• search

ಉಡುಪಿ ಜಿಲ್ಲೆಗೆ ಸಿದ್ದರಾಮಯ್ಯ ಏನು ಕಾಣಿಕೆ ನೀಡಿದ್ದಾರೆ?

By Manjunatha
Subscribe to Oneindia Kannada
For udupi Updates
Allow Notification
For Daily Alerts
Keep youself updated with latest
udupi News
    ಸಿದ್ದರಾಮಯ್ಯನವರ ನವ ಕರ್ನಾಟಕ ನಿರ್ಮಾಣ ಯಾತ್ರೆ ಉಡುಪಿಯಲ್ಲಿ | Oneindia Kannada

    ಉಡುಪಿ, ಜನವರಿ 08: ಸಿದ್ದರಾಮಯ್ಯ ಅವರ ನವ ಕರ್ನಾಟಕ ನಿರ್ಮಾಣ ಯಾತ್ರೆ ಇಂದು ಉಡುಪಿ ಜಿಲ್ಲೆ ತಲುಪಿದೆ. ಜಿಲ್ಲೆಯಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.

    ಜಿಲ್ಲೆಯ ಪ್ರಮುಖ ರಾಜಕೀಯ ಕ್ಷೇತ್ರಗಳಾದ ಕುಂದಾಪುರ, ಬ್ರಹ್ಮಾವರ, ಕಾಪು ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

    ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು

    ಮೂರೂ ನಗರಗಳಲ್ಲಿ ಹಲವು ಫಲಾನುಭವಿಗಳಿಗೆ ಯೋಜನೆಗಳನ್ನು ಮುಖ್ಯಮಂತ್ರಿಗಳು ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಸ್ಥಳೀಯ ಶಾಸಕರು, ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ.

    ತಮ್ಮ ಭಾಷಣದಲ್ಲಿ ಉಡುಪಿ ಜಿಲ್ಲೆಗೆ ಸರ್ಕಾರ ನೀಡಿರುವ ಕೊಡುಗೆಗಳ ಪ್ರಸ್ತಾಪ ಮಾಡಲಿರುವ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ ಎಂದು ಊಹಿಸಲಾಗಿದೆ.

    ಉಡುಪಿ ಜಿಲ್ಲೆಗೆ ಸರ್ಕಾರ ನೀಡಿರುವ ಕೊಡುಗೆಗಳ ಪಟ್ಟಿ ಇಲ್ಲಿದೆ...

    ಕೃಷಿ ಭಾಗ್ಯಕ್ಕೆ 450 ಲಕ್ಷ ಅನುದಾನ

    ಕೃಷಿ ಭಾಗ್ಯಕ್ಕೆ 450 ಲಕ್ಷ ಅನುದಾನ

    ರಾಜ್ಯ ಸರ್ಕಾರದ ಮುಂಚೂಣಿ ಅನ್ನ ಭಾಗ್ಯ ಯೋಜನೆಯಿಂದ ಉಡುಪಿಯ ಬಡ ಕುಟುಂಬಗಳಿಗೆ 48527 ಕ್ವಿಂಟಾಲ್ ಧಾನ್ಯಗಳನ್ನು ಪೂರೈಸಲಾಗುತ್ತಿದ್ದು ಈ ವರೆಗೂ 5,46,121 ಜನರು ಇದರಿಂದ ಫಲಾನುಭವಿಗಳಾಗಿದ್ದಾರೆ. ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಗೆ 450 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗಿದ್ದು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನವನ್ನು ನೀಡಲಾಗಿದ್ದು ಸಾವಯವ ಭಾಗ್ಯದ ಅಡಿಯಲ್ಲಿ ಕಳೆದ 4 ವರ್ಷಗಳಲ್ಲಿ 205.63 ಲಕ್ಷ ಅನುದಾನವನ್ನು ನೀಡಲಾಗಿದೆ.

    ಮೀನುಗಾರರ ಕುಟುಂಬಕ್ಕೆ 635 ಮನೆ

    ಮೀನುಗಾರರ ಕುಟುಂಬಕ್ಕೆ 635 ಮನೆ

    ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ 3232 ಕೃಷಿ ಉಪಕರಣಗಳನ್ನು ವಿತರಿಸಲಾಗಿದ್ದು, ಸರ್ಕಾರವು ಈವರೆಗೂ 1361.84 ಲಕ್ಷ ಸಹಾಯಧನ ನೀಡಿದ್ದು, 7 ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಿ 287.94 ಲಕ್ಷ ಅನುದಾನ ನೀಡಿದೆ. ಮತ್ಸ್ಯಾಶ್ರಯ ಯೋಜನೆಯಡಿಲ್ಲಿ ಮೀನುಗಾರ ಕುಟುಂಬಗಳಿಗೆ 635 ಮನೆಗಳು ಮಂಜೂರಾಗಿದ್ದು, ಪ್ರತಿ ಮನೆಗೆ 1.20 ಲಕ್ಷ ಸಹಾಯಧನ ನೀಡಲಾಗುತ್ತಿದ್ದು 20 ಕೋಟಿ ಡೀಸೆಲ್ ಸಬ್ಸಿಡಿಯನ್ನು ಬಿಡುಗಡೆ, ಮಾಡಲಾಗುತ್ತಿದೆ. ಮಲ್ಪೆ ಬಂದರಿನ ಸಮಗ್ರ ಅಭಿವೃದ್ದಿಗೆ 5 ಕೋಟಿ ನೀಡಲಾಗಿದ್ದು ಸಾಸ್ತಾನ ದಲ್ಲಿ 2 ಕೋಟಿ ಮತ್ತು ಶಿರೂರು ನಲ್ಲಿ 90 ಲಕ್ಷ ವೆಚ್ಚದ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

    3500 ಮಂದಿಗೆ ತಿಂಗಳಿಗೆ 500 ರೂಪಾಯಿ

    3500 ಮಂದಿಗೆ ತಿಂಗಳಿಗೆ 500 ರೂಪಾಯಿ

    ವಸತಿ ಭಾಗ್ಯ ಯೋಜನೆಯಡಿಯಲ್ಲಿ 2017-18 ರಲ್ಲಿ 4225 ಮನೆ ಕಾಮಗಾರಿ ಕೈಗೊಳ್ಳಲಾಗಿದ್ದು ದೇವರಾಜ ಅರಸು ವಿಶೇಷ ವರ್ಗದ ವಸತಿ ಯೋಜನೆಯಡಿ 408 ಫಲಾನುಭವಿಗಳನ್ನು ಆಯ್ಕೆ ಮಾಡಿ, ಮಂಜೂರಾತಿಯನ್ನು ನೀಡಲಾಗಿದೆ. ಮನಸ್ವಿನಿ ಯೋಜನೆಯಡಿಯಲ್ಲಿ 3500 ಫಲಾನುಭವಿಗಳಿಗೆ ಪ್ರತಿ ತಿಂಗಳು 500 ರೂ ನೀಡಲಾಗುತ್ತಿದ್ದು ಕ್ಷೀರಭಾಗ್ಯ ಯೋಜನೆಯಡಿಯಲ್ಲಿ 86198 ಮಕ್ಕಳು ಪ್ರಯೋಜವನ್ನು ಪಡೆಯುತ್ತಿದ್ದಾರೆ.

    1302 ಮಂದಿಗೆ ಸಹಾಯಧನ

    1302 ಮಂದಿಗೆ ಸಹಾಯಧನ

    ಕ್ಷೀರ ಧಾರೆ ಯೋಜನೆಯಡಿಯಲ್ಲಿ 32 ಸಾವಿರ ರೈತರು ಫಲಾನುಭವಿಗಳಾಗಿದ್ದು ತಿಂಗಳಿಗೆ 2.90 ಕೋಟಿ ರೂಪಾಯಿಗಳಷ್ಟು ಸಬ್ಸಿಡಿಯನ್ನು ಪಡೆಯುತ್ತಿದ್ದಾರೆ. ವಿದ್ಯಾಸಿರಿ ಯೋಜನೆಯಡಿಯಲ್ಲಿ 2013-14, 472 ಮಂದಿಗೆ 38.10 ಲಕ್ಷ, 2014-15, 1549 ಮಂದಿ 134.98 ಲಕ್ಷ 2015-16, 3707 ಮಂದಿ 216.47 ಲಕ್ಷ, 2016-17, 5351 ಮಂದಿ 201.86 ಲಕ್ಷ . ಈ ವರ್ಷ ಇದುವರೆಗೆ 1302 ಮಂದಿಗೆ 41.12 ಲಕ್ಷ ಪ್ರೋತ್ಸಾಹ ಧನವನ್ನು ವಿತರಿಸಲಾಗಿದೆ.

    ಮೂಲ ಸೌಕರ್ಯ ಅಭಿವೃದ್ಧಿಗೆ 4.53 ಕೋಟಿ

    ಮೂಲ ಸೌಕರ್ಯ ಅಭಿವೃದ್ಧಿಗೆ 4.53 ಕೋಟಿ

    ವೈಜ್ಞಾನಿಕ ಕಸ ವಿಲೇಯಿಂದ ತಿಂಗಳಿಗೆ 45000 ರೂ. ಆದಾಯ ನಿರೀಕ್ಷೆಯಿದ್ದು ಇದಕ್ಕಾಗಿ ಭಾರತ ಸರ್ಕಾರದಿಂದ ದರ್ಪಣ್ ಪ್ರಶಸ್ತಿ ಲಭ್ಯವಾಗಿದೆ. ಮಲ್ಪೆ, ಕಾಪು, ಪಡುಬಿದ್ರೆ, ತ್ರಾಸಿ, ಮರವಂತೆ ಸಮುದ್ರ ತೀರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 4.53 ಕೋಟಿ ರೂ. ವೆಚ್ಚ ಮಾಡಲಾಗಿದ್ದು ಕಾಪುವಿನಲ್ಲಿ ಸ್ಕ್ಯೂಬಾ ಡೈವಿಂಗ್, ಸೈಂಟ್ ಮೇರೀಸ್‍ನಲ್ಲಿ ಪರಿಸರ ಪ್ರವಾಸೋದ್ಯಮದ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ.

    ಹಿಂದುಳಿದ ಗ್ರಾಮೀಣರಿಗೆ 20 ಕೋಟಿ ನೆರವು

    ಹಿಂದುಳಿದ ಗ್ರಾಮೀಣರಿಗೆ 20 ಕೋಟಿ ನೆರವು

    ಕೃಷಿ ಭಾಗ್ಯ ಯೋಜನೆಯಡಿಯಲ್ಲಿ 125 ಕೃಷಿ ಹೊಂಡಗಳನ್ನು ರಚನೆ ಮಾಡಲಾಗಿದ್ದು, ಜಿಲ್ಲೆಯ ಅತ್ಯಂತ ಹಿಂದುಳಿದ ಕೊರಗ ಸಮುದಾಯವನ್ನು ಭೂಸಮೃದ್ಧಿ ಯೋಜನೆಯಡಿ ಆಯ್ಕೆಮಾಡಿ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲಾಗಿದೆ. ಜಿಲ್ಲೆಯ ಹಿಂದುಳಿದವರಿಗಾಗಿ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 20 ಕೋಟಿ ರೂ. ನೆರವು ನೀಡಿದ್ದು ಕೊಲ್ಲೂರಿನ ಮಾವಿನಕಾಡಿನಲ್ಲಿ 65 ಲಕ್ಷ ರೂ. ಸೇತುವೆ ನಿರ್ಮಾಣ ಮಾಡಲಾಗಿದೆ.

    1800 ಕ್ರೀಡಾ ಫಲಾನುಭವಿಗಳು

    1800 ಕ್ರೀಡಾ ಫಲಾನುಭವಿಗಳು

    ಜಿಲ್ಲೆಯ ಯುವಜನಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 17 ಕೋಟಿ ರೂ. ವೆಚ್ಚಮಾಡಲಾಗಿದ್ದು 4.10 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ಯುವಶಕ್ತಿ ಕೇಂದ್ರಗಳಿಗೆ 15 ಲಕ್ಷರೂ., ಜಿಮ್ ಸಾಮಗ್ರಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 15 ಲಕ್ಷ ರೂ., ಕ್ರೀಡಾ ಹಾಸ್ಟೆಲ್ ಮೇಲ್ದರ್ಜೆಗೆ 1 ಕೋಟಿ ರೂ., ನಮ್ಮೂರ ಶಾಲೆ-ನಮ್ಮೂರ ಯುವಜನತೆಯಡಿ ತಲಾ ಒಂದು ಲಕ್ಷದಂತೆ 12 ಲಕ್ಷರೂ., ಗ್ರಾಮೀಣ ಕ್ರೀಡಾಕೂಟಕ್ಕೆ 4 ಲಕ್ಷ ರೂ., ಜಿಮ್ ಒಳಾಂಗಣಕ್ಕೆ 2 ಕೋಟಿ ರೂ., 1.2 ಕೋಟಿ ರೂ., ಗೆ ಬ್ಯಾಂಡ್ಮಿಟನ್ ಕೋರ್ಟ್, ಈಜುಕೊಳದ ಮೇಲ್ಚಾವಣಿಗೆ 1.51 ಕೋಟಿ., ಸಿಂಥೆಟಿಕ್ ಟ್ರ್ಯಾಕ್ 3.61 ಕೋಟಿ ರೂ ಅನುದಾನವನ್ನು ನೀಡಿ ಅಭಿವೃದ್ಧಿ ಪಡಿಸಲಾಗಿದ್ದು ಪ್ರತಿದಿನ 150 ರಿಂದ 200 ಕ್ರೀಡಾಪಟುಗಳು ಇದನ್ನು ಬಳಸಿಕೊಳ್ಳುತ್ತಿದ್ದು ಇಲಾಖೆಯಿಂದ 1,800 ಫಲಾನುಭವಿಗಳಿಗೆ ನೆರವು ನೀಡಲಾಗಿದೆ.

    ಮರವಂತೆಯಲ್ಲಿ 4500 ಲಕ್ಷ ವೆಚ್ಚದಲ್ಲಿ ನಾಡದೋಣಿ ತಂಗುದಾಣ

    ಮರವಂತೆಯಲ್ಲಿ 4500 ಲಕ್ಷ ವೆಚ್ಚದಲ್ಲಿ ನಾಡದೋಣಿ ತಂಗುದಾಣ

    ಬಂದರು ಮತ್ತು ಮೀನುಗಾರಿಕೆ ಇಲಾಖೆಯಡಿ ಮಲ್ಪೆ ಮೀನುಗಾರಿಕೆ ಬಂದರಿನ 3ನೇ ಹಂತದ ನಿರ್ಮಾಣವು 3715.00 ಲಕ್ಷ ವೆಚ್ಚದಲ್ಲಿ ಮುಕ್ತಾಯವಾಗಿದೆ. ಮರವಂತೆಯಲ್ಲಿ 4500.00 ಲಕ್ಷ ರೂ. ಗಳಲ್ಲಿ ನಾಡದೋಣಿ ತಂಗುದಾಣ. ಶಿರೂರು ಅಳಿವೆಗದ್ದೆಯಲ್ಲಿ 968.72 ಲಕ್ಷ ದಲ್ಲಿ ಜೆಟ್ಟಿ ನಿರ್ಮಾಣ ಪೂರ್ಣಗೊಂಡಿದೆ. ಕೊಡೇರಿಯಲ್ಲಿ 3000.00 ಲಕ್ಷದಲ್ಲಿ ಮೀನುಗಾರಿಕೆ ಇಳಿದಾಣ ನಿರ್ಮಾಣ ಮಾಡಿದ್ದು, ಕುಂದಾಪುರದ ಕೋಡಿಗೆಎ 400.00 ಲಕ್ಷ ರೂ. ಮಂಜೂರು ಮಾಡಲಾಗಿದೆ. ಹಾಗೂ ಗಂಗೊಳ್ಳಿ ಮೀನುಗಾರಿಕೆ ಬಂದರಿಗೆ 10210.004 ಲಕ್ಷ ಮಂಜೂರು ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

    ಇನ್ನಷ್ಟು ಉಡುಪಿ ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    CM Siddaramaiah is in Udupi today. He is inaugurating crores worth many development programs in Udupi district. He is Visiting Kapu, Brahmavara, Kundaparu.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more