತರಾದ ಡಾ. ಎ. ಎ. ಶೆಟ್ಟರನ್ನು ವೈದ್ಯಕೀಯ ಕ್ಷೇತ್ರದಲ್ಲಿ 'ಸರ್ಜನರ ಸರ್ಜನ್' ಎಂದು ಸಂಬೋಧಿಸಲಾಗುತ್ತದೆ.

ಕಳೆದ ಹಲವಾರು ವರ್ಷಗಳಿಂದ ಜಗತ್ತಿನಾದ್ಯಂತ ಬಹಳಷ್ಟು ವೈದ್ಯಕೀಯ ವಿದ್ಯಾರ್ಥಿಗಳನ್ನು ಉತ್ತಮ ಸರ್ಜನ್ ಗಳಾಗಿ ರೂಪಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಇವರ ಲೇಖನ , ಪ್ರಬಂಧ , ರಿಸರ್ಚ್ ಪೇಪರ್ ಇಂದಿಗೂ ಹೆಸರುವಾಸಿ.[800 ಕಾರ್ಮಿಕರಿಂದ ಸುಜ್ಲಾನ್ ಕಂಪೆನಿಗೆ ಮುತ್ತಿಗೆ, ಪರಿಸ್ಥಿತಿ ಉದ್ವಿಗ್ನ]

Dr A A Shetty from Koteshwara, honored by House of Lords in London

ಇವರು ಬರೆದ 'ಟೆಕ್ನಿಕ್ಸ್ ಇನ್ ಕಾಟ್ರಿಜ್ ರಿಪೆರ್ ಸರ್ಜರಿ' ಎಂಬ ಪುಸ್ತಕ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಹೆಗ್ಗಳಿಕೆ ಪಡೆದಿದೆ. ಇವರು ಹುಟ್ಟು ಹಾಕಿದ ಸಂಸ್ಥೆಯೊಂದು ಸರ್ಜರಿಯ ಕುರಿತು ತರಬೇತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು , ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮನ್ನಣೆ ಪಡೆದಿದೆ.

ಕೆಲವು ನೊಬೆಲ್ ಪುರಸ್ಕೃತರ ಜತೆಯಲ್ಲಿ ಡಾ. ಎ. ಎ. ಶೆಟ್ಟಿಯವರ ಹೆಸರು ಕೂಡಾ ಪ್ರತಿಷ್ಟಿತ ರಾಯಲ್ ಸೊಸೈಟಿ ಆಫ್ ಮೆಡಿಸಿನ್ ಪ್ರಕಟಿಸಿದ ಸಂಶೋಧಕರ ಪಟ್ಟಿಯಲ್ಲಿದೆ. ಇಷ್ಟೆಲ್ಲ ಸಾಧನೆ ಮಾಡಿದ ಇವರು ಮೂಲತಃ ಉಡುಪಿಯವರು ಎನ್ನುವುದೇ ಹೆಮ್ಮೆಯ ವಿಷಯ.

ಇವರ ಈ ಸಾಧನೆಯ ಪಥಕ್ಕೆ ಮತ್ತೊಂದು ತಿರುವು ಎಂಬಂತೆ ಲಂಡನಿನ್ 'ಹೌಸ್ ಆಫ್ ಲಾರ್ಡ್'ನ 'ಅತ್ಯುತ್ತಮ ಕ್ಲಿನಿಕಲ್ ಎಕ್ಸಲೆನ್ಸ್' ಪದವಿ ಪ್ರದಾನ ಮಾಡಲಾಯಿತು. ಇವರ ಈ ಸಾಧನೆ ನಿಜಕ್ಕೂ ಶ್ಲಾಘನೀಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Greetings - Labelled as Surgeon of Surgeons Dr A A Shetty from Koteshwara, Udupi honored with Best clinical excellence award by House of Lords in London. A professor of Orthopedics Mr Shetty has taught medicine and surgery to thousands of students in India and abroad.
Please Wait while comments are loading...