ದನದ ಕೊಟ್ಟಿಗೆಯಲ್ಲಿ 31 ಮೊಟ್ಟೆಗಳೊಂದಿಗೆ ಜೋಡಿ ಹೆಬ್ಬಾವು
ಉಡುಪಿ, ಮೇ 11: ದನದ ಕೊಟ್ಟಿಗೆಯೊಂದರಲ್ಲಿ ಜೋಡಿ ಹೆಬ್ಬಾವು ಮತ್ತು 31 ಮೊಟ್ಟೆಗಳು ಸಿಕ್ಕಿದ್ದು, ಸ್ಥಳೀಯರು ಅವುಗಳನ್ನು ನೋಡಿ ಬೆರಗಾಗಿದ್ದಾರೆ.
ಉಡುಪಿಯ ಕಟಪಾಡಿಯ ರಾಮಚಂದ್ರ ಪೈ ಎಂಬುವರ ಹಳೆಯ ಹಟ್ಟಿ ಕೊಟ್ಟಿಗೆಯಲ್ಲಿ ಒಂದು ಹೆಬ್ಬಾವು 16 ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಇದನ್ನು ಗಮನಿಸಿದ ಮನೆಯ ಮಾಲೀಕ ರಾಮಚಂದ್ರ ಪೈ, ಉರಗ ತಜ್ಞ ಮನು ಪೈ ಅವರಿಗೆ ವಿಷಯ ತಿಳಿಸಿದ್ದಾರೆ.

ಮನು ಪೈ ಸ್ಥಳಕ್ಕಾಗಮಿಸಿದಾಗ ಅಲ್ಲಿ ಇನ್ನೊಂದು ಅಚ್ಚರಿ ಕಾದಿತ್ತು. ಇನ್ನೊಂದು ಬದಿಯಲ್ಲಿ ಇನ್ನೊಂದು ಹೆಬ್ಬಾವು 15 ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು! ತಕ್ಷಣ ಮನೆಯ ಮಾಲೀಕರು ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಮನು ಪೈಯವರು ಎರಡು ಹೆಬ್ಬಾವು ಮತ್ತು ಮೊಟ್ಟೆಗಳನ್ನು ಸುರಕ್ಷಿತವಾಗಿ ತೆಗೆದು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು ಮೊಟ್ಟೆ ಮತ್ತು ಹೆಬ್ಬಾವುಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.












Click it and Unblock the Notifications