ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾವು ಬರಗೂರು ರಾಮಚಂದ್ರಪ್ಪ ಅವರಿಗಿಂತ ಕಡಿಮೆ ತಪ್ಪು ಮಾಡಿದ್ದೇವೆ: ಬಿ.ಸಿ. ನಾಗೇಶ್ ಸಮರ್ಥನೆ

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜೂ. 26: ಬರಗೂರು ರಾಮಚಂದ್ರಪ್ಪ 167 ಪೇಜ್‌ಗಳಲ್ಲಿ 150 ತಪ್ಪುಗಳನ್ನು ಮಾಡಿದ್ದರು. ನಮ್ಮ ಕಾಲದಲ್ಲಿ ಕೇವಲ 17 ತಪ್ಪುಗಳಾಗಿವೆ. ಅದನ್ನು ಸರಿ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಇಪಿ ಪ್ರಕಾರ ಶಿಕ್ಷಣ ಇಲಾಖೆ ಹೆಸರನ್ನು ಬದಲಾಯಿಸಲಾಗಿದೆ. ಆಡಳಿತಾತ್ಮಕ ಬದಲಾವಣೆ ಬಗ್ಗೆ ಮುಂದೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ: ತುಂಬಾ ಸಂತೋಷ ಎಂದ ಗುಬ್ಬಿ ಶ್ರೀನಿವಾಸ್ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ: ತುಂಬಾ ಸಂತೋಷ ಎಂದ ಗುಬ್ಬಿ ಶ್ರೀನಿವಾಸ್

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಠ್ಯಪುಸ್ತಕ ಹರಿದ ವಿಚಾರಕ್ಕರ ಸಂಬಂಧಿಸಿದಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, "ಸರಸ್ವತಿ ಸ್ವರೂಪದ ಪುಸ್ತಕವನ್ನು ಹರಿದು ಹಾಕುವ ಸಂಸ್ಕೃತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಅಕಸ್ಮಾತ್ ಕಾಲಿಗೆ ತಾಗಿದರೆ ನಾವು ಕಣ್ಣಿಗೆ ಒತ್ತಿಕೊಂಡು ನಮಸ್ಕಾರ ಮಾಡುತ್ತೇವೆ. ಡಿ.ಕೆ.ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ. ಅದಕ್ಕೆ ನಾವೇನು ಮಾಡೋಕ್ಕಾಗಲ್ಲ. ಈಗಾಗಲೇ 75ರಷ್ಟು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿದೆ," ಎಂದು ಹೇಳಿದರು.

ನಾವು ಸತ್ಯವನ್ನು ಅವರ ಮುಂದೆ ಇಟ್ಟಿದ್ದೇವೆ

ನಾವು ಸತ್ಯವನ್ನು ಅವರ ಮುಂದೆ ಇಟ್ಟಿದ್ದೇವೆ

"ಮಾಜಿ ಪ್ರಧಾನಿಗಳು ನಮಗೆಲ್ಲರಿಗೂ ಹಿರಿಯರು. ಅವರು ಪಠ್ಯ ಕ್ರಮದ ಬಗ್ಗೆ ಪತ್ರ ಬರೆದಿದ್ದಾರೆ. ನಾನು ನಾಳೆ ಶಿಕ್ಷಣ ಇಲಾಖೆ ಮುಖ್ಯಸ್ಥರ ಜತೆ ಚರ್ಚಿಸುತ್ತೇನೆ. ದೇವೇಗೌಡರು ಬರೆದಿರುವ ಪತ್ರದ ಸಾರವನ್ನು ಸಂಪೂರ್ಣವಾಗಿ ಅವಲೋಕಿಸುತ್ತೇವೆ ಎಂದಿದ್ದಾರೆ. ದೇವೇಗೌಡರು ಏನೆಲ್ಲ ಸಲಹೆ ಕೊಟ್ಟಿದ್ದಾರೋ ಅವುಗಳನ್ನು ಗಂಭೀರವಾಗಿ ಪರಿಗಣಿಸ್ತೇವೆ. ಏನೆಲ್ಲ ಬದಲಾವಣೆ ಮಾಡಲು ಸಾಧ್ಯವೋ ಅದರ ಸಂಬಂಧ ತೀರ್ಮಾನಗಳನ್ನು ಮಾಡುತ್ತೇವೆ. ಅವರಿಗೆ ಉತ್ತರವನ್ನು ಗೌರವಪೂರ್ವಕವಾಗಿ ಬರೆಯುತ್ತೇನೆ," ಎಂದು ತಿಳಿಸಿದ್ದಾರೆ.

ದೇವೇಗೌಡರು ಪಠ್ಯಪುಸ್ತಕ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದ ವಿಚಾರವಾಗಿ ಮಾತನಾಡಿ, "ಅವರ ಮನೆಗೆ ಹೋಗಿ ಎಲ್ಲಾ ತಿಳಿಸಿ ಬಂದಿದ್ದೇನೆ. ಅವರಿಗೆ ಸತ್ಯದ ಮನವರಿಕೆ ಆಗಿದೆ ಎಂದು ನನಗೆ ವಿಶ್ವಾಸವಿದೆ. ದೇವೇಗೌಡರಿಗೆ ಕುವೆಂಪು ಅವರ ಬಗ್ಗೆ ಏನೇನೊ ಹೇಳಿ ಬಿಟ್ಟಿದ್ದರು. ನಾವು ಸತ್ಯವನ್ನು ಅವರ ಮುಂದೆ ಇಟ್ಟಿದ್ದೇವೆ. 2017ರಲ್ಲಿಯೇ ಈ ಎಲ್ಲ ಸಮಸ್ಯೆಗಳು ಪಠ್ಯ ಪುಸ್ತಕದಲ್ಲಿತ್ತು, ಆಗಿನ ಕಾಂಗ್ರೆಸ್ ಸರ್ಕಾರ ಈ ವಿಚಾರದ ಬಗ್ಗೆ ಅವರು ಕ್ರಮ‌ ಕೈಗೊಳ್ಳಬೇಕಿತ್ತು, ಅದರೆ ಅವರು ಕ್ರಮ ಕೈಗೊಳ್ಳಲಿಲ್ಲ, ಈ ನಡವಳಿಕೆ ಅವರ ಬೇಜವಬ್ದಾರಿಯನ್ನು ತೋರುತ್ತದೆ," ಎಂದರು.

ತುಮಕೂರು-ಅರಸೀಕರೆ ಮಾರ್ಗ ವಿದ್ಯುತ್ ಚಾಲಿತ ರೈಲು ಸೇವೆಗೆ ಹಸಿರು ನಿಶಾನೆತುಮಕೂರು-ಅರಸೀಕರೆ ಮಾರ್ಗ ವಿದ್ಯುತ್ ಚಾಲಿತ ರೈಲು ಸೇವೆಗೆ ಹಸಿರು ನಿಶಾನೆ

ಡಿಕೆ ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ

ಡಿಕೆ ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ

ಡಿಕೆ ಶಿವಕುಮಾರ್ ಪಠ್ಯಪುಸ್ತಕ ಹರಿದ ಪ್ರಕರಣ ಕುರಿತು ಮಾತನಾಡಿದ ಅವರು, ಸರಸ್ವತಿಯನ್ನು ಹರಿದು ಹಾಕುವ ಸಂಸ್ಕೃತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಈ ದೇಶದಲ್ಲಿ ಇರಲಿಲ್ಲ. ಸರಸ್ವತಿ ಅಕಸ್ಮಾತ್ ಕಾಲಿಗೆ ತಾಗಿದ್ರೆ ನಾವು ಕಣ್ಣಿಗೆ ಒತ್ತಿಕೊಂಡು ನಮಸ್ಕಾರ ಮಾಡುತ್ತೇವೆ. ಡಿಕೆ ಶಿವಕುಮಾರ್ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ. ಅದಕ್ಕೆ ನಾವೇನು ಮಾಡೋಕ್ಕಾಗಲ್ಲ. ಈಗಾಗಲೇ ಶೇ.75 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿದೆ ಎಂದರು.

ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲಾಗಿದ್ದು 2017ರಲ್ಲಿ. ಆಗ ಸಿದ್ದರಾಮಯ್ಯ ಸಿಎಂ ಇದ್ದರು. ಡಿ.ಕೆ.ಶಿವಕುಮಾರ್ ಸಚಿವರಾಗಿದ್ದರು. ಕುವೆಂಪು ಅವರಿಗೆ ಅವಮಾನ ಆಗಿದ್ರೆ. ಅವತ್ತೆ ಕ್ರಮ ಕೈಗೊಳ್ಳಬೇಕಿತ್ತು. ಪ್ರಕರಣದ ಕುರಿತಂತೆ ಸರ್ಕಾರ ಬಿ ರೀಪೋರ್ಟ್ ಹಾಕಿತ್ತು. ಈ ಎಲ್ಲಾ ವಿಚಾರವನ್ನು ದೇವೇಗೌಡರಿಗೆ ತಿಳಿಸಿ ಬಂದಿದ್ದೇನೆ.

“ದೇವೇಗೌಡರ ಸಲಹೆಯನ್ನು ಪರಿಗಣಿಸುತ್ತೇವೆ: ಸಿಎಂ ಬೊಮ್ಮಾಯಿ

“ದೇವೇಗೌಡರ ಸಲಹೆಯನ್ನು ಪರಿಗಣಿಸುತ್ತೇವೆ: ಸಿಎಂ ಬೊಮ್ಮಾಯಿ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪತ್ರ ಬರೆದು, ಸರ್ಕಾರಕ್ಕೆ ಸಲಹೆ ನೀಡಿದ್ದರು. ಅಂಬೇಡ್ಕರ್ ಮತ್ತು ರಾಷ್ಟ್ರಕವಿ ಕುವೆಂಪು ಅವರು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯಾತೀತತೆ ಮತ್ತು ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಡೆಗಣಿಸಿರುವುದು ಪಠ್ಯ ಪನರ್ ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ. ಪಠ್ಯ ಪುಸ್ತಕಗಳಲ್ಲಿನ ಅಸಂಖ್ಯಾತ ದೋಷ ಮತ್ತು ಅನ್ಯಾಯಗಳನ್ನು ಕೇವಲ ತಪ್ಪೋಲೆ ಅಥವಾ ಪ್ರತ್ಯೇಕ ಪುಟಗಳ ಮುದ್ರಣದಿಂದ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಪುನರ್ ಪರಿಷ್ಕರಣೆಯ ಪಠ್ಯ ಪುಸ್ತಕಗಳನ್ನು ಹಿಂಪಡೆಯಬೇಕು. ಹಿಂದೆ ಬರಗೂರು ರಾಮಚಂದ್ರ ಅವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಗಳನ್ನೇ ಮುಂದುವರಿಸುವುದು ಸೂಕ್ತವೆಂದು ನನ್ನ ಅಭಿಪ್ರಾಯ ಅಂತ ಪತ್ರದಲ್ಲಿ ವಿವರಿಸಿದ್ದರು.

ಇನ್ನು ದೇವೇಗೌಡರ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರು ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಬರೆದ ಪತ್ರದ ಬಗ್ಗೆ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ ಅಂತ ಹೇಳಿದ್ದಾರೆ.

ಆಕ್ಷೇಪ ಎತ್ತಿದ 15 ಸಾಹಿತಿಗಳ ಪೈಕಿ 9 ಸಾಹಿತಿಗಳ ಪಾಠವೇ ಇರಲಿಲ್ಲ

ಆಕ್ಷೇಪ ಎತ್ತಿದ 15 ಸಾಹಿತಿಗಳ ಪೈಕಿ 9 ಸಾಹಿತಿಗಳ ಪಾಠವೇ ಇರಲಿಲ್ಲ

ಪತ್ರಿಕೆಗಳಲ್ಲಿ ಬಂದ ವಿಚಾರ, ಸಾಹಿತಿಗಳು ಎತ್ತಿರುವ ಆಕ್ಷೇಪಗಳಿಗೆ ಉತ್ತರ ನೀಡಿದ್ದೇವೆ. ಪದೇ ಪದೇ ಉತ್ತರ ನೀಡುವ ಅಗತ್ಯವೂ ಇಲ್ಲ. ಆಕ್ಷೇಪ ಎತ್ತಿದ 15 ಸಾಹಿತಿಗಳ ಪೈಕಿ 9 ಸಾಹಿತಿಗಳ ಪಾಠವೇ ಇರಲಿಲ್ಲ ಎಂದು ನಾಗೇಶ್ ಅವರು ತಿಳಿಸಿದರು.

English summary
Karnataka text book row. Education Minister BC Nagesh reaction, Baraguru Ramachandrappa made 150 mistakes in 167 pages. There are only 17 mistakes in our time. We have corrected the mistakes in the text book,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X