ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಜಿಲ್ಲೆಗೆ ಕಾಲಿಡುವ ಮುನ್ನ ಈ ಸುದ್ದಿ ಓದಿ

|
Google Oneindia Kannada News

ಉಡುಪಿ, ಜುಲೈ.16: ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣವನ್ನು ತಗ್ಗಿಸುವುದಕ್ಕೆ ಲಾಕ್ ಡೌನ್ ಒಂದೇ ಮಾರ್ಗ ಎನ್ನುವಂತಾ ಪರಿಸ್ಥಿತಿ ಪುನಃ ನಿರ್ಮಾಣವಾಗಿದೆ. ಕೊವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಜಿಲ್ಲಾಡಳತಿ ಅಲರ್ಟ್ ಆಗಿದೆ

Recommended Video

Drone Prathap ಆಯ್ತು ಈಗ ಕೆರೆ ಕಾಮೇಗೌಡರ ಸರದಿ | Oneindia Kannada

ಉಡುಪಿಯಲ್ಲಿ ಮುಂದಿನ 14 ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಿ ಆದೇಶಿಸಲಾಗಿದೆ. ಜಿಲ್ಲೆಯ ಗಡಿ ಪ್ರದೇಶಗಳನ್ನು ಈಗಾಗಲೇ ಸೀಲ್ ಮಾಡಲಾಗಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ,‌ ಶಿವಮೊಗ್ಗ, ಉತ್ತರ ‌ಕನ್ನಡ ಗಡಿಗಳನ್ನು ಬಂದ್ ಮಾಡಲಾಗಿದೆ.

ಮೆಹಂದಿ ಎಫೆಕ್ಟ್: ವಧುವಿನ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕುಮೆಹಂದಿ ಎಫೆಕ್ಟ್: ವಧುವಿನ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕು

ಹೊರ‌ ಜಿಲ್ಲೆಯ ವಾಹನಗಳಿಗೆ ಮುಂದಿನ 14 ದಿನಗಳವರೆಗೂ ಪ್ರವೇಶವನ್ನು ನಿರಾಕರಿಸಲಾಗಿದೆ. ಸರಕು ಸಾಗಣೆ, ಅಗತ್ಯ ವಸ್ತುಗಳ ಪೂರೈಕೆ, ತುರ್ತು ಸೇವಾ ವಾಹನಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ. ನಾಲ್ಕು ಗಡಿಗಳಲ್ಲಿ ಪೊಲೀಸರಿಂದ ವಾಹನ ತಪಾಸಣೆ ನಡೆಸಲಾಗುತ್ತಿದೆ.

Coronavirus Effect: Udupi District Locked Down For 14 Days

ಉಡುಪಿಯಲ್ಲಿ ಕೊರೊನಾವೈರಸ್ ಕಂಡೀಷನ್:

ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 52 ಮಂದಿಗೆ ಕೊವಿಡ್-19 ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 1787ಕ್ಕೆ ಏರಿಕೆಯಾಗಿದೆ. 28 ಮಂದಿ ಗುಣಮುಖರಾಗಿದ್ದು, ಇದುವರೆಗೂ 1371 ಜನ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಹಾಮಾರಿಗೆ ಒಟ್ಟು ಮೂವರು ಪ್ರಾಣ ಬಿಟ್ಟಿದ್ದು, ಜಿಲ್ಲೆಯಲ್ಲಿ 413 ಸಕ್ರಿಯ ಪ್ರಕರಣಗಳಿವೆ.

English summary
Coronavirus Effect: Udupi District Locked Down For 14 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X