ಮತ ಮರೆಮಾಚಿ ಪ್ರೀತಿಗೆ ಒತ್ತಡ, ಯುವತಿಯಿಂದ ದೂರು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಡಿಸೆಂಬರ್ 19: ತನ್ನ ಧರ್ಮವನ್ನು ಮರೆಮಾಚಿ, ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದ ಎಂದು ಯುವತಿಯೊಬ್ಬಳು ಆರೋಪಿಸಿದ ಕಾರಣಕ್ಕೆ ಸಮೀರ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ ನಿರ್ವಾಹಕ ಸಮೀರ್ ಬಂಧಿತ. ಆತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಯುವತಿಯು ಪೊಲೀಸರಿಗೆ ದೂರು ನೀಡಿದ್ದಾಳೆ.

ಪಡುಕೆರೆ ಬಳಿ ಸಮೀರ್ ಜತೆಗೆ ಯುವತಿ ಮಾತನಾಡುತ್ತಿದ್ದಳು. ಈ ಇಬ್ಬರು ಸಂಘ ಪರಿವಾರದವರ ಕಣ್ಣಿಗೆ ಬಿದ್ದಿದ್ದಾರೆ. ಆ ನಂತರ ಅವರನ್ನು ಕೋಟ ಬಸ್ ನಿಲ್ದಾಣದ ಬಳಿ ಹಿಡಿದ ಸಂಘಟನೆಯವರು, ಪೊಲೀಸರಿಗೆ ಒಪ್ಪಿಸಿದ್ದಾರೆ. ಅಗ ಯುವತಿ ಸಮೀರ್ ವಿರುದ್ಧವೇ ದೂರು ನೀಡಿದ್ದಾಳೆ.[ಕೊಟ್ನಕಟ್ಟೆಯಲ್ಲಿ ರೌಡಿ ಶೀಟರ್ ವರ್ವಾಡಿ ಪ್ರವೀಣ್ ಹತ್ಯೆ]

Boy pretends as Hindu to befriend to girl, arrested

ಯುವತಿಯು ಹೊನ್ನಾವರದಲ್ಲಿ ಆರು ತಿಂಗಳ ಹಿಂದೆ ಸಮೀರ್ ಗೆ ಪರಿಚಯವಾಗಿದ್ದಳು. ಆಗಿನಿಂದ ಇಬ್ಬರ ಮಧ್ಯೆ ಸ್ನೇಹವಿತ್ತು. ಆದರೆ ಆತ ತನ್ನನ್ನು ರಾಹುಲ್ ಎಂದು ಪರಿಚಯಿಸಿಕೊಂಡಿದ್ದಾಗಿ ಯುವತಿ ದೂರಿದ್ದು, ಒತ್ತಾಯಕ್ಕೆ ಮಣಿದು ಮಾತನಾಡುತ್ತಿದ್ದೆ ಎಂದು ಆಕೆ ಹೇಳಿದ್ದಾಳೆ.

ಸಮೀರ್ ಇತರ ಯುವತಿಯರ ಜತೆಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಸಂಘಪರಿವಾರದವರು ದೂರಿದ್ದಾರೆ. ಆ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬ್ರಹ್ಮಾವರ ಸರ್ಕಲ್ ಇನ್ ಸ್ಪೆಕ್ಟರ್ ಶ್ರೀಕಾಂತ್ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A young person caught recently by public in Kota, Udupi and handed over to police after he told the girl that, he was Hindu and tried forcibly to befriend her.
Please Wait while comments are loading...