ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂವಿಧಾನದ ಮೇಲೆ ಬುಲ್ಡೋಜರ್‌ ಚಲಾಯಿಸಲಾಗುತ್ತಿದೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 15; ಹಿಜಾಬ್ ವಿವಾದ ಆರಂಭವಾದ ಉಡುಪಿಯಲ್ಲಿ ಪ್ರಗತಿಪರ ಚಿಂತಕರು ಸೌಹಾರ್ದತೆಯ ಕೂಗು ಮೊಳಗಿಸಿದ್ದಾರೆ. ರಾಜ್ಯದ ಪ್ರಗತಿಪರ ಚಿಂತಕರು, ಎಡಪಂಥೀಯ ಸಂಘಟನೆಗಳ ನೇತೃತ್ವದಲ್ಲಿ ಉಡುಪಿಯಲ್ಲಿ ರಾಜ್ಯಮಟ್ಟದ ಸಹಬಾಳ್ವೆ ಸೌಹಾರ್ದ ಸಮಾವೇಶ ನಡೆಯಿತು.

ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಫ್ರೌಢ ಶಾಲೆಯಲ್ಲಿ ಈ ಸಮಾವೇಶ ನಡೆದಿದ್ದು, ಸರ್ವಧರ್ಮದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾವೇಶಕ್ಕೂ ಮುನ್ನ ಉಡುಪಿಯ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಟ್ಯಾಬ್ಲೋ ಮೂಲಕ ಹಿಜಾಬ್ ಹೋರಾಟದ ಊರಲ್ಲಿ ಸೌಹಾರ್ದತೆಯ ಸಂದೇಶ ರವಾನಿಸಿದರು.

ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ; ಗಣಿತ ಪರೀಕ್ಷೆಗೆ ಹಾಜರಾಗದ ಹಿಜಾಬ್ ವಿದ್ಯಾರ್ಥಿನಿಯರುಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ; ಗಣಿತ ಪರೀಕ್ಷೆಗೆ ಹಾಜರಾಗದ ಹಿಜಾಬ್ ವಿದ್ಯಾರ್ಥಿನಿಯರು

'ಸಹಬಾಳ್ವೆ ಸಮಾವೇಶ'ದಲ್ಲಿ ಪ್ರಮುಖ ಭಾಷಣ ಮಾಡಿದ ಮಾನವ ಹಕ್ಕು ಹೋರಾಟಗಾರ ಯೋಗೀಂದ್ರ ಯಾದವ್, "ಉಡುಪಿಯಿಂದಲೇ ದ್ವೇಷದ ಸಂದೇಶ ಹೊರಟಿತ್ತು.ಕರಾವಳಿ ಏನು ಬಿತ್ತಿದರೂ ಉತ್ತಮ ಫಸಲು ನೀಡುತ್ತದೆ. ಇಲ್ಲಿ ಏನು ಬಿತ್ತಿದರೂ ಬಂಗಾರದ ಬೆಳೆ ಸಿಗುತ್ತದೆ. ಹಾಗಾಗಿ ಕೆಲವರು ದ್ವೇಷದ ಬೀಜ ಬಿತ್ತಿದ್ದಾರೆ" ಎಂದು ದೂರಿದರು.

 'ಕೋಮು ಕ್ರಿಮಿ ಸೋಂಬೇರಿಗಳನ್ನು ಸರ್ಕಾರ ನಿಯಂತ್ರಿಸಲಿ' 'ಕೋಮು ಕ್ರಿಮಿ ಸೋಂಬೇರಿಗಳನ್ನು ಸರ್ಕಾರ ನಿಯಂತ್ರಿಸಲಿ'

Communal Harmony Convention In Udupi

"ಕರ್ನಾಟಕದಲ್ಲಿ ದ್ವೇಷದ ಬೀಜದಿಂದ ಫಸಲು ಹುಟ್ಟುವುದಿಲ್ಲ. ಅವರು ಮಂದಿರ ಇಲ್ಲೇ ಮಾಡುತ್ತೇವೆ ಅಂತಾರೆ. ನಾವು ಸೌಹಾರ್ದ ಇಲ್ಲಿಂದಲೇ ಆರಂಭ ಅನ್ನೋಣ. ಅವರು ಒಡೆಯುತ್ತಾರೆ, ನಾವು‌ ಜೋಡಿಸೋಣ" ಎಂದು ಕರೆ ನೀಡಿದರು.

 ಶಾಲೆ-ಕಾಲೇಜುಗಳಷ್ಟೇ ಅಲ್ಲ ಸಾರ್ವಜನಿಕ ಸ್ಥಳದಲ್ಲೂ ಹಿಜಾಬ್ ನಿಷೇಧ: ಬಿಜೆಪಿ ಮುಖಂಡ ಶಾಲೆ-ಕಾಲೇಜುಗಳಷ್ಟೇ ಅಲ್ಲ ಸಾರ್ವಜನಿಕ ಸ್ಥಳದಲ್ಲೂ ಹಿಜಾಬ್ ನಿಷೇಧ: ಬಿಜೆಪಿ ಮುಖಂಡ

"ಒಡೆಯುವ ಜನರು ಈ ದೇಶದಲ್ಲಿ ಎರಡನೇ ದರ್ಜೆಯ ಜನರನ್ನು ತಯಾರಿಸಲು ಬಯಸುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎನ್ನುತ್ತಾರೆ. ಆದರೆ ಕನ್ನಡ ಹಿಂದಿಗಿಂತಲೂ ಪುರಾತನ ಭಾಷೆ. ಹಿಂದಿ ಈ ದೇಶದ ರಾಷ್ಟ್ರ ಭಾಷೆ ಆಗಲು ಸಾಧ್ಯವಿಲ್ಲ. ಇತರ ಭಾಷೆಗಳು ಈ ದೇಶದಲ್ಲಿ ಬಾಡಿಗೆದಾರರಲ್ಲ. ಈ ದೇಶದಲ್ಲಿ ಯಾರೂ ಎರಡನೇ ದರ್ಜೆಯ ನಾಗರಿಕರಲ್ಲ. ಎಲ್ಲರೂ ಮನೆಯ ಮಾಲೀಕರೆ, ಬಾಡಿಗೆದಾರರಲ್ಲ" ಎಂದರು.

ತಾವೇ ದೇವರು ಎಂದು ತಿಳಿದಿದ್ದಾರೆ; "ಸೆಕ್ಯುಲರಿಸಂ ಅಂದರೆ ಏನು ಅಂತ ಕೇಳುತ್ತಾರೆ. ಸೆಕ್ಯುಲರಿಸಂ ಈ ದೇಶದ ಸ್ವಧರ್ಮ. ಅಧಿಕಾರದ ಕುರ್ಚಿಯಲ್ಲಿ ಕುಳಿತವರು ತಾವೇ ದೇವರು ಅಂತ ಭಾವಿಸಿದ್ದಾರೆ. ಆದರೆ ದೇಶ ಅವರು ಅಧಿಕಾರ ಹಿಡಿಯುವ ಹಿಂದೆಯೂ ನಡೆಯುತ್ತಿತ್ತು‌. ಮುಂದೆಯೂ ನಡೆಯುತ್ತದೆ. ದೇಶಪ್ರೇಮ ದೇಶದ್ರೋಹದ ಬಗ್ಗೆ ದೇಶದಲ್ಲಿ ಬಹಳ ಚರ್ಚೆಯಾಗುತ್ತಿದೆ. ಈ ದೇಶದ ಜನರನ್ನು‌ ಜೋಡಿಸುವುದೇ ದೇಶಪ್ರೇಮಿ. ಈ ದೇಶದಲ್ಲಿ ಕಲಹ, ದ್ವೇಷ, ಜಗಳ ಮಾಡಿಸುವಾತನೇ ದೇಶದ್ರೋಹಿ" ಎಂದು ಆರೋಪಿಸಿದರು.

Communal Harmony Convention In Udupi

"ಈ ದೇಶದಲ್ಲಿ ಬುಲ್ಡೋಜರ್ ಕೇವಲ ಕಟ್ಟಡಗಳ ಮೇಲೆ ಹರಿಯುತ್ತಿಲ್ಲ. ಹಿಂದೂಸ್ಥಾನದ ಸಂವಿಧಾನದ ಮೇಲೂ ಬುಲ್ಡೋಜರ್ ಚಲಾಯಿಸಲಾಗುತ್ತಿದೆ. ಪ್ರತಿಯೊಬ್ಬ ಭಾರತೀಯರು ದೇಶ ರಕ್ಷಣೆಯ ವಿಷಯ ಬಂದಾಗ ಒಂದಾಗುತ್ತೇವೆ. ನಮಗೆ ಯಶಸ್ಸು ಸಿಗುತ್ತಾ? ಅನ್ನೋ ಸಂಶಯ ಹಲವರಿಗಿದೆ. ಆದರೆ ಗೆಲುತ್ತೇವಾ? ಅನ್ನೋದು ಮುಖ್ಯವಲ್ಲ ಯಾವಾಗ ಗೆಲ್ಲುತ್ತೇವೆ ಅನ್ನೋದು‌ ಮುಖ್ಯ" ಎಂದು ಯೋಗೇಂದ್ರ ಯಾದವ್ ಹೇಳಿದರು.

ಇನ್ನು ಸಮಾವೇಶದಲ್ಲಿ ಬಸವ ಧರ್ಮಪೀಠ‌ ಬಸವ ಪ್ರಕಾಶ ಸ್ವಾಮೀಜಿ ಮಾತನಾಡಿ, "ದೇವನೊಬ್ಬ ನಾಮ ಹಲವು ಎಂದು ಹೇಳಿರುವ ದೇಶ ಭಾರತ. ಸಬ್ ಕಾ ಮಾಲಿಕ್ ಏಕ್ ಹೇ ಎಂದಿರುವ ದೇಶ ಭಾರತಹಿಂದು ಮುಸ್ಲಿಂ ಅಲ್ಲಾ ಗಹರ್ ದೋನೋ ಭಗವಾನ್ ಏಕ್ ಹರ್ ಅನ್ನುವ ದೇಶದೊಳಗೆ ಕೋಮುಗಲಭೆ ನಡೆಯುತ್ತಿದೆ. ಧರ್ಮ ಹಾಗೂ ದೇವರ ಹೆಸರಿನ ಮೇಲೆ ಕೋಮುಗಲಭೆ ನಡೆಯುತ್ತಿದೆ. ಉಸಿರು ಗಟ್ಟಿಸುವ ವಾತಾವರಣ ಇದೆ" ಎಂದರು.

"ನಮಗೆ ಹಿಂದುತ್ವ ಬೇಕಾಗಿಲ್ಲ ಮಾನವ ಬಂಧುತ್ವ ಬೇಕಾಗಿದೆ. ಧರ್ಮವನ್ನು ಮುಸಲ್ಮಾನ ಮಸೀದಿಯೊಳಗೆ, ಹಿಂದು ದೇವಾಲಯದೊಳಗೆ ಹಾಗೂ ಲಿಂಗಾಯತ ಮಠದ ಒಳಗೆ ಇಡೋಣ. ನಾವೆಲ್ಲ ಭಾರತಾಂಬೆಯ ಮಕ್ಕಳು ಅನ್ನುವ ಸಂದೇಶ ಸಾರೋಣ. ನನ್ನ ಮಠಕ್ಕೂ ಎರಡು ಪತ್ರ ಬಂದಿದೆ. ಸ್ವಾಮೀ ನೀವು ಬೆಳಗಾವಿ ಜಿಲ್ಲೆಯೊಳಗಡೆ ಸಂವಿಧಾನ ಹಿಡಿದು ಬುದ್ದ, ಬಸವ, ಅಂಬೇಡ್ಕರ್ ವಿಚಾರದಲ್ಲಿ ಸಮಾನತೆ ಎಂದು ಹಾರಾಡುತ್ತಿಯಾ. ನೀನು ಬುಲೆಟ್‌ನಿಂದ ಹೊರಟ ಗುಂಡಿಗೆ ಬಲಿಯಾಗ್ತೀಯಾ ಎಂದು ಬರೆದಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನ ಇರುವಾಗ ನೂರು ಗುಂಡು ಹಾಕಿದ್ರೂ ಫರಕ್ ಇರೋದಿಲ್ಲ. ಅಂಬೇಡ್ಕರ್ ತಾಕತ್ತಿನ ಕಾನೂನು ಕೊಟ್ಟಿದ್ದಾರೆ" ಎಂದು ಹೇಳಿದರು.

"ಭಾರತ ದೇಶದೊಳಗೆ ಎಲ್ಲರಿಗೂ ಬದುಕುವ ಹಕ್ಕು ಕೊಟ್ಟಿದ್ದಾರೆ. ಸಂವಿಧಾನದಲ್ಲಿ ಸ್ವಾಮಿಗಳು ಖಾವಿ ಪೇಟ ಹಾಕಲು ಅವಕಾಶ ಇದೆ. ಮುಸ್ಲಿಂಮರಿಗೆ ಹಿಜಾಬ್ ಹಾಕಲು ಅವಕಾಶ ಕೊಟ್ಟಿದ್ದಾರೆ. ಇದ್ಯಾವುದನ್ನೂ ಕಡೆಗಣಿಸಬಾರದು ಆಗ ಮಾತ್ರ ಅಂಬೇಡ್ಕರ್ ಕಂಡ ಕನಸು ನನಸಾಗುತ್ತದೆ. ಹಿಂದು ‌ಎಂದು ಬಡಿದಾಡುವುದಕ್ಕಿಂತ ನಾವೆಲ್ಲ ಒಂದು ಎಂದು ಬಡಿದಾಡಿದರೆ ಎಲ್ಲರ ಕನಸು ನನಸಾಗುತ್ತದೆ" ಎಂದು ಆಶಯ ವ್ಯಕ್ತಪಡಿಸಿದರು.

Recommended Video

ಜನತೆ ಜೊತೆ ಕಾಂಗ್ರೆಸ್ ಕೊಂಡಿ ಕಳಚಿದೆ ಎಂದು ಒಪ್ಪಿಕೊಂಡ ರಾಹುಲ್ ಗಾಂಧಿ | Oneindia Kannada

English summary
Various progressive organisations of Karnataka organized communal harmony convention in Udupi on May 14th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X