ಉಡುಪಿ: ಕೊರೊನಾ ವೈರಸ್ ನಿಂದ 9 ಜನ ಪೊಲೀಸರು ಗುಣಮುಖ
ಉಡುಪಿ, ಜೂನ್ 4: ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ ಒಂದು ಶುಭ ಸುದ್ದಿ ಬಂದಿದ್ದು, ಅದು ಪೊಲೀಸರಿಗೆ ಸಂಬಂಧಿಸಿದ್ದಾಗಿದೆ.
Recommended Video
ಉಡುಪಿ ಜಿಲ್ಲೆಯ 9 ಜನ ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ತಗುಲಿ ಸಾಕಷ್ಟು ಆತಂಕಕ್ಕೆ ಕಾರಣ ಆಗಿತ್ತು. ಈಗ ಎಲ್ಲಾ 9 ಜನ ಪೊಲೀಸರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿದ್ದಾರೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ಹಂಚಿಕೊಂಡಿದ್ದಾರೆ.
ಪೊಲೀಸರು, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳೆಲ್ಲಾ ಕೊರೊನಾ ವಾರಿಯರ್ಸ್ ಗಳು. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಪೊಲೀಸರನ್ನು ಯಾರೂ ಸಂಶಯದಿಂದ ನೋಡಬಾರದು. ಹಾಗೆಯೇ ಕೊರೊನಾ ವೈರಸ್ ಪೀಡಿತ ಜನರನ್ನು ಯಾರೂ ಅಸ್ಪೃಶ್ಯರಂತೆ ನೋಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೊಲೀಸರು ವೈರಸ್ ವಿರುದ್ಧ ಯೋಧರಂತೆ ಹೋರಾಡುತ್ತಿದ್ದಾರೆ. ಪೊಲೀಸರ ಮೇಲೆ ಸಾರ್ವಜನಿಕರಿಗೆ ಹೆಚ್ಚು ಗೌರವ ಬರಬೇಕು. ಎಲ್ಲರೂ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ಯಾರೂ ಕೂಡ ಆತಂಕ ಪಡಬೇಕಿಲ್ಲ ಎಂದು ಉಡುಪಿ ಡಿಸಿ ಜಗದೀಶ್ ಅವರು ಹೇಳಿದ್ದಾರೆ.












Click it and Unblock the Notifications