• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಲ್ಲೂರಿನಲ್ಲಿ ಶ್ರೀಶಾಂತ್ ಮನದಾಸೆ ಬಹಿರಂಗ

By Mahesh
|

ಕುಂದಾಪುರ, ಆ.24: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಶ್ರೀಶಾಂತ್‌ ಅವರು ಕುಟುಂಬ ಸಮೇತ ಕುಂದಾಪುರ ತಾಲೂಕಿನ ಶ್ರೀಕ್ಷೇತ್ರ ಕೊಲ್ಲೂರು ಮುಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ನಡುವೆ ಕ್ರಿಕೆಟ್, ಸಿನಿಮಾ, ಡ್ಯಾನ್ಸ್ ಬಗ್ಗೆ ಶ್ರೀಶಾಂತ್ ತಮ್ಮ ಮನದಾಸೆಯನ್ನು ಬಹಿರಂಗಪಡಿಸಿದ್ದಾರೆ. ಮದುವೆಯಾದ ನಂತರ ಮೊದಲ ಬಾರಿಗೆ ಪತ್ನಿ ಸಮೇತರಾಗಿ ಕೊಲ್ಲೂರಿಗೆ ಶ್ರೀಶಾಂತ್ ಆಗಮಿಸಿದ್ದಾರೆ.

ಶನಿವಾರ ಕುಟುಂಬ ಸಮೇತರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ಶಾಂತಕುಮಾರನ್ ಶ್ರೀಶಾಂತ್ ಅವರು ಮುಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನವ ಚಂಡಿಕಾ ಹೋಮದಲ್ಲಿ ಪಾಲ್ಗೊಂಡಿರುವ ಅವರ ಕುಟುಂಬ ರವಿವಾರ ಪೂರ್ಣಾಹುತಿ ಅರ್ಪಿಸಲಿದೆ.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಲ್‌.ಎಸ್‌. ಮಾರುತಿ ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಅವರು ಶ್ರೀಶಾಂತ್‌ ಅವರನ್ನು ಸ್ವಾಗತಿಸಿ ಗೌರವಿಸಿದರು. ಶ್ರೀಶಾಂತ್ ಅವರ ಜೊತೆ ಸೋದರರಾದ ಅಭಿಷೇಕ್, ಸರ್ವೇಶ್, ಪೋಷಕರು ಹಾಗೂ ಬಂಧು ಮಿತ್ರರು ದೇಗುಲದಲ್ಲಿ ಕಂಡು ಬಂದರು.

ವೃತ್ತಿ ಜೀವನದ ಬಗ್ಗೆ ಶ್ರೀಶಾಂತ್ : ಕ್ರಿಕೆಟ್ ಎಂದಿದ್ದರೂ ನನ್ನ ವೃತ್ತಿ. ಸಿನಿಮಾ, ಡ್ಯಾನ್ಸ್ ಎಲ್ಲವೂ ನನ್ನ ಪ್ರವೃತ್ತಿಗಳು. ಹವ್ಯಾಸಕ್ಕಾಗಿ ಆರಿಸಿಕೊಂಡಿರುವ ಕ್ಷೇತ್ರಗಳು ಎಂದಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣ ಇನ್ನೂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಸೆ.27ಕ್ಕೆ ವಿಚಾರಣೆ ಇದೆ. ಹೀಗಾಗಿ ನಾನು ಆ ಬಗ್ಗೆ ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ. 2015ರ ವಿಶ್ವಕಪ್ ವೇಳೆಗೆ ಟೀಂ ಇಂಡಿಯಾ ಸೇರುವ ವಿಶ್ವಾಸವಿದೆ ಎಂದರು.

 S Sreesanth

ಆದರೆ, ಸಿನಿಮಾ ಹುಚ್ಚು ಶ್ರೀಶಾಂತ್ ಗೆ ಕ್ರಿಕೆಟ್ ಗಿಂತ ಹೆಚ್ಚಿನ ಕಿಕ್ ನೀಡುತ್ತಿದೆ ಎಂದು ಆಪ್ತ ವಲಯ ಹೇಳಿದೆ. ಈಗಾಗಲೇ ಡ್ಯಾನ್ಸಿಂಗ್ ಹುಚ್ಚು ಹತ್ತಿಸಿಕೊಂಡು ರಿಯಾಲಿಟಿ ಶೋಗಳಲ್ಲೂ ಕುಣಿದಾಡಿದ್ದ ಶ್ರೀಶಾಂತ್ ಈಗ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಅಬ್ಸ್ ಬೆಳೆಸಿಕೊಂಡಿದ್ದಾರೆ. ಹೊಸ ಲುಕ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಶ್ರೀಶಾಂತ್ ಬೆಳ್ಳಿತೆರೆಗೆ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ.

ಟಿವಿ ಕಾರ್ಯಕ್ರಮ ಸಿನಿಮಾ ಆಧಾರಿತ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಶ್ರೀಶಾಂತ್ ಗೆ ಈಗ ಟಾಲಿವುಡ್ ಗೆ ಎಂಟ್ರಿ ಕೊಡುವುದು ಖಚಿತವಾಗಿದೆ. ಯಶಸ್ವಿ ನಿರ್ದೇಶಕ ಪೂರಿ ಜಗನ್ನಾಥ್ ಅವರ ಹೊಸ ಚಿತ್ರಕ್ಕೆ ಶ್ರೀಶಾಂತ್ ಸಹಿ ಹಾಕಿದ್ದಾರೆ. ಇದರಲ್ಲಿ ಕ್ರಿಕೆಟರ್ ಹಾಗೂ ಮತ್ತೊಂದು ಪಾತ್ರದಲ್ಲಿ ಶ್ರೀಶಾಂತ್ ಕಾಣಿಸಿಕೊಳ್ಳಲಿದ್ದಾರಂತೆ. ಇದರ ಜೊತೆಗೆ ಮಲೆಯಾಳಿ ನಿರ್ದೇಶಕರೊಬ್ಬರ ಹಿಂದಿ ಚಿತ್ರದಲ್ಲೂ ನಟಿಸುವಂತೆ ಆಫರ್ ಬಂದಿದೆಯಂತೆ. ಕಾಲಿವುಡ್ ಗೂ ಶ್ರೀಶಾಂತ್ ಗೆ ಆಹ್ವಾನ ನೀಡಿದೆ. ಒಟ್ಟಾರೆ ಮತ್ತೊಮ್ಮೆ ಕ್ರಿಕೆಟ್ ಫೀಲ್ಡ್ ಗೆ ರೀ ಎಂಟ್ರಿ ಕೊಡಲು ಸಿದ್ಧವಾಗಿರುವ ಶ್ರೀಶಾಂತ್ ಗೆ ಒಂದರ ಮೇಲೊಂದು ಸಿನಿಮಾ ಆಫರ್ ಗಳು ಬರುತ್ತಿವೆ. ಯಾವ ಫೀಲ್ಡ್ ನಲ್ಲಿ ಯಾವ ಸ್ವಿಂಗ್ ಬೌಲಿಂಗ್ ಮಾಡುತ್ತಾರೋ ಕಾದುನೋಡಬೇಕಿದೆ.

English summary
India's fast bowler Shanthakumaran Sreesanth on Sunday visited the Mookambika temple in Kollur to offer prayers. He said Cricket is my profession and Film and Dancing Is just a Hobby. Sreesanth is set to make his debut in Tollywood soon,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more