ಕುಂದಾಪುರದಲ್ಲಿ ಹಸು ಹಿಡಿಯಲು ಕಳ್ಳರು ಪರದಾಡೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Recommended Video

      ಉಡುಪಿ ಕುಂದಾಪುರದಲ್ಲಿ ಹಸುವನ್ನ ಹಿಡಿಯಲು ಗೋ ಕಳ್ಳರ ಪರದಾಟ | Oneindia Kannada

      ಉಡುಪಿ, ಆಗಸ್ಟ್.07: ಕರಾವಳಿ ಭಾಗದಲ್ಲಿ ದಿನೇ ದಿನೇ ಗೋ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದೆ. ಇತ್ತೀಚೆಗೆ ಬೈಂದೂರು ತಾಲೂಕಿನಲ್ಲಿ ಹತ್ತಾರು ಕಡೆ ಮೃತ ಜಾನುವಾರುಗಳ ಅವಶೇಷ ಸಿಕ್ಕಿ ಕುತೂಹಲಕ್ಕೆ ಕಾರಣವಾಗಿತ್ತು. ಈ ನಡುವೆ ಪಕ್ಕದ ಕುಂದಾಪುರ ತಾಲೂಕಿನಲ್ಲಿ ಗೋ ಕಳ್ಳರ ಅಟ್ಟಹಾಸ ಸಾಕ್ಷಿ ಸಮೇತ ದಾಖಲಾಗಿದೆ.

      ಇಲ್ಲಿನ ಬಸ್ರೂರು-ಸಿದ್ದಾಪರ ರಾಜ್ಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಹಸು ಹಿಡಿಯಲು ಗೋ ಕಳ್ಳರು ಪರದಾಡು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬಸ್ರೂರು ಮಹಾಲಿಂಗೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಈ ದುಷ್ಕೃತ್ಯದ ಯತ್ನ ನಡೆದಿದೆ.

      ತಡರಾತ್ರಿ 1.47 ರ ಸುಮಾರಿಗೆ ಪೆಟ್ರೋಲ್ ಬಂಕ್ ಬಳಿ ಬಿಳಿ ಬಣ್ಣದ ರಿಟ್ಸ್ ಕಾರು ಬಂದು ನಿಲ್ಲುತ್ತೆ. ಆ ಕಾರಿನಿಂದ ನಾಲ್ಕು ಮಂದಿ ಆಗಂತುಕರು ಮುಖಕ್ಕೆ ಬಟ್ಟೆ ಧರಿಸಿ ಕೆಳಗಿಳಿಯುತ್ತಾರೆ.

      Cow thieves are struggling to catch a cow in Kundapura

      ಪೆಟ್ರೋಲ್ ಬಂಕ್ ನಲ್ಲಿ ಆಶ್ರಯ ಪಡೆದಿದ್ದ, ಹಸುಗಳನ್ನು ಹಿಡಿಯಲು ಅಡ್ಡಗಟ್ಟುತ್ತಾರೆ. ಗೋಕಳ್ಳರಿಂದ ತಪ್ಪಿಸಿಕೊಳ್ಳಲು ಹಸುಗಳು ಅಡ್ಡಾದಿಡ್ಡಿ ಓಡುತ್ತವೆ. ಈ ನಡುವೆ ಯಾವುದೋ ವಾಹನ ಬಂದ ಪರಿಣಾಮ ಗೋಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅದೃಷ್ಟವಷಾತ್ ಹಸುಗಳು ಪಾರಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+