Tumkur: ಸೆಲ್ಫಿಗಾಗಿ ಯವತಿ ಸಾಹಸ, ರಕ್ಷಣೆಗೆ 12 ಗಂಟೆ ರೋಚಕ ಕಾರ್ಯಾಚರಣೆ
ತುಮಕೂರು, ಅಕ್ಟೋಬರ್ 28: ಕಲ್ಪತರು ನಾಡು ತುಮಕೂರಿನ ಕೆರೆ-ಕಟ್ಟೆಗಳು ಭಾರೀ ಮಳೆಯಿಂದಾಗಿ ಕೋಡಿ ಹರಿಯುತ್ತಿವೆ. ಕೆರೆಗಳು ಉಕ್ಕಿ ಹರಿಯುತ್ತಿರುವುದು, ಈ ಭಾಗದ ರೈತರ ಮೊಗದಲ್ಲಿ ಹರ್ಷ ತಂದಿವೆ. ಮಳೆ, ಹಿರಯುವ ನೀರಿನ ಜೊತೆಗೆ ಹಸಿರು ವಾತಾವರಣ ಕಣ್ತುಂಬಿಕೊಳ್ಳಲು ಜನ ಕೆರೆಯತ್ತ ಧಾವಿಸುತ್ತಿದ್ದಾರೆ. ಅಲ್ಲಲ್ಲಿ ಕೆರೆಗಳ ದಂಡೆಯಲ್ಲಿ ಜನರ ಗುಂಪು ಕಂಡು ಬರುತ್ತಿದೆ. ಹೀಗೆ ಪ್ರಕೃತಿ ಸೊಬಗು ನೋಡಲು ಬಂದ ಯುವತಿ ಪೇಚಿಗೆ ಸಿಲುಕಿದೆ ಘಟನೆಯೊಂದು ವರದಿ ಆಗಿದೆ.
ಹೌದು, ಜಲಪಾತಗಳು, ನೀರಿನ ತೊರೆ, ಕೆರೆ ಸುತ್ತಮುತ್ತ ಹಸಿರು ಕಾಣುತ್ತಿದ್ದಂತೆ ಪ್ರಕೃತಿ ಅಂದ ನೋಡಬಯಸುವವರು ಹೆಚ್ಚು. ಜನರು ಮೊಬೈಲ್ ತೆಗೆದು ಫೋಟೋ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯ. ಮೊಬೈಲ್ ಫೋಟೋ ಹುಚ್ಚಿನಿಂದ ಏನೆಲ್ಲ ಅವಘಡ ಸಂಭವಿಸುತ್ತಲೇ ಎಂದು ನಾವು ನೋಡುತ್ತಲೇ ಇರುತ್ತೇವೆ. ಇಂತಹದ್ದೆ ಒಂದು ಘಟನೆ ತುಮಕೂರಿನ ಕೆರೆ ಬಳಿ ನಡೆದಿದ್ದು, ಇಲ್ಲಿ ಯುವತಿ ಸೆಲ್ಫಿ ತೆಗೆಯುವಾಗ ಜಾರಿ ಕಲ್ಲಿನ ಪೊಟರೆಯೊಳಗೆ ಕಾಲು ಜಾರಿ ಬಿದ್ದಿದ್ದಾರೆ.

ತುಮಕೂರಿನ ಕೆರೆಯೊಂದು ಕೋಡಿ ಹರಿಯುತ್ತಿದೆ ಎಂದು ಈ ಯುವತಿ ನೋಡಲು ತೆರಳಿದ್ದಾರೆ. ಆದರೆ ಕಲ್ಲುಪೊಟರೆ ಪಕ್ಕ ನೀರು ಹರಿದು ಹೋಗುವ ಜಾಗದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ದಿಢೀರನೆ ಪೋಟರೆಯೊಳಕ್ಕೆ ಜಾರಿದ ಯುವತಿ
ನೋಡ ನೋಡುತ್ತಿದ್ದಂತೆ ಕಾಲು ಜಾರಿ ಕಲ್ಲಿನ ಪೊಟರೆಯೊಳಕ್ಕೆ ಬಿದ್ದಿದ್ದಾರೆ. ಅಕ್ಕಪಕ್ಕದವರು, ಸ್ನೇಹಿತರು ಪ್ರಯತ್ನಿಸಿದರೂ ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಆಗಮಿಸಿ ತ್ವರಿತ ಕಾರ್ಯಾಚರಣೆ ನಡೆಸಿದ್ದಾರೆ.
ಈ ಯುವತಿ ಹೆಸರು ಹಂಸ (19) ಎಂದು ತಿಳಿದು ಬಂದಿದೆ. ಈ ಯುವತಿ ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿ ಸತತ 12 ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಜನರನ್ನು ನಿಭಾಯಿಸುತ್ತಿದ್ದರು.
ಭಾನುವಾರ ಸಂಜೆ 5.30ಕ್ಕೆ ಕೆರೆ ಬಳಿ ಹಂಸ ಮತ್ತು ಸ್ನೇಹಿತರು ರೀಲ್ಸ್ ಮಾಡುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೊಣಕಾಲುದ್ದದ ನೀರಿನಲ್ಲಿ ಸೆಳವು ಜಾಸ್ತಿ ಇದ್ದ ಕಾರಣ ಜಾರಿ ಹೋಗಿ ಕಲ್ಲು ಪೊಟರೆಯಲ್ಲಿ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾಗಿದೆ.
12 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ
ಅದೃಷ್ಟವೇನೋ ಎಂಬಂತೆ ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿಯನ್ನು ರಕ್ಷಣೆ ಮಾಡಿಸಲಾಗಿದೆ. ಅಧಿಕಾರಿಗಳು ಸಿಬ್ಬಂದಿ ಹಗ್ಗ ಬಿಟ್ಟು ಯುವತಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಲು ಪೊಟರೆಯಿಂದ ಯುವತಿಯನ್ನು ಹೊರಕ್ಕೆ ತರುತ್ತಿದ್ದಂತೆ ಹೊರಗಿನಿಂದ ಹರ್ಷೋದ್ಘಾರ ಕೇಳಿ ಬಂದಿದೆ.
ಕೆರೆ ಹಾಗೂ ಕಲ್ಲು ಪೊಟರೆ ಅಕ್ಕಪಕ್ಕ ನಿಂತಿದ್ದವರೆಲ್ಲರು ರಕ್ಷಣಾ ಕಾರ್ಯಾಚರಣೆ ವಿಡಿಯೋ ಮಾಡಿದ್ದಾರೆ. ಪೋಟೋ ಕ್ಲಿಕ್ಕಿಸಿದ್ದಾರೆ. ರಕ್ಷಣಾ ಸಿಬ್ಬಂದಿಗೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರವಾಸೋದ್ಯಮ ಸ್ಥಳಗಳಿಗೆ, ಹೀಗೆ ಕರೆ, ಜಲಪಾತ ಇನ್ನಿತರ ಪ್ರದೇಶಗಳಿಗೆ ಹೋದಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಾಗಿದ್ದರೂ ಕೆಲವೊಮ್ಮೆ ಯಡವಟ್ಟುಗಳಾಗಿ ಜೀವ ಹಾನಿ, ದೈಹಿನ ಊನ ಸಂಭವಿಸಿಬಿಡುತ್ತವೆ.
ಈ ಯುವತಿ ಹಂಸಳ ಅದೃಷ್ಟ ಚನ್ನಾಗಿದೆ. ಹೀಗಾಗಿಯೇ ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಆ ಕಲ್ಲು ಪೊಟರೆ ಹೆಚ್ಚಳ ಆಳವಾಗಿದ್ದರೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಸದ್ಯ ಬಡಜೀವ ಬದುಕಿತು ಎಂದು ಸ್ಥಳೀಯ ಮಾತನಾಡಿಕೊಂಡಿದ್ದಾರೆ.












Click it and Unblock the Notifications