ಉಡುಪಿ ಧರ್ಮ ಸಂಸತ್‌ನಲ್ಲಿ ಕೈಗೊಂಡ 5 ನಿರ್ಣಯಗಳು

Posted By: Gururaj
Subscribe to Oneindia Kannada

ಉಡುಪಿ, ನವೆಂಬರ್ 27 : ಮೂರು ದಿನಗಳ ಕಾಲ ಉಡುಪಿಯಲ್ಲಿ ನಡೆದ 'ಧರ್ಮ ಸಂಸತ್ 2017'ಕ್ಕೆ ಭಾನುವಾರ ತೆರೆ ಬಿದ್ದಿದೆ. ವಿರಾಟ್ ಹಿಂದೂ ಸಮಾಜೋತ್ಸವದ ಮೂಲಕ ಕೃಷ್ಣನಗರಿಯಲ್ಲಿ ಸಮಾರೋಪ ಸಮಾರಂಭ ನಡೆಲಾಯಿತು.

In Pics:ಉಡುಪಿಯಲ್ಲಿ ಜರುಗುತ್ತಿರುವ ಧರ್ಮ ಸಂಸದ್ ಸಮ್ಮೇಳನದ ಚಿತ್ರಸಂಪುಟ

ರಾಮ ಮಂದಿರ, ಪದ್ಮಾವತಿ ಚಲನಚಿತ್ರ, ಹಿಂದೂ, ಲವ್ ಜಿಹಾದ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮೂರು ದಿನಗಳ ಧರ್ಮ ಸಂಸತ್‌ನಲ್ಲಿ ಚರ್ಚೆ ನಡೆಯಿತು. 5 ಪ್ರಮುಖ ನಿರ್ಣಯಗಳನ್ನು 'ಧರ್ಮ ಸಂಸತ್' ಕೈಗೊಂಡಿತು.

2 ಲಕ್ಷ ಕ್ಕೂ ಅಧಿಕ ಜನ ಭಾಗವಹಿಸಿದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ವಿಎಚ್‌ಪಿ ನಾಯಕರ ಉಪಸ್ಥಿತಿಯಲ್ಲಿ, ಹಲವಾರು ಸ್ವಾಮೀಜಿಗಳ ಸಮ್ಮಿಖದಲ್ಲಿ ಐದು ನಿರ್ಣಯಗಳನ್ನು ಮಂಡನೆ ಮಾಡಲಾಯಿತು.

'ಸಿದ್ದರಾಮಯ್ಯ ಹೇಗೆ ಬಸವಣ್ಣ ಭಕ್ತರಾಗುತ್ತಾರೆ?'

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪರ್ಯಾಯ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು, 'ಸಿದ್ದರಾಮಯ್ಯ ಬಸವಣ್ಣನ ಭಕ್ತ ಎಂದು ಹೇಳುತ್ತಿದ್ದಾರೆ. ಆದರೆ, ಬಸವಣ್ಣ ಗೋಹತ್ಯೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಹಾಗಾದ್ರೆ ಸಿದ್ದರಾಮಯ್ಯ ಹೇಗೆ ಅವರ ಭಕ್ತರಾಗುತ್ತಾರೆ?' ಎಂದು ಪ್ರಶ್ನಿಸಿದರು. ಸಮ್ಮೇಳನದ ನಿರ್ಣಯಗಳು ಇಲ್ಲಿವೆ...

ರಾಮ ಮಂದಿರ ನಿರ್ಮಾಣ

ರಾಮ ಮಂದಿರ ನಿರ್ಮಾಣ

ಉಡುಪಿಯ ಧರ್ಮ ಸಂಸತ್‌ನಲ್ಲಿ - ಒಂದು ವರ್ಷದೊಳಗೆ ರಾಮಮಂದಿರ ನಿರ್ಮಾಣ

ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು.

ನಿರ್ಣಯ - 2

ನಿರ್ಣಯ - 2

ಗೋ ಮಾಂಸ ರಫ್ತು ನಿಷೇಧ, ಗ್ರೀನ್ ಟ್ರಿಬ್ಯುನಲ್ ಆದೇಶದಂತೆ ಕಸಾಯಿ ಖಾನೆಗಳನ್ನು ಮುಚ್ಚುವುದು

ಕೈಗೊಂಡ 3ನೇ ನಿರ್ಣಯ

ಕೈಗೊಂಡ 3ನೇ ನಿರ್ಣಯ

ಉಡುಪಿಯಲ್ಲಿ ಮೂರು ದಿನಗಳ ಕಾಲ ನಡೆದ ಧರ್ಮ ಸಂಸತ್‌ನಲ್ಲಿ 'ಅಸ್ಪೃಶ್ಯತೆ ನಿವಾರಣೆ' ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಧರ್ಮ ಸಂಸತ್ ನಿರ್ಣಯ - 4

ಧರ್ಮ ಸಂಸತ್ ನಿರ್ಣಯ - 4

ಅಲ್ಪ ಸಂಖ್ಯಾತ ಮತ್ತು ಬಹು ಸಂಖ್ಯಾತರಿಗೆ ಸಮಾನ ಮೀಸಲಾತಿ ಸಿಗಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಧರ್ಮ ಸಂಸತ್ ನಿರ್ಣಯ – 5

ಧರ್ಮ ಸಂಸತ್ ನಿರ್ಣಯ – 5

ಘರ್ ಪಾಪಸಿ, ಮತಾಂತರಕ್ಕೆ ತಡೆ, ಹಿಂದೂ ಜನಸಂಖ್ಯೆ ಹೆಚ್ಚಳಕ್ಕೆ ಆದ್ಯೆತೆ ವಿಚಾರಗಳ ಕುರಿತು ನಿರ್ಣಯಗಳನ್ನು ಮಂಡಿಸಿ, ಅಂಗೀಕರಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three days Dharma Sansad 2017 concluded at Udupi on Sunday, November 26. 5 major resolution passed in Dharma Sansad organised by Vishwa Hindu Parishad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ