• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿರೂರು, ಪೇಜಾವರ ಶ್ರೀಗಳು ಇಲ್ಲದ ಉಡುಪಿ ಕೃಷ್ಣಮಠ: ಕೃಷ್ಣ..ಕೃಷ್ಣಾ..

|

ಕೃಷ್ಣೈಕ್ಯರಾದ ಪೇಜಾವರ ಹಿರಿಯ ಶ್ರೀಗಳು ತಮ್ಮ ಪಂಚಮ ಪರ್ಯಾಯದ ಅವಧಿಯಲ್ಲಿ ಕೃಷ್ಣಮಠದ ಆವರಣದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದ್ದರು.

ಸರ್ವಧರ್ಮದ ಶಾಂತಿಯ ತೋಟ ಎಂದು ಶ್ರೀಗಳು ಈ ಹೆಜ್ಜೆಯನ್ನೇನೋ ಇಟ್ಟರು. ಆದರೆ, ಇದಾದ ನಂತರ ಶ್ರೀಗಳಿಗೆ ಬಂದ ಒತ್ತಡ ಅಷ್ಟಿಷ್ಟಲ್ಲ. ಒಂದು ಹಂತದಲ್ಲಿ ಪೀಠತ್ಯಾಗ ಮಾಡುವ ಬಗ್ಗೆ ಆರ್ ಎಸ್ ಎಸ್ ಮುಖಂಡರ ಬಗ್ಗೆ ಚರ್ಚಿಸಿದ್ದರಂತೆ.

ಇಲ್ಲಿ ಕೃಷ್ಣನ ಸೇವೆ, ಅಲ್ಲಿ ರಾಮನ ಸೇವೆ: ಪೇಜಾವರ ಕಿರಿಯ ಶ್ರೀಗಳು

ಈ ವಿಚಾರ ಯಾಕೆ ಈಗ ಪ್ರಸ್ತುತ ಎಂದರೆ, ಕೃಷ್ಣನ ನಾಡಿನಲ್ಲಿ ಮತ್ತೆ ಪರ್ಯಾಯದ ಸಂಭ್ರಮ. ಅದಕ್ಕಿಂತ ಹೆಚ್ಚಾಗಿ ಪರ್ಯಾಯ ಸರ್ವಜ್ಣ ಪೀಠವನ್ನು ಏರುತ್ತಿರುವವರು ಅದಮಾರು ಮಠದ ಹಿರಿಯ ಶ್ರೀಗಳಲ್ಲ, ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥರು.

ಉಡುಪಿ ಅಷ್ಠಮಠದ ಇಬ್ಬರು ಯತಿಗಳಾದ ಪೇಜಾವರ ಹಿರಿಯ ಶ್ರೀಗಳು ಮತ್ತು ಶಿರೂರು ಮಠದ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ. ಹರಿಪಾದ ಸೇರಿದ ಇಬ್ಬರೂ ಕಟು ಸಂಪ್ರದಾಯದ ಹಿಂದೆ ಬೀಳದೇ ಎಲ್ಲರ ಜೊತೆಗೂಡಿ ಹೋದವರು. ಅದರಲ್ಲೂ, ಶಿರೂರು ಶ್ರೀಗಳ ಹಿಂದೆ ಮುಂದೆಯಂತೂ ಇದ್ದವರೆಲ್ಲಾ ಬ್ರಾಹ್ಮಣರೇತರೇ ಹೆಚ್ಚು ಎನ್ನುವುದು ರಥಬೀದಿಯಲ್ಲಿ ಗೌಪ್ಯವಾಗಿಯೇನೂ ಉಳಿದಂತಹ ಸುದ್ದಿಯೇನೂ ಅಲ್ಲ.

(ಪೇಜಾವರ ಕಿರಿಯ ಶ್ರೀಗಳ ಸಂದರ್ಶನದ ವಿಡಿಯೋ)

ಕೃಷ್ಣಮಠದ ಧಾರ್ಮಿಕ ಅಥವಾ ಸಾಮಾಜಿಕ ಕೆಲಸ

ಕೃಷ್ಣಮಠದ ಧಾರ್ಮಿಕ ಅಥವಾ ಸಾಮಾಜಿಕ ಕೆಲಸ

ಕೃಷ್ಣಮಠದ ಧಾರ್ಮಿಕ ಅಥವಾ ಸಾಮಾಜಿಕ ಕೆಲಸಗಳನ್ನು ಮುನ್ನಡೆಸಲು ಬ್ರಾಹ್ಮಣರೊಬ್ಬರಿಂದಲೇ ಸಾಧ್ಯವಿಲ್ಲ ಎಂದರಿತ ಯತಿಗಳಲ್ಲಿ ಪೇಜಾವರ ಹಿರಿಯ ಮತ್ತು ಶಿರೂರು ಶ್ರೀಗಳು ಪ್ರಮುಖರಾಗಿದ್ದರು. ಆದರೆ, ಈ ಇಬ್ಬರೂ ಶ್ರೀಗಳು ಬೌದ್ದಿಕವಾಗಿ ನಮ್ಮೊಂದಿಗಿಲ್ಲ. ಹಾಗಾದರೆ, ಈಗಿರುವ ಇತರ ಶ್ರೀಗಳು ಪೇಜಾವರ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತಾರಾ? ಗೊತ್ತಿಲ್ಲ. ಪೇಜಾವರ ಕಿರಿಯ ಶ್ರೀಗಳು ನನ್ನ ಗುರುಗಳ ನೆರಳಿನಲ್ಲೇ ಸಾಗುತ್ತೇನೆ ಎಂದೇನೋ ಹೇಳಿದ್ದಾರೆ. ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಕೂಡಾ.. ಆದರೆ, ಮುಂದೆ, ಮಠದೊಳಗಿನ ಒತ್ತಡಕ್ಕೆ ಕಟಿಬಿದ್ದರೆ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುವುದು ಸಹಜ.

ಪರ್ಯಾಯ ಮಹೋತ್ಸವದ ನೇರ ಪ್ರಸಾರಕ್ಕೆ ಅವಕಾಶವನ್ನು ನೀಡಿರಲಿಲ್ಲ

ಪರ್ಯಾಯ ಮಹೋತ್ಸವದ ನೇರ ಪ್ರಸಾರಕ್ಕೆ ಅವಕಾಶವನ್ನು ನೀಡಿರಲಿಲ್ಲ

ಅಷ್ಠಮಠದ ಕೆಲವು ಶ್ರೀಗಳು ಎಷ್ಟು ಸಂಪ್ರದಾಯದ ಹಿಂದೆ ಬಿದ್ದಿದ್ದರು ಎನ್ನುವುದಕ್ಕೆ ಒಂದು ಉದಾಹರಣೆ ಎಂದರೆ. ಕೃಷ್ಣಾಪುರದ ಮಠದ ಯತಿಗಳ ಪರ್ಯಾಯದ ಅವಧಿ. ಕೆಲವೊಂದು ಕಾರಣಗಳನ್ನು ನೀಡಿ ಪರ್ಯಾಯ ಮಹೋತ್ಸವದ ನೇರ ಪ್ರಸಾರಕ್ಕೆ ಯಾವುದೇ ವಾಹಿನಿಗಳಿಗೆ ಅವಕಾಶವನ್ನು ನೀಡಿರಲಿಲ್ಲ. ಇದಕ್ಕೆ ಅಡ್ಡಿಬಂದದ್ದು ಕಟು ಸಂಪ್ರದಾಯ ಎಂದೇ ಅಂದು ಹೇಳಲಾಗುತ್ತಿತ್ತು.

ಭೋಜನಶಾಲೆಯಲ್ಲಿ ಪಂಕ್ತಿ ಭೋಜನ

ಭೋಜನಶಾಲೆಯಲ್ಲಿ ಪಂಕ್ತಿ ಭೋಜನ

ಮತ್ತೊಂದು ಉದಾಹರಣೆ.. ಭೋಜನಶಾಲೆಯಲ್ಲಿ ಪಂಕ್ತಿ ಭೋಜನದ ವೇಳೆ, ಬೇರೆ ಜಾತಿಯ ಮಹಿಳೆಯೊಬ್ಬರು ಕೂತಿದ್ದಾಗ ಅವರನ್ನು ಎಬ್ಬಿಸಿದ ಘಟನೆ ರಾಜ್ಯಾದ್ಯಂತ ದೊಡ್ಡ ರಾದ್ದಾಂತವಾಗಿತ್ತು. ಮಠದ ಕಾರ್ಯಕ್ರಮಕ್ಕೆ ದೇಣಿಗೆ ಕೊಡಲು ನಮ್ಮ ಜಾತಿ ಬೇಕು, ಊಟದ ವಿಚಾರಕ್ಕೆ ಪಂಕ್ತಿಬೇಧ ಮಾಡುತ್ತೀರಾ ಎನ್ನುವ ಮಹಿಳೆ ಕೇಳಿದ ಪ್ರಶ್ನೆಗಳಿಗೆ ಮಠದವರಿಗಾಗಲಿ, ಪೀಠಾಧಿಪತಿಗಳಲ್ಲಿ ಉತ್ತರವಿರಲಿಲ್ಲ.

ಪೇಜಾವರ ಶ್ರೀಗಳಿಗಿದ್ದ ನ್ಯಾಷನಲ್ ನೆಟ್ವರ್ಕ್

ಪೇಜಾವರ ಶ್ರೀಗಳಿಗಿದ್ದ ನ್ಯಾಷನಲ್ ನೆಟ್ವರ್ಕ್

ಸನ್ಯಾಸಿಯಾಗಿದ್ದರೂ, ಸಾರ್ವಜನಿಕ ಜೀವನದಲ್ಲೇ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಪೇಜಾವರ ಹಿರಿಯ ಶ್ರೀಗಳ ಅನುಪಸ್ಥಿತಿ ಮುಂದೆ ಅಷ್ಠಮಠಕ್ಕೆ ಕಾಡುವ ಸಾಧ್ಯತೆಯಿಲ್ಲದಿಲ್ಲ. ತಮ್ಮ ಪರ್ಯಾಯ ಇರಲಿ, ಇಲ್ಲದೇ ಇರಲಿ, ಕೃಷ್ಣಮಠದ ವಿಚಾರದಲ್ಲಿ ಯಾರಾದರೂ ತಕರಾರು ಎತ್ತಿದರೆ ಮಂಚೂಣಿಯಲ್ಲಿ ನಿಂತು, ಪರಿಹಾರ ಕಂಡುಕೊಳ್ಳುತ್ತಿದ್ದರು. ಇವರು ಮಧ್ಯಸ್ಥಿತಿಗೆ ಬಂದರೆಂದರೆ ಎಲ್ಲರೂ ಸುಮ್ಮನಾಗುತ್ತಿದ್ದರು. ಯಾಕೆಂದರೆ, ಅವರಿಗಿದ್ದ ನ್ಯಾಷನಲ್ ಲೆವೆಲ್ ನೆಟ್ವರ್ಕ್.

ಶಿರೂರು ಮಠದ ಲಕ್ಷ್ಮೀವರ ತೀರ್ಥರು

ಶಿರೂರು ಮಠದ ಲಕ್ಷ್ಮೀವರ ತೀರ್ಥರು

ಪೇಜಾವರ ಶ್ರೀಗಳಂತೇ ಎಲ್ಲರ ಜೊತೆಗೂಡಿ ಮುಂದೆ ಸಾಗುತ್ತಿದ್ದವರು ಶಿರೂರು ಮಠದ ಲಕ್ಷ್ಮೀವರ ತೀರ್ಥರು. ಇವರು ಇಹಲೋಕ ತ್ಯಜಿಸಿ ಒಂದೂವರೆ ವರ್ಷ ಆಗುತ್ತಾ ಬಂತು. ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸುವ ವಿಚಾರ ಎಲ್ಲಿಗೆ ಬಂತು ಎನ್ನುವುದು ದ್ವಂದ್ವ ಮಠವಾದ ಸೋದೆ ಶ್ರೀಗಳಲ್ಲಿ ಉತ್ತರವಿದೆಯೋ, ಇಲ್ಲವೋ?

ಮಾಧ್ವರಿಗೆ, ಬ್ರಾಹ್ಮಣರಿಗೆ ಮಾತ್ರ ಸೀಮಿತ ಎನ್ನುವಂತಿದ್ದ ಅಷ್ಠಮಠಗಳು

ಮಾಧ್ವರಿಗೆ, ಬ್ರಾಹ್ಮಣರಿಗೆ ಮಾತ್ರ ಸೀಮಿತ ಎನ್ನುವಂತಿದ್ದ ಅಷ್ಠಮಠಗಳು

ಒಂದಂತೂ ಸತ್ಯ. ಮಾಧ್ವರಿಗೆ, ಬ್ರಾಹ್ಮಣರಿಗೆ ಮಾತ್ರ ಸೀಮಿತ ಎನ್ನುವಂತಿದ್ದ ಅಷ್ಠಮಠಗಳು ಇತರ ಜಾತಿಯವರಿಗೂ ತೆರೆದದ್ದು ಶಿರೂರು ಮತ್ತು ಪೇಜಾವರ ಶ್ರೀಗಳಿಂದ. ಆದರೆ, ಇದನ್ನು ಒಪ್ಪಿಕೊಳ್ಳುವಂತಹ ಮನಸ್ಥಿತಿಯಲ್ಲಿ, ಇನ್ನೂ, ಇತರ ಮಠದ ಹಿರಿಯ ಶ್ರೀಗಳು, ಅವರ ಹಿಂದೆ ಮುಂದೆ ಇರುವವರು ಇಲ್ಲ ಎನ್ನುವುದು ಕಟು ವಾಸ್ತವತೆ.

ಶಿರೂರು, ಪೇಜಾವರ ಶ್ರೀಗಳು ಇಲ್ಲದ ಉಡುಪಿ ಕೃಷ್ಣಮಠ

ಶಿರೂರು, ಪೇಜಾವರ ಶ್ರೀಗಳು ಇಲ್ಲದ ಉಡುಪಿ ಕೃಷ್ಣಮಠ

ಅಷ್ಠಮಠದ ಈಗಿನ ಕಿರಿಯ ಶ್ರೀಗಳ ಪೈಕಿ ಹೆಚ್ಚಿನವರು ಮಧ್ಯ ವಯಸ್ಸಿನವರು/ವಿದ್ಯಾವಂತರು. ಶತಮಾನದ ಪೂಜಾ ಸಂಪ್ರದಾಯದಿಂದ ಹೊರಬರಬೇಕು ಎನ್ನುವುದು ತಪ್ಪು ಎನ್ನುವುದು ಒಪ್ಪಿಕೊಳ್ಳಬಹುದಾದ ವಿಚಾರ. ಆದರೆ. ಒಂದು ಸಮುದಾಯಕ್ಕೆ ಮಾತ್ರ ಕೃಷ್ಣಮಠ, ಅವರಿಗೇ ಮೊದಲ ಆದ್ಯತೆ ಎಂದು ಸೀಮಿತವಾದರೆ, 'ದೇಣಿಗೆ ನೀಡಲು ಮಾತ್ರ ನಾವು ಬೇಕಾ' ಎನ್ನುವವರ ಕೂಗು ಜಾಸ್ತಿಯಾಗಬಹುದು. ಇಂತಹ ನೂರಾರು ಕೂಗುಗಳನ್ನು ಸಮಾಧಾನ ಪಡಿಸಲು ವಿಶ್ವೇಶತೀರ್ಥರು ಇಲ್ಲ ಎನ್ನುವುದನ್ನು ಅಷ್ಠಮಠದ ಯತಿಗಳು ಈಗಲೇ ಅರಿತರೇ ಸೂಕ್ತ.

English summary
Countdown for Paryaya Festival In Udupi, Without Pejawar And Shiroor Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X