ಉಡುಪಿ; ಕೋವಿಡ್ ಪರೀಕ್ಷೆ ಲ್ಯಾಬ್; ದಿನಕ್ಕೆ 300 ಮಾದರಿ ಪರೀಕ್ಷೆ

ಉಡುಪಿ, ಜುಲೈ 07 : ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋವಿಡ್ - 19 ಪರೀಕ್ಷೆ ಲ್ಯಾಬ್ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ. ಲ್ಯಾಬ್ ಅಧಿಕೃತವಾಗಿ ಪರೀಕ್ಷಾ ಕಾರ್ಯವನ್ನು ಆರಂಭಿಸಲಿದ್ದು, ಜಿಲ್ಲೆಯ ಶಂಕಿತ ರೋಗಿಗಳ ಗಂಟಲು ದ್ರವದ ಪರೀಕ್ಷೆಯನ್ನು ಜಿಲ್ಲೆಯಲ್ಲಿಯೆ ಮಾಡಬಹುದಾಗಿದೆ.

Recommended Video

      ಕಪ್ಪು ಪಟ್ಟಿ ಕಟ್ಟಿಕೊಂಡು ಬೀದಿಗೆ ಬಂದ ಡಾಕ್ಟರ್ ಮತ್ತು ನರ್ಸ್ ಗಳು | Oneindia Kannada

      ಸರ್ಕಾರಿ ಕೋವಿಡ್ - 19 ಲ್ಯಾಬ್ ನಿರ್ಮಾಣದ ಕಾರ್ಯ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಲ್ಯಾಬ್ ನಿರ್ಮಾಣಕ್ಕೆ 1 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರಗಳು ಮತ್ತು ಉಪಕರಣಗಳ ಸರಬರಾಜು ಅಗಿದೆ. ಲ್ಯಾಬ್ ನಿರ್ಮಾಣದ ಕಟ್ಟಡದ ಕಾಮಗಾರಿಗೆ 45 ಲಕ್ಷ ರೂ. ವೆಚ್ಚವಾಗಿದೆ.

      ಈ ಲ್ಯಾಬ್‌ನಲ್ಲಿ ಕಾರ್ಯ ನಿರ್ವಹಣೆ ಮಾಡಲು 1 ಮೈಕ್ರೋ ಬಯೋಲಜಿಸ್ಟ್ ಹಾಗೂ 8 ಮಂದಿ ಲ್ಯಾಬ್ ಟೆಕ್ನೀಷಿಯನ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೈಕ್ರೋ ಬಯೋಲಾಜಿಸ್ಟ್ ಹಾಗೂ ಇಬ್ಬರು ಲ್ಯಾಬ್ ಟೆಕ್ನೀಷಿಯನ್‌ಗಳು ನಿಮಾನ್ಸ್‌ನಲ್ಲಿ ಅಗತ್ಯ ತರಬೇತಿಯನ್ನು ಪಡೆದುಕೊಂಡಿದ್ದಾರೆ.

      ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಮಧುಸೂಧನ್ ನಾಯಕ್ ಈ ಕುರಿತು ಮಾಹಿತಿ ನೀಡಿದ್ದು, "ನಿಮಾನ್ಸ್ ಮೂಲಕ 5 ಮಾದರಿಗಳನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಕೋವಿಡ್ ಪ್ರಯೋಗಾಲಯಕ್ಕೆ ನೀಡಲಾಗಿತ್ತು, ಈ ಮಾದರಿಗಳನ್ನು ಪರೀಕ್ಷಿಸಿ, ಈಗಾಗಲೇ ವರದಿಯನ್ನು ಕಳುಹಿಸಲಾಗಿದೆ. ನಿಮಾನ್ಸ್ ವರದಿಯೊಂದಿಗೆ ಸರಿಯಾದಲ್ಲಿ, ಜಿಲ್ಲೆಯ ಸರ್ಕಾರಿ ಪ್ರಯೋಗಾಲದಲ್ಲಿ ಪರೀಕ್ಷೆ ಆರಂಭವಾಗಲಿದೆ" ಎಂದರು.

      ದಿನಕ್ಕೆ 300 ಮಾದರಿಗಳ ಪರೀಕ್ಷೆ

      ದಿನಕ್ಕೆ 300 ಮಾದರಿಗಳ ಪರೀಕ್ಷೆ

      ಸಂಪೂರ್ಣ ಹವಾನಿಯಂತ್ರಿತ ಲ್ಯಾಬ್ ಇದಾಗಿದೆ. ಒಂದು ಬಾರಿಗೆ 96 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ. ಪರೀಕ್ಷೆಯ ವರದಿ 4 ರಿಂದ 6 ಗಂಟೆಗಳ ಅವಧಿಯಲ್ಲಿ ಸಿಗಲಿದೆ. ದಿನಕ್ಕೆ ಗರಿಷ್ಠ 300 ಮಾದರಿಗಳ ಪರೀಕ್ಷೆ ನಡೆಸಬಹುದು. ಸ್ಯಾಂಪಲ್ ಸ್ವೀಕೃತಿಯಿಂದ ವರದಿಯ ತನಕ ಎಲ್ಲಾ ಮಾಹಿತಿಯನ್ನು ಐಸಿಎಂಆರ್ ಮಾರ್ಗಸೂಚಿಯಂತೆ ಆನ್‌ಲೈನ್‌ನಲ್ಲಿ ದಾಖಲಿಸಬೇಕು.

      ಪಿಪಿಇ ಕಿಟ್ ಧರಿಸಿ ಪರೀಕ್ಷೆ

      ಪಿಪಿಇ ಕಿಟ್ ಧರಿಸಿ ಪರೀಕ್ಷೆ

      ಕೋವಿಡ್ - 19 ಮಾದರಿಗಳ ಪರೀಕ್ಷೆಯನ್ನು ಸಿಬ್ಬಂದಿಗಳು ಪಿಪಿಇ ಕಿಟ್‌ಗಳನ್ನು ಧರಿಸಿಯೇ ನಡೆಸಲಿದ್ದಾರೆ. ಮೊದಲು ಪ್ರೋಸೆಸಿಂಗ್ ಕೊಠಡಿಯಲ್ಲಿ ಮಾದರಿ ಸ್ವೀಕಾರ ನಡೆಯಲಿದೆ. ಬಯೋಸೇಪ್ಟಿ ಕ್ಯಾಬಿನಿಟ್‌ನಲ್ಲಿಟ್ಟು ನಂತರ ಪಾಸ್ ಬಾಕ್ಸ್ ಮೂಲಕ ಪರೀಕ್ಷೆ ಕೊಠಡಿಗೆ ತಲುಪಿಸಲಾಗುತ್ತದೆ. ಆರ್.ಟಿ.ಪಿ.ಸಿ.ಆರ್ ಯಂತ್ರವಿರುವ ಕೊಠಡಿಗೆ ತಲುಪಿಸಿ ಅಲ್ಲಿರುವ ಯಂತ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

      1600 ರೂ. ವೆಚ್ಚವಾಗಲಿದೆ

      1600 ರೂ. ವೆಚ್ಚವಾಗಲಿದೆ

      ಒಂದು ಮಾದರಿಯನ್ನು ಪರೀಕ್ಷೆ ಮಾಡಲು ಟೆಸ್ಟ್ ಕಿಟ್‌ಗಳು ಸೇರಿದಂತೆ ಇತರೆ ಅಗತ್ಯ ಸುರಕ್ಷತಾ ವಸ್ತುಗಳ ಬಳಕೆಯ ವೆಚ್ಚ ಸೇರಿದಂತೆ ರೂ.1600 ವೆಚ್ಚವಾಗಲಿದೆ. ಈ ಎಲ್ಲಾ ವೆಚ್ಚವನ್ನು ಜಿಲ್ಲಾ ಪ್ರಾಕೃತಿಕ ವಿಕೋಪ ನಿಧಿಯಿಂದ ಭರಿಸಲಾಗುವುದು ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಮಧುಸೂಧನ್ ನಾಯಕ್ ಹೇಳಿದ್ದಾರೆ.

      ಉಡುಪಿಯಲ್ಲಿ ಎಷ್ಟು ಪ್ರಕರಣ?

      ಉಡುಪಿಯಲ್ಲಿ ಎಷ್ಟು ಪ್ರಕರಣ?

      ಸೋಮವಾರ ಉಡುಪಿ ಜಿಲ್ಲೆಯಲ್ಲಿ 40 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1361ಕ್ಕೆ ಏರಿಕೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+