ಮಧ್ಯರಾತ್ರಿ ಬಾಲಕಿ ಹೊತ್ತೊಯ್ದು ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆ

ಉಡುಪಿ, ನವೆಂಬರ್ 27: ಮೂರು ವರ್ಷಗಳ ಹಿಂದೆ ಉಡುಪಿ ನಗರದ ಹೊರ ವಲಯದಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ರಾಜಸ್ತಾನ ಮೂಲದ ಮುಖೇಶ್ ಮೇಲೆ (20) ಹಾಗೂ ಪದಮ್ ಸಿಂಗ್ ಸೇನಿ (28) ಆರೋಪಿಗಳು. ಟೈಲ್ಸ್ ಕೆಲಸ ಮಾಡುತ್ತಿದ್ದ ಇವರು ಉಡುಪಿಯ ಬಡಗಬೆಟ್ಟುವಿನಲ್ಲಿ ವಾಸವಾಗಿದ್ದರು. ಇವರು ರಾಜಸ್ತಾನ ಮೂಲದ 15 ವರ್ಷ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದರು. ಬಾಲಕಿಯ ತಂದೆಯೊಂದಿಗೆ ಟೈಲ್ಸ್ ಕೆಲಸಕ್ಕೆ ಹೋಗುತ್ತಿದ್ದ ಆರೋಪಿಗಳು ಆಗಾಗ ಅವರ ಮನೆಗೂ ಬರುತ್ತಿದ್ದರು. ತಂದೆ ಇಲ್ಲದ ವೇಳೆ ನೋಡಿಕೊಂಡು, ಮನೆಯಲ್ಲಿ ತಾಯಿ, ಸಹೋದರರು ಬೇರೆ ಕೋಣೆಯಲ್ಲಿ ಮಲಗಿದ್ದ ಸಂದರ್ಭ 2016ರ ಜುಲೈ 8 ರಂದು ಮಧ್ಯ ರಾತ್ರಿ ಆರೋಪಿಗಳು ಮನೆಗೆ ಬಂದು ಬಾಲಕಿಯನ್ನು ಕಾರಿನಲ್ಲಿ ಒಯ್ದು ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ್ದರು.

Court Declared 20 Years Imprisonment For Raping Minor Girl In Udupi

ಆರೋಪಿಗಳು ದೋಷಿ ಎಂಬುದಾಗಿ ಆದೇಶ ನೀಡಿದ ವಿಶೇಷ ನ್ಯಾಯಾಲಯ ಅವರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಒಂದು ಲಕ್ಷ ರೂ. ಪರಿಹಾರವನ್ನು ಪಡೆದುಕೊಳ್ಳಬಹುದು ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+