Get Updates
Get notified of breaking news, exclusive insights, and must-see stories!

ವಕೀಲನಿಂದಲೇ ಯುವತಿಗೆ ಮೋಸ: ನ್ಯಾಯಕ್ಕಾಗಿ ಯುವತಿಯ ಮೊರೆ

ಉಡುಪಿ, ಡಿಸೆಂಬರ್ 21: ವಕೀಲಿಕೆ ಮಾಡಿ ಜನರಿಗೆ ನ್ಯಾಯ ಕೊಡಿಸಬೇಕಾದ ಅಡ್ವೊಕೇಟ್ ಒಬ್ಬ ಯುವತಿಯನ್ನು ಪ್ರೀತಿಯ ಬಲೆಗೆ ಹಾಕಿ, ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟಿದ್ದಾನೆ. ಉಡುಪಿ ಜಿಲ್ಲೆಯ ಕಾವಾಡಿಯ ಸುಕುಮಾರ್ ಶೆಟ್ಟಿ ಎಂಬುವವನೇ ಯುವತಿಗೆ ಮೋಸ ಮಾಡಿರುವ ವಕೀಲ.

ಯುವತಿಯೋರ್ವಳನ್ನು ಐದು ವರ್ಷ ಪ್ರೀತಿಸುವ ನಾಟಕವಾಡಿ, ಆಕೆಯನ್ನು ಬಲಾತ್ಕಾರ ಮಾಡಿ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಯುವತಿಯ ಸಂಬಂಧಿ ಆರೋಪಿಸಿದ್ದಾರೆ. ಮಾತ್ರವಲ್ಲ ಈ ಸಂಬಂಧ ಉಡುಪಿಯ ಮಹಿಳಾ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಸೋಮವಾರ ಯುವತಿಯ ಭಾವ ಉಮೇಶ್ ಎಂಬುವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2015 ರಿಂದ ಕಾವಾಡಿಯ ಸುಕುಮಾರ್ ಶೆಟ್ಟಿ ಎಂಬಾತ ನನ್ನ ನಾದಿನಿಯನ್ನು ಪ್ರೀತಿಸುತ್ತಿದ್ದ, ವೃತ್ತಿಯಲ್ಲಿ ಆತ ವಕೀಲ.ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಐದು ವರ್ಷ ಕಾಲ ಆಕೆಯನ್ನು ಬಲತ್ಕಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾನೆ.

Udupi: A Young Woman Cheated From Lawyer: Young Woman Urges For Justice

ಪ್ರೀತಿಸುವ ವಿಷಯ ಎರಡೂ ಮನೆಯವರಿಗೆ ತಿಳಿದಿತ್ತು. ಆದರೆ ಈ ವರ್ಷ ಫೆಬ್ರವರಿ ನಂತರ ಆತ ಮದುವೆಯಾಗಲು ನಿರಾಕರಿಸಿದ್ದಲ್ಲದೆ, ಯುವತಿಯ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಪ್ರೀತಿಸುವಾಗ ಇಲ್ಲದ ಜಾತಿ ನೆಪ ಹೇಳಿ ಈಗ ತಲೆಮರೆಸಿಕೊಂಡಿದ್ದಾನೆ. ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವೂ ಆಗಿಲ್ಲ ಎಂದು ಹೇಳಿದರು.

Udupi: A Young Woman Cheated From Lawyer: Young Woman Urges For Justice

ರಾಜಕೀಯವಾಗಿ, ಆರ್ಥಿಕವಾಗಿ ಪ್ರಭಾವಿಯಾಗಿರುವ ಸುಕುಮಾರ್ ಶೆಟ್ಟಿ ಪ್ರಭಾವ ಬಳಸಿ ತನಿಖೆಯಾಗದಂತೆ ನೋಡಿಕೊಳ್ಳುತ್ತಿದ್ದಾನೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಮನವಿ ನೀಡಿದ್ದೇವೆ. ಆತ ಇನ್ನು ನಮ್ಮ ಹುಡುಗಿಯನ್ನು ಮದುವೆಯಾಗುವುದು ಬೇಡ. ಅವನಿಗೆ ಹಲವರ ಜೊತೆ ಅಫೇರ್ ಗಳಿವೆ. ಆತನಿಕೆ ಸೂಕ್ತ ಶಿಕ್ಷ ಆಗಬೇಕು ಎಂದು ಆಗ್ರಹಿಸಿದ್ದಾರೆ.

Recommended Video

      ಜಗತ್ತಿಗೆ ಕಾದಿದ್ಯ ಆಪತ್ತು !! | Kodugalu Madappa Temple | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+