ಉಡುಪಿಯಲ್ಲಿ ಒಂದೇ ದಿನ 45 ಕೊರೊನಾ ವೈರಸ್ ಸೋಂಕು ಪತ್ತೆ
ಉಡುಪಿ, ಜುಲೈ 5: ಉಡುಪಿ ಜಿಲ್ಲೆಯಲ್ಲಿ ಭಾನುವಾರ ಕೊರೊನಾ ವೈರಸ್ ಮತ್ತೆ ಸ್ಪೋಟಗೊಂಡಿದ್ದು, 45 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಗೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1322 ಕ್ಕೆ ಏರಿಕೆ ಆಗಿದೆ.
ಉಡುಪಿಯ 22, ಕುಂದಾಪುರದ 17, ಕಾರ್ಕಳದ 6 ಜನರಲ್ಲಿ ಸೋಂಕು ಕಂಡುಬಂದಿದೆ. ಮಹಾರಾಷ್ಟ್ರ 20, ಚಿತ್ರದುರ್ಗ 1 ಮತ್ತು ಬೆಂಗಳೂರಿನಿಂದ ಬಂದ ಇಬ್ಬರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ.
ಪ್ರಾಥಮಿಕ ಸಂಪರ್ಕದಿಂದ 19 ಜನರಿಗೆ ಕೊರೊನಾ ಕಂಡುಬಂದಿದ್ದು, Random ಪರೀಕ್ಷೆಯಿಂದ ಇಬ್ಬರಿಗೆ ಕೊರೊನಾ ವೈರಸ್ ಇರುವುದು ದೃಢವಾಗಿದೆ ಎಂದು ಡಿಎಚ್ಒ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರಲ್ಲಿ 9 ಕೊರೊನಾ ವೈರಸ್ ಪಾಸಿಟಿವ್ ಪತ್ತೆ:
ಚಿಕ್ಕಮಗಳೂರು ಜಿಲ್ಲೆಯಲ್ಲಿ 9 ಜನರಿಗೆ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿದ್ದು, ತಾಲೂಕಿನ ರಾಮದೇವರಹಳ್ಳಿ 4, ಕೆ.ಆರ್ ಪೇಟೆ 1, ಚಿಕ್ಕಮಗಳೂರು ನಗರದಲ್ಲೇ 4 ಪ್ರಕರಣ ಪತ್ತೆಯಾಗಿವೆ.
ರಾಮದೇವರಹಳ್ಳಿಯ ಪೊಲೀಸ್ ಕಾನ್ಸ್ ಟೆಬಲ್ ಕುಟುಂಬದ ನಾಲ್ವರಿಗೂ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. ಶನಿವಾರ ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಇಂದು ಬಂದ ಪ್ರಕರಣದಲ್ಲಿ ನಾಲ್ಕು ಐಎಲ್ಐ ಕೇಸ್ ಸೇರಿವೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 92 ಕ್ಕೆ ಏರಿಕೆಯಾಗಿದೆ.












Click it and Unblock the Notifications