ಕ್ಯೂನಲ್ಲಿ ನಿಂತು ಪ್ರಾಣ ತೆತ್ತ ಕಾರ್ಕಳದ ವೃದ್ಧ

Posted By:
Subscribe to Oneindia Kannada

ಉಡುಪಿ, ನವೆಂಬರ್, 12: ಉಡುಪಿ ಜಿಲ್ಲೆಯ ಕಾರ್ಕಳದ ವೃದ್ಧನೊಬ್ಬ ಕ್ಯೂನಲ್ಲಿ ನಿಂತು ಹಣ ಪಡೆಯಲು ಪರಿತಪಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಆತನ ಹೆಸರು ಅಜೇಕಾರು ಗೋಪಾಲ ಶೆಟ್ಟಿ(93) ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕು ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಅಜೆಕಾರು ಕಾರ್ಪೋರೇಶನ್ ಬ್ಯಾಂಕಿನಲ್ಲಿ ಹಣವನ್ನು ಬದಲಿಸಲು ಸರದಿ ಸಾಲಿನಲ್ಲಿ ನಿಂತಿದ್ದರು. ಮೊದಲೇ ವಯಸ್ಸಾಗಿದ್ದ ಅವರು ಹಣವನ್ನು ಬದಲಾಯಿಸಲು ನಿಂತಿದ್ದರಿಂದ ಸುಸ್ತಾಗಿತ್ತೋ ಏನೋ, ಸರದಿಸಾಲಿನಲ್ಲಿಯೇ ಕುಸಿದು ಬಿದ್ದಿದ್ದಾರೆ. ಸರದಿ ಸಾಲಿನಲ್ಲಿದ್ದ ಜನರು ಅವರನ್ನು ಸಂತೈಸಿದ್ದಾರೆ. ಈ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

old man

ಅವರು ಹಣ ಬದಲಾವಣೆ ಮಾಡಿಸಲು ತಮ್ಮ ಹಳ್ಳಿಯಿಂದ ನಾಲ್ಕು ಸಾವಿರ ರು ಹಣವನ್ನು ತಂದಿದ್ದರು ಈ ವೇಳೆ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.[ಕೊಲ್ಲುತ್ತೇನೆಂದು ಬೆದರಿಸಿದರೂ 2 ಸಾವಿರಕ್ಕಿಂತ ಹೆಚ್ಚು ಹಣವಿಲ್ಲ]

ಇನ್ನು ಇವರು ಗೋಪಾಲ ಶೆಟ್ಟಿಯವರು ಕಾರ್ಕಳ ಕುಕ್ಕುಂದೂರು ಗಣಿತ್ ನಗರದಲ್ಲಿ ನಡೆಯುತ್ತಿರುವ ಜ್ಞಾನ ಸುಧಾ ಕಾಲೇಜಿನ ಆಡಳಿತ ಮುಖ್ಯಸ್ಥ ಡಾ. ಅಜೆಕಾರು ಸುಧಾಕರ ಶೆಟ್ಟಿಯವರ ತಂದೆಯಾಗಿದ್ದಾರೆ.

ಹಳ್ಳಿಯಿಂದ ಹೋಬಳಿ ತಾಲ್ಲೂಕಿನ ಬ್ಯಾಂಕುಗಳಿಗೆ ಬರುವ ರೈತರು, ಸಾರ್ವಜನಿಕರು ನಗದು ಬದಲಾಯಿಸಿಕೊಂಡು ಸಂಜೆ ವೇಳೆ ಹಣ್ಣು ತರಕಾರಿಯನ್ನು ಕೊಂಡು ಹೋಗಬೇಕೆಂದು ಕೊಳ್ಳುತ್ತಾರೆ. ಆದರೆ ಸರದಿಯಲ್ಲಿಯೇ ಕಾಯುವ ಪರಿಸ್ಥಿತಿಯಲ್ಲಿ ಇಲ್ಲಿರುವುದಕ್ಕಿಂತ ಮೆನೆ ಹತ್ತಿರವೇ ಇದ್ದರೆ ಒಳಿತು ಎಂದು ಕೊಂಡು ಸುಮ್ಮನಾಗುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Currency ban effect: 93-year-old man standing in queue to exchange old notes dies. his name is Gopal reddy from karkala in Udupi district
Please Wait while comments are loading...