ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಗನಿಂದಲೇ ಭಾಸ್ಕರ್ ಶೆಟ್ಟಿ ಅಂತ್ಯಕ್ರಿಯೆ ಮಾಡಿಸಲಾಗಿದೆ'

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 23 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಅವರ ತಾಯಿ ಸುಮತಿ ಶೆಟ್ಟಿ ಅವರ ಹೇಳಿಕೆಯನ್ನು ಸಿಐಡಿ ಅಧಿಕಾರಿಗಳು ಪಡೆದಿದ್ದಾರೆ.

ಹತ್ಯೆ ಪ್ರಕರಣದ ತನಿಖೆಗೆ ಭಾನುವಾರವೂ ಬಿಡುವು ನೀಡದ ತಂಡ, ಸುಮತಿ ಶೆಟ್ಟಿ ಸೇರಿದಂತೆ ಭಾಸ್ಕರ್ ಶೆಟ್ಟಿ ಅವರ ಹಲವು ಸಂಬಂಧಿಕರಿಂದ ಮಾಹಿತಿ ಹಾಗೂ ಹೇಳಿಕೆ ಪಡೆದುಕೊಂಡಿದೆ. ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರು ತನಿಖೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.['ಭಾಸ್ಕರ್‌ ಶೆಟ್ಟಿ ಅವರ ಜೊತೆ ಯಾವುದೇ ವ್ಯವಹಾರ ಇರಲಿಲ್ಲ']

Bhaskar Shetty murder : CID records statement of Sumathi Shetty

'ವಿಚ್ಛೇದನ ನೀಡುವಂತೆ ಅಳಿಯ ಮಗಳು ರಾಜೇಶ್ವರಿಗೆ ಬೆದರಿಕೆ ಹಾಕುತ್ತಿದ್ದ. ಆದ್ದರಿಂದ, ಆಕೆಯ ಜೀವಕ್ಕೂ ಬೆದರಿಕೆ ಇತ್ತು. ಒಂದು ವೇಳೆ ಪತಿಯನ್ನು ಕೊಂದಿದ್ದರೂ ಮಗನಿಂದಲೇ ಅಂತ್ಯಕ್ರಿಯೆ ಮಾಡಿಸಿದ್ದಾಳೆ ' ಎಂದು ಸುಮತಿ ಶೆಟ್ಟಿಯವರು ಹೇಳಿಕೆ ನೀಡಿದ್ದರು.[ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಹೊಸ ತಿರುವು]

ಆದ್ದರಿಂದ, ಸಿಐಡಿ ತಂಡ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆದಿದೆ ಮತ್ತು ಹೇಳಿಕೆಯನ್ನು ದಾಖಲು ಮಾಡಿಕೊಂಡಿದೆ. ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾದ ವಿಡಿಯೋ ತುಣುಕುಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.[ಉಡುಪಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಸಿಐಡಿ ತನಿಖೆಗೆ]

ಸೋನಿಯಾ ನಾರಂಗ್ ಭೇಟಿ : ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರು ಭಾಸ್ಕರ್ ಶೆಟ್ಟಿ ಶವವನ್ನು ಸುಟ್ಟು ಹಾಕಿದ ನಂದಳಿಕೆ ಹಾಗೂ ಬೂದಿ ವಿಲೇವಾರಿ ಮಾಡಿದ ಪಳ್ಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

English summary
The Criminal Investigation Department recorded the statement of Bhaskar Shetty's wife Rajeshwari Shetty mother Sumathi Shetty on Monday, August 22, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X