ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ- ಅರ್ಜಿ ಆಹ್ವಾನ

ಉಡುಪಿ, ಅಕ್ಟೋಬರ್ 5: ಪ್ರಧಾನಮಂತ್ರಿಗಳ ಮುದ್ರಾ ಯೋಜನೆ (PMMY) ಹಾಗೂ ಸ್ಟಾಂಡ್ ಅಪ್(SUI) ಯೋಜನೆಗಳಡಿ ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಸಾಲ ಸೌಲಭ್ಯ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಧಾನಮಂತ್ರಿಗಳ ಮುದ್ರಾ ಯೋಜನೆಯನ್ನು ಪ್ರಧಾನಮಂತ್ರಿಗಳು 2015 ರ ಏಪ್ರಿಲ್ 8 ರಂದು ಉದ್ಘಾಟನೆ ಮಾಡಿದ್ದು, ಈ ಯೋಜನೆಯಡಿಯಲ್ಲಿ ಸಣ್ಣ ಕೈಗಾರಿಕಾ ಘಟಕಗಳಿಗೆ ಶಿಶು ಸಾಲ ರೂ.50 ಸಾವಿರ ದ ವರೆಗೆ, ಕಿಶೋರ್ ಸಾಲ ರೂ.50 ಸಾವಿರದಿಂದ ರೂ.5 ಲಕ್ಷ ದವರೆಗೆ ಹಾಗೂ ತರುಣ್ ಸಾಲ ರೂ.5 ಲಕ್ಷ ದಿಂದ ರೂ.10 ಲಕ್ಷ ದ ವರೆಗಿನ ಸೌಲಭ್ಯ ಒದಗಿಸಿದೆ.[ಮೋದಿ ಕನಸಿನ ಸ್ಟ್ಯಾಂಡಪ್ ಇಂಡಿಯಾ ಯೋಜನೆ]

Applications invited for PMMY MUDRA Scheme and SUI Udupi district

ಸ್ಟಾಂಡ್ ಅಪ್ ಯೋಜನೆಯನ್ನು ಪ್ರಧಾನಮಂತ್ರಿಗಳು 2016 ರ ಏಪ್ರಿಲ್ 5 ರಂದು ಉದ್ಘಾಟನೆ ಮಾಡಿದ್ದು, ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರು ಮಾತ್ರ ಗ್ರೀನ್ ಪೀಲ್ಡ್ ಎಂಟರ್ಪ್ರೈಸರ್ ಸ್ಥಾಪನೆಗೆ ಸಾಲ ಸೌಲಭ್ಯಗಳನ್ನು ಪಡೆಯಲ ಅರ್ಹ ಇರುತ್ತಾರೆ. ಸಾಲದ ಮೊತ್ತವು ರೂ.10 ಲಕ್ಷ ಗಳಿಂದ ರೂ.1 ಕೋಟಿಯ ವರೆಗೆ ನಿಗದಿಪಡಿಸಲಾಗಿದೆ.[ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]

ಹೆಚ್ಚಿನ ಮಾಹಿತಿಗಾಗಿ
ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ,
ಪ್ಲ್ಯಾಟ್ ನಂ.36-ಸಿ,
ಶಿವಳ್ಳಿ ಕೈಗಾರಿಕಾ ಪ್ರದೇಶ
ಮಣಿಪಾಲ
ದೂರವಾಣಿ ಸಂಖ್ಯೆ 0820-2575650 ನ್ನು ಸಂಪರ್ಕಿಸಬಹುದು.
(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+