ಶಿವಮೊಗ್ಗ ಗಲಭೆ: ಮುಸಲ್ಮಾನರ ಮನಸ್ಸುಗಳಲ್ಲೇ ಸಮಸ್ಯೆ ಇದೆ ಎಂದ ಚಕ್ರವರ್ತಿ ಸೂಲಿಬೆಲೆ
ಶಿವಮೊಗ್ಗ, ಅಕ್ಟೋಬರ್, 02: ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಮನೆಗಳ ಮೇಲೆ ಕಲ್ಲು ತೂರಿರುವ ಘಟನಡ ನಡೆದಿತ್ತು. ಈ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ. ಅಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ ಎಂದರು.
ಶಿವಮೊಗ್ಗದಲ್ಲಿ ಕೈಯಲ್ಲಿ ತಲ್ವಾರ್ ಹಿಡಿದು ವಿಕೃತ ನೃತ್ಯ ಮಾಡಿ ಹಿಂದುಗಳನ್ನು ಪ್ರಚೋದಿಸುತ್ತಿದ್ದರು. ಅಲ್ಲದೆ ಬೀದಿಗಳಲ್ಲಿ ವಿವಾದಾತ್ಮಕ ಬ್ಯಾನರ್‌ಗಳನ್ನು ಕೂಡ ಅಳವಡಿಕೆ ಮಾಡಿದ್ದರು. ಆಗಲೂ ಹಿಂದೂಗಳು ಪ್ರಚೋದನೆಯಾಗದ್ದನ್ನು ಕಂಡು ಕಲ್ಲೆಸೆಯುವ ಕೃತ್ಯಕ್ಕೆ ಇಳಿದಿದ್ದಾರೆ. ಇದೇ ವೇಳೆ ಕಿಡಿಗೇಡಿಗಳು ಪೊಲೀಸರ ಮೇಲೆಯೂ ಕಲ್ಲೆಸೆದು ಹಲ್ಲೆ ಮಾಡಿದ್ದಾರೆ. ಇಂತಹ ಸಮಯದಲ್ಲೂ ಪೊಲೀಸರು ಗಲಾಟೆಯನ್ನು ಹತೋಟಿಗೆ ತರಲು ಯಶಸ್ವಿಯಾಗಿದ್ದಾರೆ ಎಂದರು.

ಪ್ರತಿ ಬಾರಿ ಹಿಂದೂಗಳ ಮೇಲೆಯೇ ಗೂಬೆ ಕೂರಿಸುತ್ತಿದ್ದರು. ಆದರೆ ಈ ಬಾರಿ ಈ ಘಟನೆಯಲ್ಲಿ ತಪ್ಪಿತಸ್ಥರು ಯಾರು ಎಂಬುದು ಗಮನಕ್ಕೆ ಬಂದಿದೆ. ಚಿಕ್ಕ ಕಮಕ್ಕಳು ಈ ಗಲಾಟೆಯಲ್ಲಿ ಭಾಗಿಯಾಗಿದ್ದು, ಇದರಿಂದ ಶಿವಮೊಗ್ಗ ಜ್ವಾಲಾಮುಖಿಯಲ್ಲಿ ಕುದಿಯುತ್ತಿದೆ ಎಂಬುದು ನನ್ನ ಭಾವನೆ. ಮುಂದಿನ ಎರಡು ಪೀಳಿಗೆ ಇಂತಹ ಪರಿಸ್ಥಿತಿ ನೋಡುವ ಸಾಧ್ಯತೆ ಇದೆ ಎಂದರು.
ಮಸೀದಿಯ ಮುಂಭಾಗ ಹಸಿರು ಅಖಂಡ ಭಾರತ ಮತ್ತು ಕೆಲ ಪೋಸ್ಟರ್‌ಗಳನ್ನು ನಾನೇ ನೋಡಿದ್ದೇನೆ. ಔರಂಗಜೇಬ ಅಖಂಡ ಸಾಮ್ರಾಜ್ಯವನ್ನು ಕಟ್ಟಿದ ಎಂದು ಪೋಸ್ಟರ್‌ನಲ್ಲಿ ಬಿಂಬಿಸಲಾಗಿತ್ತು. ಔರಂಗಜೇಬನೊಬ್ಬ ಇಲಿ, ಶಿವಾಜಿ ಮಹಾರಾಜರಿಗೆ ಹೆದರಿ ಹೆದರಿ ಸಾಯುತ್ತಿದ್ದ. ಇಂತಹ ಪೋಸ್ಟರ್ ಅನ್ನು ಹಾಕಿರುವುದು ನೋಡಿ ನನಗೆ ನಗು ಬರುತ್ತಿತ್ತು. ಅಖಂಡ ಭಾರತ ಮತ್ತೆ ಆಗೋದಾದ್ರೆ ಅದು ಪ್ರದಾನಿ ನರೇಂದ್ರ ಮೋದಿ ಕಾಲದಲ್ಲಿ ಎಂದರು.
ಶಿವಮೊಗ್ಗದಲ್ಲಿ ದಾಂದಲೆಗೆ ಸಿದ್ದರಾಗಿದ್ದರು ಎಂದು ಎಸ್ಪಿ ಅವರೇ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ಗಮನಿಸಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ನನಗೆ ಅನಿಸುತ್ತಿದೆ ಎಂದು ಹೇಳಿದರು.
ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗಿದ್ದು, ಇಲ್ಲಿ ಮುಸ್ಲಿಮರ ಮಾನಸಿಕತೆ ಪ್ರದರ್ಶನ ಸ್ಪಷ್ಟವಾಗಿ ಕಾಣುತ್ತಿದೆ. ಹಿಂದುಗಳು ಪ್ರವೋಕ್ ಮಾಡಿದ್ದಾರೆ ಎಂದು ಗಲಾಟೆ ಮಾಡುತ್ತೀರಾ. ಹಿಂದುಗಳು ಪ್ರವೋಕ್ ಮಾಡದಿದ್ದಾಗ ನೀವೇ ಪ್ರವೋಕ್ ಮಾಡುವಂತೆ ಬ್ಯಾನರ್ ಅಳವಡಿಸುತ್ತೀರಾ.
ಆಗಲೂ ಹಿಂದುಗಳು ಪ್ರವೋಕ್ ಆಗದಿದ್ದಾಗ ನಿಮಗೆ ತಡೆಯಲಾಗದೆ ಪೊಲೀಸರ ಮೇಲೆ ಕಲ್ಲುತೂರಾಟ ಮಾಡುತ್ತೀರಿ. ಅಂದರೆ ನಿಮ್ಮ ಮನಸ್ಸುಗಳಲ್ಲೇ ಸಮಸ್ಯೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಸಮಾಜದ ಹಿರಿಯರು ತರುಣ ಪೀಳಿಗೆಯನ್ನು ಕಂಟ್ರೋಲ್ ಮಾಡದಿದ್ದರೆ ಆ ಮನಸ್ಸುಗಳು ಸ್ಚಸ್ಥ ಭಾರತ ಹಾಳು ಮಾಡುತ್ತದೆ. ಇದಕ್ಕೆ ಶಿವಮೊಗ್ಗದಲ್ಲಿ ನಡೆದ ಗಲಭೆಯೇ ದೊಡ್ಡ ಉದಾಹರಣೆ ಎನ್ನಬಹುದು ಎಂದರು. ಇನ್ನು ಪಾಕಿಸ್ತಾನದಲ್ಲಿ ಮುಸಲ್ಮಾನರೇ ನಮ್ಮನ್ನು ಭಾರತಕ್ಕೆ ಸೇರಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಹೀಗೆ ಪಾಕಿಸ್ತಾನ ಬಿಕಾರಿಯಾಗಿದೆ ಎಂಬ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.












Click it and Unblock the Notifications