ಬಿಜೆಪಿ ಶಾಸಕರ ವಿರುದ್ದ ಅದೇ ಪಕ್ಷದ ಮುಖಂಡನಿಂದ ಕೊಲ್ಲೂರು ಮೂಕಾಂಬಿಕೆಗೆ ದೂರು!

ಉಡುಪಿ, ಏಪ್ರಿಲ್ 10: ಕಳೆದ ಅಸೆಂಬ್ಲಿ ಚುನಾವಣೆಯಲ್ಲಿನ ತಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಮ್ಮದೇ ಪಕ್ಷದ ಮುಖಂಡರೊಬ್ಬರ ಮೇಲೆ ಬೈಂದೂರು ಶಾಸಕ ಸುಕುಮಾರ್ ಬಿ ಶೆಟ್ಟಿ ದೂರು ನೀಡಿದ್ದಾರೆ.

ಈ ಹಿಂದೆ ಆತ ನನ್ನ ತಮ್ಮನಂತೆ ಅಂತ ಹೇಳಿದ್ದ ಸುಕುಮಾರ್ ಶೆಟ್ಟಿಯವರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ಉಪ್ಪಿನಕುದ್ರು ಮೇಲೆ ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

"ನಾನು ಒಂದು ರೂಪಾಯಿ ಸುಕುಮಾರ್ ಶೆಟ್ಟಿಯವರಿಗೆ ಕೊಡಲಿಕ್ಕೆ ಇಲ್ಲ, ನಾನು ಯಾವುದೇ ಚೆಕ್ ಅವರಿಗೆ ಕೊಟ್ಟಿಲ್ಲ. ದಿನಾ ಬೆಳಗ್ಗೆ ಆದರೆ ಸಾಕು ಹಿಂಸೆ ನೀಡುತ್ತಿದ್ದಾರೆ, ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ"ಎಂದು ಸದಾನಂದ ಶೆಟ್ಟಿಯವರು ಕೊಲ್ಲೂರು ಮೂಕಾಂಬಿಕೆ ದೇವಾಲಯದ ಎದುರು ಆಣೆ ಮಾಡಿದ್ದಾರೆ.

BJP Byndoor MLA And Udupi District BJP Leader Fight Over Cheque Bounce

"ಸುಕುಮಾರ್ ಶೆಟ್ಟಿಯವರು ಮೂಕಾಂಬಿಕೆಯ ಪರಮಭಕ್ತ ಎಂದು ಹೇಳುತ್ತಾರೆ. ನಾನು ತಾಯಿಯ ಮುಂದೆ, ನನ್ನ ಮಕ್ಕಳ ತಲೆಯ ಮೇಲೆ ಆಣೆ ಮಾಡಲು ಸಿದ್ದನಿದ್ದೇನೆ. ನಾನು ನಿಮಗೆ ಚೆಕ್ ಕೊಟ್ಟಿದ್ದು ಹೌದಾದರೆ, ತಾಯಿಯ ಮುಂದೆ ಬಂದು ಪ್ರಮಾಣ ಮಾಡಲಿ" ಎಂದು ಸದಾನಂದ ಶೆಟ್ಟಿ ಉಪ್ಪಿನಕುದ್ರು ಸವಾಲು ಹಾಕಿದ್ದಾರೆ.

"ಕುಂದಾಪುರ ಮೂಲದ ಸದಾನಂದ ಶೆಟ್ಟಿ ಎನ್ನುವ ವಕೀಲರಿಂದ ಇಪ್ಪತ್ತು ಲಕ್ಷ ಸಾಲ ಪಡೆದಿದ್ದೆ. ಆ ನಂತರ ಆ ದುಡ್ಡನ್ನು ಬಡ್ಡಿ ಸಮೇತ ಹಿಂದಿರುಗಿಸಿದ್ದೆ. ಆಗ ಸಾಲಕ್ಕೆ ಗ್ಯಾರಂಟಿಯಾಗಿ ನಾನು ಕೊಟ್ಟಿದ್ದ ಚೆಕ್ ಅನ್ನು ವಕೀಲರು ನನಗೆ ವಾಪಸ್ ಕೊಟ್ಟಿರಲಿಲ್ಲ"ಎಂದು ಬಿಜೆಪಿ ಮುಖಂಡ ಸದಾನಂದ ಶೆಟ್ಟಿ ಉಪ್ಪಿನಕುದ್ರು ಆರೋಪಿಸಿದ್ದಾರೆ.

"ಇವರಿಂದಾಗಿ ನನಗೆ ಕೋಟ್ಯಾಂತರ ರೂಪಾಯಿ ಸಾಲ ಆಗಿದೆ. ನಾನು ಶಾಸಕ ಸುಕುಮಾರ್ ಶೆಟ್ಟಿಯವರಿಗೆ ಚೆಕ್ ಕೊಟ್ಟಿದ್ದು ಹೌದು ಎಂದಾದರೆ ನನ್ನನ್ನು ಬಂಧಿಸಲಿ"ಎಂದು ಸದಾನಂದ ಶೆಟ್ಟಿ ಹೇಳಿದ್ದಾರೆ. "ಈ ಬಗ್ಗೆ ಆ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ"ಎಂದು ಶಾಸಕ ಸುಕುಮಾರ್ ಶೆಟ್ಟಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+